Friday, May 24, 2024
Homeರಾಜ್ಯತೋಟದ ಮನೆಯ ತಲೆ ಬುರುಡೆಗಳನ್ನಿಟ್ಟು ಪೂಜೆ ಮಾಡುತ್ತಿದ್ದ ವ್ಯಕ್ತಿ ವಶಕ್ಕೆ

ತೋಟದ ಮನೆಯ ತಲೆ ಬುರುಡೆಗಳನ್ನಿಟ್ಟು ಪೂಜೆ ಮಾಡುತ್ತಿದ್ದ ವ್ಯಕ್ತಿ ವಶಕ್ಕೆ

ಬಿಡದಿ ,ಮಾ.11- ಸ್ಮಶಾನದಲ್ಲಿ ಪೂಜೆ ಮಾಡಿ ತೋಟದ ಮನೆಯೊಂದರಲ್ಲಿ ತಲೆ ಬುರುಡೆಗಳನಿಟ್ಟುಕೊಂಡಿದ್ದ ಇಲ್ಲಿನ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೋಗನಹಳ್ಳಿ ಗ್ರಾಮದ ತೋಟದ ಮನೆಯೊಂದರಲ್ಲಿ 25 ಮನವರ ತಲೆಬುರುಡೆಗಳು ಪತ್ತೆಯಾಗಿದ್ದು ಈ ಸಂಬಂಧ ಬಲರಾಮ್ ಎಂಬ ವ್ಯಕ್ತಿ ವಶಕ್ಕೆ ಪಡೆದಿದ್ದಾರೆ.

ಕಳೆದ ರಾತ್ರಿ ಸ್ಮಶಾನದಲ್ಲಿ ಯಾರೂ ಪೂಜೆ ಮಾಡುತ್ತಿದ್ದದನ್ನು ನೋಡಿದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಬಂದ ಪೊಲೀಸರು ಬಲರಾಮ್‍ಹೊರಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಈತ ತಲೆ ಬುರುಡೆ ಸಂಗ್ರಹ ಮಾಡುತ್ತಿರುವ ಗಂಬೀರ ಆರೋಪ ಕೇಳಿ ಬಂದಿದೆ. ತಲೆ ಬುರಡೆಗಳನ್ನು ಸಂಗ್ರಹಿಸಿ ಅವುಗಳಿಂದ ಮಾಟ-ಮಂತ್ರ ಮಾಡುತ್ತಾನೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಸಾರ್ವಜನಿಕರ ದೂರಿನ ಮೇರೆಗೆ ಸ್ಮಶಾನಕ್ಕೆ ಬಂದ ಬಿಡದಿ ಪೊಲೀಸರು ವಿಚಾರಣೆ ನಡೆಸಿದಾಗ ತನ ತೋಟದ ಮನೆಯಲ್ಲಿ ಅನೇಕ ಮಾನವರ ತಲೆ ಬುರಡೆಗಳು ಪತ್ತೆಯಾಗಿವೆ. ನನ್ನ ತಾತನ ಕಾಲದಿಂದಲೂ ಬುರುಡೆ ಪೂಜೆ ಮಾಡುತ್ತಾ ಬಂದಿದ್ದೇವೆ ಎಂದು ಬಲರಾಮ್ ತಿಳಿಸಿದ್ದು ವಿಚಾರಣೆ ಮುಂದುವರೆದಿದೆ.

RELATED ARTICLES

Latest News