Wednesday, January 14, 2026
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-01-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-01-2026)

Today's Horoscope

ನಿತ್ಯ ನೀತಿ : `ನಿರಂತರವಾಗಿ ಪ್ರಕಾಶಿಸುವ ಸೂರ್ಯನನ್ನು ನೋಡಿ ಕತ್ತಲು ಸಹ ಭಯಪಡುತ್ತದೆ ಹಾಗೆ ಪ್ರತಿದಿನವೂ ಕಷ್ಟಪಡುವ ವ್ಯಕ್ತಿಯನ್ನು ನೋಡಿ ಸೋಲು ಕೂಡ ಭಯಪಡುತ್ತದೆ’. – ಸ್ವಾಮಿ ವಿವೇಕಾನಂದ

ಪಂಚಾಂಗ : ಗುರುವಾರ, 15-01-2026

ವಿಶ್ವಾವಸುನಾಮ ಸಂವತ್ಸರ / ಆಯನ:ದಕ್ಷಿಣಾಯಣ / ಋತು: ಸೌರ ಶಿಶಿರ / ಮಾಸ: ಪುಷ್ಯ / ಪಕ್ಷ: ಕೃಷ್ಣ / ತಿಥಿ: ದ್ವಾದಶಿ / ನಕ್ಷತ್ರ: ಜ್ಯೇಷ್ಠಾ / ಯೋಗ: ವೃದ್ಧಿ / ಕರಣ: ಕೌಲವ
ಸೂರ್ಯೋದಯ – 06.46
ಸೂರ್ಯಾಸ್ತ – 6.12
ರಾಹುಕಾಲ – 1.30- 3.00
ಯಮಗಂಡ ಕಾಲ – 6.00-7.30
ಗುಳಿಕ ಕಾಲ – 9.00-10.30

ರಾಶಿಭವಿಷ್ಯ :

ಮೇಷ: ನಿಮ್ಮ ಇಚ್ಛೆಗಳು ಬಹುಪಾಲು ಫಲಿಸುವ ದಿನವಾಗಿದೆ. ವ್ಯವಹಾರದಲ್ಲಿ ಲಾಭ ಸಿಗಲಿದೆ.
ವೃಷಭ: ಅನೇಕ ನಕಾರಾತ್ಮಕ ಆಲೋಚನೆಗಳು ಬರ ಬಹುದು. ಕೆಲಸ ಬಿಡುವ ಮನಸ್ಸು ಕೂಡ ಮಾಡಬಹುದು.
ಮಿಥುನ: ವಿದ್ಯಾರ್ಥಿಗಳಿಗೆ ಮಾನಸಿಕ ಅಸ್ಥಿರತೆ ಕಾಡಲಿದೆ. ದೂರ ಪ್ರಯಾಣ ಮಾಡುವುದು ಬೇಡ.

ಕಟಕ: ಶಾಂತ ಮನಸ್ಸಿನಿಂದ ನಿಮ್ಮ ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಪ್ರಯತ್ನಿಸಿ.
ಸಿಂಹ: ಕುಟುಂಬದಲ್ಲಿ ಪರಿಸ್ಥಿತಿಗಳು ಏರಿಳಿತಗಳಿಂದ ಕೂಡಿರುತ್ತವೆ. ವೈವಾಹಿಕ ಜೀವನದ ಬಗ್ಗೆ ಗಮನ ಕೊಡಿ
ಕನ್ಯಾ: ಕೆಲಸದ ಹೊರೆ ಹೆಚ್ಚಿ ದ್ದರೆ, ಭಯಪಡುವ ಬದಲು ಕಷ್ಟಪಟ್ಟು ಕೆಲಸ ಮಾಡಿ. ಮುಂಜಾಗ್ರತೆ ವಹಿಸಿ.

ತುಲಾ: ಹಣದ ವಿಚಾರದಲ್ಲಿ ಮನೆಯ ಹಿರಿಯರೊಂದಿಗೆ ವಾಗ್ವಾದ ನಡೆಯಬಹುದು.
ವೃಶ್ಚಿಕ: ಸರ್ಕಾರಿ ಕೆಲಸ ಮಾಡುವವರು ಕೆಲವು ದೊಡ್ಡ ಸವಾಲುಗಳನ್ನು ಎದುರಿಸಬೇಕಾಗಬಹುದು.
ಧನುಸ್ಸು: ಕೃಷಿ ಕ್ಷೇತ್ರದ ಅಭಿವೃದ್ಧಿಗೆ ವಿನೂತನ ರೀತಿಯಲ್ಲಿ ಪ್ರಯತ್ನ ಮಾಡುವಿರಿ.

ಮಕರ: ಖರ್ಚುಗಳು ಸ್ವಲ್ಪ ಹೆಚ್ಚಾಗಬಹುದು, ಆದರೆ ಯಾವುದೇ ದೊಡ್ಡ ಸಮಸ್ಯೆ ಇರುವುದಿಲ್ಲ.
ಕುಂಭ: ಸಣ್ಣ ವ್ಯಾಪಾರಸ್ಥರಿಗೆ ಅನುಕೂಲಕರ ದಿನ. ಲಾಭ ಗಳಿಸಲು ಹಲವು ಅವಕಾಶಗಳು ಒದಗಲಿವೆ.
ಮೀನ: ಸರ್ಕಾರಿ ಉದ್ಯೋಗಿಗಳಿಗೆ ನೆಮ್ಮದಿ. ಪಾಲುದಾರಿಕೆ ವ್ಯವಹಾರದಲ್ಲಿ ಸಾಮಾನ್ಯ ಲಾಭ.

RELATED ARTICLES

Latest News