Thursday, September 19, 2024
Homeಅಂತಾರಾಷ್ಟ್ರೀಯ | Internationalಶಾಲಾ ವಸತಿ ನಿಲಯಕ್ಕೆ ಬೆಂಕಿಬಿದ್ದು 17 ವಿದ್ಯಾರ್ಥಿಗಳು ಸಾವು

ಶಾಲಾ ವಸತಿ ನಿಲಯಕ್ಕೆ ಬೆಂಕಿಬಿದ್ದು 17 ವಿದ್ಯಾರ್ಥಿಗಳು ಸಾವು

Kenya School Dormitory Fire Kills 17 Students And Injures 13

ನೈರೋಬಿ, ಸೆ.6 – ಕೀನ್ಯಾದಲ್ಲಿ ಶಾಲಾ ವಸತಿ ನಿಲಯದಲ್ಲಿ ಬೆಂಕಿ ಕಾಣಿಸಿಕೊಂಡು 17 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ ಎಂದು ಪೊಲೀಸರು ತಿಳಿಸಿದ್ದಾರೆ.ನೈರಿ ಕೌಂಟಿಯ ಹಿಲ್ಸೈಡ್ ಎಂಡರಾಶಾ ಪ್ರಾಥಮಿಕದಲ್ಲಿ ಕಳೆದ ರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು,ಸುಮಾರು 13 ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಕಿಗೆ ಕಾರಣ ಕುರಿತು ತನಿಖೆ ಮಾಡಲಾಗುತ್ತಿದೆ ,ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಪೊಲೀಸ್ ವಕ್ತಾರ ರೆಸಿಲಾ ಒನ್ಯಾಂಗೊ ತಿಳಿಸಿದ್ದಾರೆ. ಅಶಾಂತಿಯ ಸಂದರ್ಭದಲ್ಲಿ ಕೆಲವು ವಿದ್ಯಾರ್ಥಿಗಳು ಬೆಂಕಿ ಹಚ್ಚಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ತಿಳಿದಿದೆ.ಕಳೆದ 2017 ರಲ್ಲಿ ರಾಜಧಾನಿ ನೈರೋಬಿಯದಲ್ಲಿ ಶಾಲೆಯೊಂದಕ್ಕೆ ಬೆಂಕಿ ಬಿದ್ದು 10 ಪ್ರೌಢಶಾಲಾ ವಿದ್ಯಾರ್ಥಿಗಳು ಸಾವನ್ನಪ್ಪಿದರು.

RELATED ARTICLES

Latest News