Sunday, September 15, 2024
Homeರಾಜ್ಯವಾಟ್ಸಾಪ್‌ ಸಂದೇಶ ನಂಬಿ ಖೆಡ್ಡಾಗೆ ಬಿದ್ದ ರೇಣುಕಾಸ್ವಾಮಿ

ವಾಟ್ಸಾಪ್‌ ಸಂದೇಶ ನಂಬಿ ಖೆಡ್ಡಾಗೆ ಬಿದ್ದ ರೇಣುಕಾಸ್ವಾಮಿ

How Renukaswamy trapped by Darshan Gang

ಬೆಂಗಳೂರು, ಸೆ.6– ಚಿತ್ರದುರ್ಗದ ರೇಣುಕಾಸ್ವಾಮಿ ಮತ್ತು ಪವಿತ್ರಾಗೌಡ ನಡುವೆ ನಡೆದ ವಾಟ್ಸಾಪ್‌ ಸಂದೇಶಗಳ ವಿವರಗಳನ್ನು ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆಂದು ತಿಳಿದುಬಂದಿದೆ.

ಇವರಿಬ್ಬರ ನಡುವೆ ಸುಮಾರು 65 ವಾಟ್ಸಾಪ್‌ ಸಂದೇಶಗಳು ರವಾನೆಯಾಗಿವೆ. ಆ ಪೈಕಿ ಅಶ್ಲೀಲ ಮೆಸೇಜ್‌ಗಳೂ ಇವೆ. ಈ ಎಲ್ಲ ಸಂದೇಶಗಳನ್ನೂ ಸಹ ರೇಣುಕಾಸ್ವಾಮಿ ಮತ್ತು ಪವಿತ್ರಾಗೌಡ ಹಾಗೂ ಉಳಿದ ಆರೋಪಿಗಳ ಮೊಬೈಲ್‌ಗಳಿಂದ ರಿಟ್ರೀವ್‌ ಮಾಡಿ ಎಫ್‌ಎಸ್‌‍ಎಲ್‌ನಿಂದ ಮಾಹಿತಿ ಪಡೆದುಕೊಂಡು ಚಾರ್ಜ್‌ಶೀಟ್‌ನಲ್ಲಿ ಸೇರಿಸಲಾಗಿದೆ.

ಮೊದಲು ಪವಿತ್ರಾಗೌಡ ಮತ್ತು ರೇಣುಕಾಸ್ವಾಮಿ ವಾಟ್ಸಾಪ್‌ ಚಾಟ್‌ ಮಾಡುತ್ತಿದ್ದರು. ತದನಂತರ ಪವಿತ್ರಾಗೌಡ ಈ ವಿಷಯವನ್ನು ದರ್ಶನ್‌ ಸ್ನೇಹಿತ ಪವನ್‌ಗೆ ಹೇಳಿದ್ದರು. ಪವನ್‌ ಪವಿತ್ರಾಗೌಡ ಹೆಸರಿನಲ್ಲಿ ವಾಟ್ಸಾಪ್‌ ಮಾಡಿ ಖೆಡ್ಡಾಗೆ ಬೀಳಿಸಿಕೊಂಡು ಆತನ ಊರು, ವಾಸಸ್ಥಳದ ವಿಳಾಸ ಪತ್ತೆಹಚ್ಚಿದನು.

ನಂತರ ಈ ವಿಷಯವನ್ನು ದರ್ಶನ್‌ಗೆ ತಿಳಿಸಿದ್ದಾನೆ. ದರ್ಶನ್‌ ಆತನನ್ನು ಅಪಹರಿಸಲು ಸಂಚು ರೂಪಿಸಿದ್ದರು. ಅದರಂತೆ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಅಪಹರಿಸಿಕೊಂಡು ನಗರದ ಪಟ್ಟಣಗೆರೆ ಶೆಡ್‌ಗೆ ಕರೆತಂದಿದ್ದರು.

RELATED ARTICLES

Latest News