Sunday, September 15, 2024
Homeಸಂಪಾದಕೀಯ-ಲೇಖನಗಳುಭಾರತದ ವಿಶಿಷ್ಟ ನಾಯಕ-ವಿನಾಯಕ : ವಿಶೇಷ ಲೇಖನ

ಭಾರತದ ವಿಶಿಷ್ಟ ನಾಯಕ-ವಿನಾಯಕ : ವಿಶೇಷ ಲೇಖನ

Special Article on Ganesh Chaturthi

ಏಕದಂತ ಗಣಾಧ್ಯಕ್ಷ ಗಣಪತಿಯ ಹಬ್ಬವೆಂದರೆ ಜಾಗತಿಕ ಉತ್ಸವವಿದ್ದಂತೆ. ಭಾರತವೂ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳ ಇತಿಹಾಸ. ಪುರಾಣ, ಸಾಹಿತ್ಯಗಳಲ್ಲಿ ಗಣೇಶನಿಗೆ ಅತ್ಯುಚ್ಚ ಸ್ಥಾನವಿದೆ. ಭಾರತೀಯರಿಗೆ ವಿನಾಯಕನೆಂದರೆ ಆತಬಂಧು ಮಾತ್ರವಲ್ಲದೆ ಸ್ವಾತಂತ್ರ್ಯ ಸಂಗ್ರಾಮದ ರಾಷ್ಟ್ರಬಂಧುವೂ ಹೌದು.

ವಿದೇಶಿಯರ ಸಹಸ್ರಮಾನದ ಆಕ್ರಮಣಗಳಿಗೆಲ್ಲ ಸ್ವರಾಜ್ಯ ಮಂತ್ರದ ಮೂಲಕ ಉತ್ತರಿಸಿ. ವಿಜಯಪತಾಕೆಯೊಂದಿಗೆ ಗೆಲುವಿನ ಸಾರ್ಥಕತೆಯನ್ನು ಹೊಂದಲೆಂದೇ ಬಾಲಗಂಗಾಧರ ತಿಲಕರು ಆರಂಭಿಸಿದ ಗಣೇಶೋತ್ಸವ ದೇಶದ ದಿಶೆಯನ್ನು ಬದಲಾಯಿಸಿತು. ಸಾರ್ವಜನಿಕ ದೂರ್ವಾಂಕುರ ಸಮರ್ಪಣೆಯಿಂದ ಪ್ರಸನ್ನನಾದ ಕ್ಷಿಪ್ರಪ್ರಸಾದ, ಭರತ ವರ್ಷವನ್ನು ದಾಸ್ಯಸಂಕೋಲೆಗಳಿಂದ ವಿಮೋಚನೆಗೊಳಿಸಿದ್ದು ಇತಿಹಾಸ.ಗಣಪತಿ ಬಪ್ಪಾ ಮೋರಯಾ, ಮಂಗಲಮೂರ್ತಿ ಮೋರಯಾ ಎಂಬ ಪಾರ್ವತಿಸುತನ ನಾಮಸರಣೆಯೇ ಭಾರತೀಸುತರಲ್ಲಿ ತೇಜಸ್ಸನ್ನು ತುಂಬಿತ್ತು.

ಜಗತ್ತಿನ ಪ್ರಥಮ ಶಸ್ತ್ರಚಿಕಿತ್ಸೆಯೆಂದೇ ಕರೆಯಲ್ಪಡುವ ಆನೆಮೊಗದ ಗಣೇಶನ ಒಂದೊಂದು ಹೆಜ್ಜೆಯೂ ಅನುಕರಣೀಯ. ತನ್ನ ರಕ್ಷಣೆಗಾಗಿ ಮೃತ್ತಿಕೆಯಿಂದ ಬಾಲಕನನ್ನು ನಿರ್ಮಿಸಿದ ಪಾರ್ವತಿಗೆ ಯಾವ ತೊಂದರೆಯೂ ಆಗದಂತೆ. ಯೋಧನಂತೆ ಕರ್ತವ್ಯ ನಿರ್ವಹಿಸಿದ ಬಾಲಗಣೇಶ ಶಿವನನ್ನೇ ತಡೆದ. ಅಮನ ಅಪ್ಪಣೆಯಿಲ್ಲದೆ ಯಾರನ್ನೂ ಒಳಬಿಡೆನೆಂದು ಪಟ್ಟುಹಿಡಿದು ಸಾಕ್ಷಾತ್‌ ಕೈಲಾಸಾಧೀಶನಿಗೆ ಸವಾಲೆಸೆದಿದ್ದ. ಸಂಬಂಧಗಳು, ಇಷ್ಟಾನಿಷ್ಟಗಳೆಲ್ಲವೂ ಕರ್ತವ್ಯದ ಪರಿಧಿಯೊಳಗೆ ಬರಬಾರದು, ಅಕರ್ತವ್ಯಂನ ಕರ್ತವ್ಯಂ, ಕರ್ತವ್ಯ ಮೇವ ಕರ್ತವ್ಯಂ ಎಂಬ ಸದಾಚಾರಕ್ಕೆ ಬದ್ಧನಾಗಿ ಕಾಯಕಪ್ರೀತಿಯನ್ನು ಬೋಧಿಸಿದವನು ಗಣೇಶ.

ಪಾರ್ವತಿಯೊಮೆ ಗಣೇಶ, ಸುಬ್ರಹಣ್ಯನಿಗೆ ವಿಶ್ವ ಪ್ರದಕ್ಷಿಣೆಯ ಪಂಥವನ್ನು ಒಡ್ಡಿದ್ದಳಂತೆ. ಸಮಾರೋಪಾದಿಯಲ್ಲಿ ಸಿದ್ಧನಾದ ಸುಬ್ರಹಣ್ಯ ತನ್ನ ವಾಹನವನ್ನೇರಿ ಹೊರಟೇಬಿಟ್ಟ. ಮೂಷಿಕವಾಹನ ಗಜಾನನ ಹಾಗೇ ಸುಮನೆ ಕುಳಿತಿದ್ದ. ಕಾರ್ತಿಕೇಯನ ವಾಹನವೆಲ್ಲಿ, ತನ್ನದೆಲ್ಲಿ ಎಂಬ ನಿರಾಶೆಯಿಂದ ಆತ ಸುಮನಿದ್ದುದಲ್ಲ. ಮೇಲೆದ್ದು ಪಾರ್ವತಿ-ಪರಮೇಶ್ವರರಿಗೆ ಪ್ರದಕ್ಷಿಣೆಗೈದ.

ವಿಶ್ವಯಾನ ಮುಗಿಸಿ ಮರಳಿದ ಕಾರ್ತಿಕೇಯನಿಗೆ ಏಕದಂತ ಪ್ರಶ್ನೆಯಂತೆ ಭಾಸವಾದ. ಸ್ಪರ್ಧೆಯಲ್ಲಿ ಗಣೇಶ ಗೆದ್ದನೆಂದು ಪಾರ್ವತಿ ಘೊಷಿಸಿದಾಗ ಸ್ವಯಂ ಲಂಬೋದರನೇ, ಈ ಜಗತ್ತಿನಲ್ಲಿ ಅಪ್ಪ-ಅಮನಿಗಿಂತ ಮಿಗಿಲಾದ ಜಗತ್ತು ಇನ್ನೊಂದಿಲ್ಲ ಎಂದು ಗದ್ಗರಿಸಿದ.
ಹೆತ್ತ ತಾಯಿತಂದೆಯರ ಚಿತ್ತವ ನೋಯಿಸಿ ನಿತ್ಯ ದಾನವ ಮಾಡಿ ಫಲವೇನು ಎಂಬ ದಾಸರ ಮಾತುಗಳು ಮೊದಲು ಪ್ರಕಟವಾದದ್ದು ಗಣೇಶನ ಮೂಲಕವೇ. ಕೆಮಿದರೆಂದು, ಸೀನಿದರೆಂದು ವೃದ್ಧಾಶ್ರಮಕ್ಕೆ ಅರ್ಜಿ ಸಲ್ಲಿಸುವ ಹೈಫೈ-ವೈಫೈ ಮಕ್ಕಳಿಗೆ ಗಣೇಶನ ಬದುಕು ಸತ್ಪಥಕ್ಕೆ ಪ್ರೇರಣೆ.ವ್ಯಕ್ತಿಯನ್ನು ಸಮಾಜ ಗುರುತಿಸುವುದು, ಗೌರವಿಸುವುದು ಆತನ ಬಾಹ್ಯಾಡಂಬರ ಅಥವಾ ಅಲಂಕಾರಗಳಿಂದಲ್ಲ.

ಜೀವನದ ರೀತಿನೀತಿಗಳಿಂದ, ಮೇಧಾಶಕ್ತಿಯಿಂದ ಅದರಕ್ಕೆ ಪಾತ್ರವಾಗುವ ಸುಖವನುಭವಿಸಿದವನು ಗಣೇಶ. ಮೊರದಗಲದ ಕಿವಿ, ಕೋರೆಹಲ್ಲು, ಡೊಳ್ಳುಹೊಟ್ಟೆ, ಹೊಟ್ಟೆಗೊಂದು ಹಾವು, ಸವಾರಿಗೊಂದು ಪುಟ್ಟಗಾತ್ರದ ಇಲಿಯೊಂದಿಗೆ ಲಕ್ಷಶ್ಲೋಕಗಳ ಮಹಾಭಾರತದ ರಚನೆಗೆ ವ್ಯಾಸರಿಗೆ ಹೆಗಲಾದ ಗಣಪತಿ ಕರ್ತವ್ಯನಿಷ್ಠೆ, ತ್ಯಾಗ, ಸಂಯಮ, ಬದ್ಧತೆಗಳ ಸಂಗಮ. ಆತುರವಿಲ್ಲದ ನಿರ್ಣಯ, ಆಲಿಸುವ ತಾಳೆ, ಕೈಗೊಂಡ ಕಾರ್ಯದ ಯಶಸ್ಸಿಗಾಗಿ ಪರಿತಪಿಸುವ ವಿಶಾಲತೆ, ಸ್ವಾಭಿಮಾನದ ಗರ್ವದೊಂದಿಗೆ ಸಾವಿರಾರು ವರ್ಷಗಳ ಕಾಲ ಸಮಾಜಕ್ಕೆ ಆದರ್ಶಪ್ರಾಯನಾದ ಆಳುವವರಿಗೆ, ವೃದ್ಧರೆಂದು ದೂರುವ ಮಕ್ಕಳಿಗೆ, ಹಕ್ಕಿಗಾಗಿ ಬಡಿದು ಆಚರಿಸಬೇಕಾದುದನ್ನು ಮರೆತ ಮಂದಿಯ ಮನವನ್ನೆಲ್ಲ ಶ್ರೀ ಗಣೇಶ ಉಲ್ಲಸಿತಗೊಳಿಸಿ ಭಾರತದ ಜಗದ್ಗುರತ್ವಕ್ಕೆ ಕೋಟಿ ಕೋಟಿ ಕೈಗಳನ್ನು ಜೋಡಿಸುವ ಪ್ರೇರಣೆಯನ್ನು ನೀಡಲಿ. ಹಾಗಾದಾಗಲೇ ದಾರ್ಶನಿಕ ತಿಲಕರ ಆಶಯ ಪರಿಪೂರ್ಣವಾದೀತು.


ಗಣೇಶ ಚತುರ್ಥಿ ಒಂದು ಹಬ್ಬವೇ? ವ್ರತವೇ? ಪೂಜೆಯೇ ಅಥವಾ ಇದೊಂದು ಮನರಂಜನಾ ಕಾರ್ಯಕ್ರಮವೇ? ಬೆಂಗಳೂರಿನಂತಹ ಮೆಟ್ರೊ ನಗರಗಳಲ್ಲಿ ಈ ಬಗೆಗೊಂದು ಜಿಜ್ಞಾಸೆ ಇದ್ದೇ ಇದೆ. ಅನೇಕರಿಗೆ ನಿಜವಾದ ಅರ್ಥದಲ್ಲಿ ಗಣೇಶ ಚತುರ್ಥಿಎಂದರೆ ಏನು ಎನ್ನುವುದೇ ಗೊತ್ತಿಲ್ಲ. ಕೆಲವರು ಇದನ್ನು ಒಂದು ಹಬ್ಬ ಎಂದುಕೊಂಡರೆ, ಕೆಲವರು ಇದು ಉತ್ತಮವೆಂದೂ, ಇನ್ನು ಕೆಲವರು ಸಾರ್ವಜನಿಕ ಸಮಾರಂಭವೆಂದೂ ಅರ್ಥೈಸಿಕೊಂಡಂತಿದೆ.


ಆಧುನಿಕ ಜೀವನ ಶೈಲಿಯ ಪರಿಣಾಮದಿಂದಾಗಿ ಗಣೇಶ ವ್ರತದ ಆಚಾರ-ವಿಚಾರ, ವಿಧಾನ ಬದಲಾಗಿ ಹೋಗಿದೆ. ಪ್ರತಿಯೊಬ್ಬರೂ ಅವರವರ ಮನಸ್ಸಿಗೆ ಬಂದಂತೆ, ತಮ ಅನುಕೂಲಕ್ಕೆ ಆಗುವಂತೆ ಗಣೇಶನನ್ನು ಪೂಜಿಸುವ ಹಾಗೂ ವಿಸರ್ಜನೆ ಮಾಡುವ ಪದ್ಧತಿ ಬೆಳೆಯುತ್ತಿದೆ. ಆದರೆ ಗಣೇಶನ ವ್ರತಕ್ಕೆ ಅದರದೇ ಆದ ಒಂದು ಕ್ರಮವಿದೆ. ಅದನ್ನು ಮರೆತು ಮಾಡುವ ಹಬ್ಬ, ಒಂದು ಮನರಂಜನಾ ಉತ್ಸವವಷ್ಟೇ. ಹೀಗಾಗಿ ನಿಜವಾದ ಗಣೇಶ ಹಬ್ಬ ಎಂದರೇನು? ವಿಧಿ-ವಿಧಾನ ಹೇಗೆ ಎನ್ನುವುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.
ಮನೆ-ಮನ ಸ್ವಚ್ಛವಾಗಿರಲಿ


ವಿನಾಯಕನ ವ್ರತವನ್ನು ನಿರ್ವಹಿಸಬೇಕು ಎಂದು ಸಂಕಲ್ಪ ಮಾಡಿಕೊಂಡ ನಂತರ ಮನವನ್ನು-ಮನೆಯನ್ನು ಸ್ವಚ್ಛಗೊಳಿಸುವುದು. ಮನೆಯನ್ನು ತೊಳೆದು, ಒರೆಸಿ, ಸಾರಿಸಿ ಒಪ್ಪಗೊಳಿಸಿರೆ, ಮನವನ್ನು ಸದ್ಗುಣ, ಸದಾಚಾರ, ಉತ್ತಮ ನಡವಳಿಕೆ, ದೇವರ ಸರಣೆಯ ಮೂಲಕ ಒಪ್ಪಗೊಳಿಸಬೇಕು.


ನಿಮನೆಯ ಗಣೇಶ ನಿಮ ಕೈಯಿಂದಲೇ ಆಗಲಿ
ಶಾಸ್ತ್ರದ ಪ್ರಕಾರ ನಿಮ ಮನೆಗೆ ಗಣೇಶನನ್ನು ನೀವೇ, ನಿಮ ಕೈಯಾರೆ ಮಾಡಿಕೊಳ್ಳುವುದು ಬಹಳ ಶ್ರೇಷ್ಠ. ಭಾದ್ರಪದ ಶುಕ್ಲ ಚತುರ್ಥಿಯ (ಗಣೇಶಚತುರ್ಥಿ) ದಿನವೇ ಶಾಸಾ್ತ್ರನುಸಾರ, ಶಕ್ತ್ಯಾನುಸಾರ ಪ್ರೀತಿ-ಭಕ್ತಿಯಿಂದ ನಿಮ ಕೈಯಾರೆ ಗಣಪನ ಮೂರ್ತಿಯನ್ನು ತಯಾರಿಸಿಕೊಳ್ಳಬೇಕು.

ಅಂದು ಬೆಳಿಗ್ಗೆ ಸ್ನಾನ ಮಾಡಿ, ಮಡಿ ವಸ್ತ್ರ ತೊಟ್ಟು, ಶ್ರದ್ಧಾ ಭಕ್ತಿಯಿಂದ ಉತ್ತಮ ಸ್ಥಳದಿಂದ ಮಣ್ಣನ್ನು ತಂದು, ಅದನ್ನು ಹದಗೊಳಿಸಿ ಗಣೇಶನ ತಯಾರಿ ಮಾಡಿಕೊಳ್ಳಬೇಕು. ನಂತರ ಮನೆಗೆ ತಂದು ಶಕ್ತ್ಯಾನುಸಾರ ಪೂಜೆ ಮಾಡಬೇಕು. ಪೂಜೆ ಮಾಡುವರೇ ಆ ಕೋಣೆಯ ಕಸ ಗುಡಿಸಿ, ಸ್ವಚ್ಛ ಮಾಡಿರಬೇಕು ನಂತರ ಕೋಣೆಯಲ್ಲಿ ಧೂಪ ಹಾಕಬೇಕು. ದೇವರ ಪೂಜೆಯ ಉಪಕರಣಗಳನ್ನು ತೊಳೆದುಕೊಂಡಿರಬೇಕು. ಅವುಗಳ ಮೇಲೆ ತುಳಸಿ ಎಲೆಯಿಂದ ನೀರು ಸಿಂಪಡಿಸಿ ಪೂಜೆಗೆ ಅಣಿಗೊಳಿಸಬೇಕು. ಪೂಜೆಯನ್ನು ಆರಂಭಿಸುವ ಮೊದಲು ಮನೆಯಲ್ಲಿನ ಹಿರಿಯರಿಗೆ ಮತ್ತು ಪುರೋಹಿತರಿಗೆ ನಮಸ್ಕಾರ ಮಾಡಬೇಕು. ಪೂಜೆಗಾಗಿ ಮಣೆಯ ಮೇಲೆ ಕುಳಿತುಕೊಳ್ಳುವ ಮೊದಲು ನಿಂತುಕೊಂಡು ಭೂಮಿ ದೇವತೆಗೆ ಪ್ರಾರ್ಥನೆ ಮಾಡಬೇಕು. ಪೂಜೆಯಲ್ಲಿ ಶ್ಲೋಕ ಅಥವಾ ಮಂತ್ರವನ್ನು ಉಚ್ಛರಿಸಲು ಬರದವರು ಕೇವಲ ಱಶ್ರೀ ಮಹಾಗಣಪತಯೇ ನಮಃೞ ಎಂದು ನಾಮಮಂತ್ರ ಉಚ್ಛರಿಸಿದರೂ ಸಾಕು.

ಅಂದೇ ವಿಸರ್ಜಿಸುವುದೇ ಉತ್ತಮ
ಅವರವರ ಮನೆತನದ ಪದ್ಧತಿಗಳ ಅನುಸಾರ ಗಣೇಶ ಮೂರ್ತಿಯನ್ನು ಒಂದು ದಿನ. ಐದು, ಏಳು, ಒಂಭತ್ತು ಅಥವಾ ಹನ್ನೊಂದನೇ ದಿನ ವಿಸರ್ಜಿಸುವುದುಂಟು. ಆದರೆ ನಿಜವಾದ ಅರ್ಥದಲ್ಲಿ ಅದೇ ದಿನ ಪೂಜಿಸಿ, ಅದೇ ದಿನ ವಿಸರ್ಜನೆ ಮಾಡುವುದು ಶ್ರೇಷ್ಠ. ಏಕೆಂದರೆ ಹೆಚ್ಚು ದಿನ ಇಟ್ಟಂತೆ ಕೆಲ ಕಾರಣಗಳಿಂದ ಪೂಜೆಗೆ ದೋಷ ಉಂಟಾಗುವ ಸಂಭವವಿರುತ್ತದೆ. ಅಂದರೆ ಮನೆಯಲ್ಲಿರುವ ಪುಟ್ಟ ಮಕ್ಕಳು ಅಥವಾ ಸಾಕಿದ ಪ್ರಾಣಿಗಳು ಪೂಜಾ ಸ್ಥಳಕ್ಕೆ ಹೋಗಿ ಏನಾದರೂ ತೊಂದರೆ ಮಾಡುವುದು ಇತ್ಯಾದಿ.

ಶ್ರೀ ಗಣೇಶ ಪೂಜೆಯ ಮೂಲಕ ಸತ್ವಗುಣ ಸಂವರ್ಧನೆಯಾಗುವಂತೆ ಮಾಡಲು ಹಾಗೂ ಸಾಧನೆ ವೃದ್ಧಿಯಾಗಲು ಗಣೇಶೋತ್ಸವದ ಅಷ್ಟೂ ದಿನ ಪೂಜೆಯಲ್ಲಿ ಕುಟುಂಬದ ಎಲ್ಲ ಸದಸ್ಯರು ಒಟ್ಟಾಗಿ ಕುಲಾಚಾರಕ್ಕನುಸಾರ ಪೂಜೆ. ಅರ್ಚನೆ ಮಾಡಬೇಕಾಗುತ್ತದೆ. ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಗಣೇಶನಿಗೆ ಪೂಜೆ ಮಾಡಬೇಕು. ಮನೆಯ ಎಲ್ಲ ಸದಸ್ಯರೂ ಸೇರಿ ಆರತಿ ಮಾಡಬೇಕು. ಇದು ಇಂದಿನ ಮೆಟ್ರೊ ನಗರದ ಕುಟುಂಬಗಳಲ್ಲಿ ತೀರಾ ಕಷ್ಟ. ಹೀಗಾಗಿ ಒಂದು ದಿನ ಗಣಪನ ವ್ರತ ಮಾಡಿ. ಅಂದೇ ವಿಸರ್ಜನೆ ಮಾಡುವುದು ಉತ್ತಮ.
-ಡಾ. ಗುರುರಾಜ ಪೋಶೆಟ್ಟಿಹಳ್ಳಿ, ಸಂಸ್ಕೃತಿ ಚಿಂತಕರು

RELATED ARTICLES

Latest News