Thursday, September 19, 2024
Homeಬೆಂಗಳೂರುಪತ್ನಿ ಕೊಂದು ಫೇಸ್‌‍ಬುಕ್‌ನಲ್ಲಿ ವಿಡಿಯೋ ಮಾಡಿ ಕ್ರೌರ್ಯ ಮೆರೆದಿದ್ದ ಪತಿ ಆತಹತ್ಯೆ

ಪತ್ನಿ ಕೊಂದು ಫೇಸ್‌‍ಬುಕ್‌ನಲ್ಲಿ ವಿಡಿಯೋ ಮಾಡಿ ಕ್ರೌರ್ಯ ಮೆರೆದಿದ್ದ ಪತಿ ಆತಹತ್ಯೆ

ಬೆಂಗಳೂರು, ಆ.7– ಪತ್ನಿಯನ್ನು ಭೀಕರವಾಗಿ ಕೊಂದು ನಂತರ ಫೇಸ್‌‍ಬುಕ್‌ ಲೈವ್‌ ಮಾಡಿ ಕ್ರೂರತೆ ಮೆರೆದಿದ್ದ ಪತಿ ಕೋಲಾರದ ತನ್ನ ದೊಡ್ಡಮನ ಮನೆಯ ಕಟ್ಟಡದಿಂದ ಜಿಗಿದು ಆತಹತ್ಯೆ ಮಾಡಿಕೊಂಡಿದ್ದಾನೆ. ಸಿದ್ದಾಪುರದ ನಿವಾಸಿ ತಬರೇಜ್‌ ಪಾಷ ಆತಹತ್ಯೆಗೆ ಶರಣಾದ ಕೊಲೆ ಆರೋಪಿ.

ಕಳೆದ ಏಳು ವರ್ಷಗಳ ಹಿಂದೆ ಸಿದ್ದಾಪುರದ ತಬರೇಜ್‌ನನ್ನು ಚಾಮರಾಜಪೇಟೆಯ ಸೈಯಿದಾ ಫಾಜೀಲ್‌ ಫಾತಿಮಾ ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.ಕೌಟುಂಬಿಕ ಕಲಹದಿಂದ ನೊಂದಿದ್ದ ಸೈಯಿದಾ ಫಾಜೀಲ್‌ ಫಾತೀಮಾ(34) ತನ್ನಿಬ್ಬರು ಮಕ್ಕಳನ್ನು ಕರೆದುಕೊಂಡು ಎರಡು ವರ್ಷದ ಹಿಂದೆ ಚಾಮರಾಜಪೇಟೆಯಲ್ಲಿನ ತನ್ನ ತವರು ಮನೆ ಸೇರಿದ್ದರು.

ಈ ನಡುವೆ ಆ. 2ರಂದು ಬೆಳಗ್ಗೆ 8.30ರ ಸುಮಾರಿನಲ್ಲಿ ಮಕ್ಕಳು ಶಾಲೆಗೆ ಹೋಗುವುದನ್ನೇ ಕಾದಿದ್ದ ಆರೋಪಿ ತಬರೇಜ್‌ ಅತ್ತೆ ಮನೆಯೊಳಗೆ ಹೋಗಿ ಪತ್ನಿ ಜೊತೆ ಜಗಳವಾಡಿ ಏಕಾಏಕಿ ಚಾಕುವಿನಿಂದ ಮನಬಂದಂತೆ ಅತ್ತೆಯ ಎದುರಿಗೇ ಇರಿದು ಕೊಲೆ ಮಾಡಿ ಫೇಸ್‌‍ಬುಕ್‌ ಲೈವ್‌ಗೆ ಬಂದು ಪತ್ನಿ ಮತ್ತು ಅತ್ತೆಯನ್ನು ನಿಂದಿಸಿ ಲೈವ್‌ ಮಾಡಿ ನಂತರ ತಾನೂ ಸಾಯುವುದಾಗಿ ಹೇಳಿ ಪರಾರಿಯಾಗಿದ್ದನು.

ಹಾಡಹಾಗಲೇ ಮಹಿಳೆ ಕೊಲೆ ಸುದ್ದಿ ತಿಳಿದು ಸುತ್ತಮುತ್ತಲ ನಾಗರಿಕರು ಬೆಚ್ಚಿಬಿದ್ದಿದ್ದರು. ಸುದ್ದಿ ತಿಳಿದ ಚಾಮರಾಜಪೇಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿ ತಬರೇಜ್‌ ಪಾಷನಿಗಾಗಿ ಹುಡುಕಾಟ ನಡೆಸುತ್ತಿದ್ದರು.

ಆರೋಪಿ ತಬರೇಜ್‌ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡಿದ್ದರಿಂದ ಆತನ ಲೊಕೇಶನ್‌ ಪತ್ತೆಯಾಗಿರ ಲಿಲ್ಲ. ಪತ್ನಿಯ ಕೊಲೆ ನಂತರ ಆರೋಪಿ ಕೋಲಾರದಲ್ಲಿ ತಲೆಮರೆಸಿಕೊಂಡಿ ದ್ದನು.ನಿನ್ನೆ ಕೋಲಾರ ಗ್ರಾಮಾಂತರ ಪೊಲೀಸ್‌‍ ಠಾಣಾ ವ್ಯಾಪ್ತಿಯ ಜೂಹಳ್ಳಿಯಲ್ಲಿನ ತನ್ನ ದೊಡ್ಡಮನ ಮನೆಗೆ ಹೋಗಿದ್ದನು.

ಪೊಲೀಸರು ಹುಡುಕುತ್ತಿರು ವುದನ್ನು ತಿಳಿದು ತನ್ನನ್ನು ಬಂಧಿಸಲು ಕೋಲಾರಕ್ಕೆ ಪೊಲೀಸರು ಬರಬಹುದೆಂದು ತಬರೇಜ್‌ ಹೆದರಿ ನಿನ್ನೆ ಬೆಳಗ್ಗೆ 7.30ರ ಸುಮಾರಿನಲ್ಲಿ 12 ಅಡಿ ಎತ್ತರದ ಕಟ್ಟಡದಿಂದ ಜಿಗಿದು ಆತಹತ್ಯೆಗೆ ಯತ್ನಿಸಿದ್ದಾನೆ.

ಗಂಭೀರ ಗಾಯಗೊಂಡಿದ್ದ ತಬರೇಜ್‌ನನ್ನು ಆಸ್ಪತ್ರೆಗೆ ದಾಖಲಿಸಿದ್ದರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಮೃತದೇಹ ಹಸ್ತಾಂತರಿಸಿದ್ದಾರೆ.

ಆರೋಪಿ ತಬರೇಜ್‌ ಈ ಹಿಂದೆ ಕಾಟನ್‌ಪೇಟೆಯ ಸರಗಳ್ಳತನ ಪ್ರಕರಣದ ಆರೋಪಿಯಾಗಿದ್ದನು.ಇದೀಗ ಅಪ್ಪ- ಅಮ ಇಲ್ಲದೆ ಇಬ್ಬರು ಮಕ್ಕಳು ತಬ್ಬಲಿಗಳಾಗಿದ್ದಾರೆ.

RELATED ARTICLES

Latest News