Sunday, September 15, 2024
Homeಬೆಂಗಳೂರುಸ್ನೇಹಿತೆ ನೋಡಲು ಬೆಂಗಳೂರಿಗೆ ಬಂದು ಸಿಕ್ಕಿಬಿದ್ದ ನಕ್ಸಲೇಟ್

ಸ್ನೇಹಿತೆ ನೋಡಲು ಬೆಂಗಳೂರಿಗೆ ಬಂದು ಸಿಕ್ಕಿಬಿದ್ದ ನಕ್ಸಲೇಟ್

Naxalite who came to Bangalore to see his friend and was caught

ಬೆಂಗಳೂರು, ಸೆ.6- ಸ್ನೇಹಿತೆ ನೋಡಲು ನಗರಕ್ಕೆ ಬಂದಿದ್ದ ಉತ್ತರ ಭಾರತದ ಕುಖ್ಯಾತ ನಕ್ಸಲೈಟ್ ಪೊಲೀಸರ ಬಲೆಗೆ ಬಿದ್ದಿದ್ದಾನೆ.ಬಂಧಿತ ನಕ್ಸಲೈಟ್ನನ್ನು ಹರಿಯಾಣ ಮೂಲದ ಅನಿರುದ್‌್ಧ ಎಂದು ಗುರುತಿಸಲಾಗಿದೆ.

ಹರಿಯಾಣದಲ್ಲಿ ನಕ್ಸಲೈಟ್ ಆಗಿ ಗುರುತಿಸಿಕೊಂಡಿದ್ದ ಅನಿರುದ್‌್ಧ ನಗರಕ್ಕೆ ಆಗಮಿಸಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಸಿಬಿಯ ಎಟಿಸಿ ಪೊಲೀಸರು ದಾಳಿ ನಡೆಸಿ ಆತನನ್ನು ಬಂಧಿಸಿದ್ದಾರೆ.

ಅನಿರುದ್‌್ಧ ನಗರದಲ್ಲಿ ಯಾರನ್ನು ಭೇಟಿಯಾಗಲು ಬಂದಿದ್ದ, ಅವರಿಗೂ ನಕ್ಸಲರಿಗೂ ಸಂಬಂಧವಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಬಂಧಿತನ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ.

ಅನಿರುದ್‌್ಧನನ್ನು ಮಡಿವಾಳ ಟೆಕ್ನಿಕಲ್ ಸೆಲ್ನಲ್ಲಿ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದು, ಅಗತ್ಯ ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ.ಈತ ನಿಷೇಧಿತ ಬರಹಗಳನ್ನು ಪ್ರಸಾರ ಮಾಡುತ್ತಿದ್ದ ಎಂಬ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿದ್ದು, ಆತನ ಬಳಿ ಇದ್ದ ಎರಡು ಬ್ಯಾಗ್, ಪೆನ್ಡ್ರೈವ್, ಟ್ಯಾಬ್ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

RELATED ARTICLES

Latest News