ನಿತ್ಯ ನೀತಿ : ದೇವರು ವರವನ್ನು ಕೊಡುವುದಿಲ್ಲ, ಶಾಪವನ್ನೂ ಕೊಡುವುದಿಲ್ಲ , ಅವಕಾಶವನ್ನು ಮಾತ್ರ ಕೊಡುತ್ತಾನೆ. ಅದನ್ನು ವರವೋ, ಶಾಪವೋ ಆಗಿ ಪರಿವರ್ತಿಸುವುದು ನಮ್ಮ ಕೈಯಲ್ಲಿದೆ.
ಶನಿವಾರ ಪಂಚಾಂಗ – 20-12-2025
ವಿಶ್ವಾವಸುನಾಮ ಸಂವತ್ಸರ / ಆಯನ:ದಕ್ಷಿಣಾಯನ / ಋತು: ಸೌರ ಹೇಮಂತ / ಮಾಸ: ಮಾರ್ಗಶಿರ / ಪಕ್ಷ: ಕೃಷ್ಣ / ತಿಥಿ: ಅಮಾವಾಸ್ಯೆ / ನಕ್ಷತ್ರ: ಮೂಲಾ / ಯೋಗ: ಗಂಡ / ಕರಣ: ಕಿಂಸ್ತುಘ್ನ
ಸೂರ್ಯೋದಯ – ಬೆ.06.36
ಸೂರ್ಯಾಸ್ತ – 5.58
ರಾಹುಕಾಲ – 9.00-10.30
ಯಮಗಂಡ ಕಾಲ – 1.30-3.00
ಗುಳಿಕ ಕಾಲ – 6.30-7.30
ರಾಶಿಭವಿಷ್ಯ :
ಮೇಷ: ನಿಮ್ಮ ಉತ್ತಮ ಕೆಲಸಕ್ಕೆ ಎಲ್ಲೆಡೆ ಪ್ರಶಂಸೆ, ಶ್ಲಾಘನೆ ವ್ಯಕ್ತವಾಗಲಿದೆ. ಶುಭದಿನ.
ವೃಷಭ: ನಿಮ್ಮ ಮಾತೇ ಸರಿ ಎಂದು ಎಲ್ಲೂ ವಾದ ಮಾಡಲು ಹೋಗಬೇಡಿ. ಸಮಾಧಾನದಿಂದಿರಿ.
ಮಿಥುನ: ಸಮಾಧಾನದಿಂದ ಕಾರ್ಯ ನಿರ್ವಹಿಸಿ. ಗೆಲುವು ನಿಮಗೆ ಕಟ್ಟಿಟ್ಟ ಬುತ್ತಿ ಎಂಬುದು ಅರಿವಿರಲಿ.
ಕಟಕ: ಉದ್ವೇಗದಿಂದ ಮಾತನಾಡದಿರಿ. ಹೆಚ್ಚಿನ ತಾಳ್ಮೆಯಿಂದ ನಿಮ್ಮ ಗುರಿ ತಲುಪಲು ಸಹಕಾರಿಯಾಗಲಿದೆ.
ಸಿಂಹ: ಯಾರದ್ದೋ ಜಗಳಕ್ಕೆ ನಿಮಗೆ ತೊಂದರೆಯಾಗುವ ಸಾಧ್ಯತೆ. ಎಚ್ಚರಿಕೆ ವಹಿಸಿ.
ಕನ್ಯಾ: ಕೆಟ್ಟ ಜನರಿಂದ ಮಾನಸಿಕ ಆಘಾತಕ್ಕೆ ಒಳಗಾಗುವ ಸಾಧ್ಯತೆ ಇದೆ.
ತುಲಾ: ದೂರದ ಬಂಧುಗಳ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣವಿರಲಿದೆ.
ವೃಶ್ಚಿಕ: ಭೂ ವ್ಯವಹಾರದಲ್ಲಿ ತೊಡಗಿಸಿಕೊಂಡವರಿಗೆ ಸ್ವಲ್ಪ ನಷ್ಟ ಸಂಭವಿಸಲಿದೆ.
ಧನುಸ್ಸು: ಧಾರ್ಮಿಕ ಆಚರಣೆಗಳಿಂದ ನೆಮ್ಮದಿಸಿಗಲಿದೆ. ಮಾನಸಿಕ ಒತ್ತಡ ನಿವಾರಣೆಯಾಗಲಿದೆ.
ಮಕರ: ಆರೋಗ್ಯವು ಉತ್ತಮವಾಗಿರುತ್ತದೆ. ಆದರೂ ಆರೋಗ್ಯವಾಗಿಲ್ಲ ಎಂಬ ಭಾವನೆ ನಿಮ್ಮಲ್ಲಿರುತ್ತದೆ.
ಕುಂಭ: ಅನಾರೋಗ್ಯದಿಂದ ದೂರ ಪ್ರಯಾಣ ರದ್ದುಪಡಿಸಬೇಕಾಗಬಹುದು.
ಮೀನ: ಯಾವುದೇ ತಪ್ಪು ಕೆಲಸಗಳನ್ನು ಮಾಡುವುದನ್ನು ತಪ್ಪಿಸಿ.
