ಬೆಂಗಳೂರು. ಮಾ.21 : ಉದ್ಯಾನನಗರಿ ಬೆಂಗಳೂರಿನಲ್ಲಿ ಇತ್ತಿಚೆಗೆ ಮಹಿಳೆಯರಿಗೆ ರಕ್ಷಣೆ ಇದಲ್ಲದಂತಾಗಿದ್ದು ಪ್ರತಿ ನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಮಹಿಳೆಯರು ಹಾಗೂ ಯುವತಿಯರು ತೊಂದರೆ ಅನುಭವಿಸಿತ್ತಾ ಆತಂಕದಲ್ಲಿ ಜೀವನ ಸಾಗಿಸುವಂತಾಗಿದೆ.
ಇದೆ 17 ರಂದು ಜಾಲಹಳ್ಳಿಯ ಮೆಟ್ರೋ ರೈಲು ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಯೊಬ್ಬ ಮಹಿಳಾ ಪ್ರಯಾಣಿಕರೊಬ್ಬರಿಗೆ ಸನ್ನೆ ಮೂಲಕ ಕಿರುಕುಳ ನೀಡಿದ ಬೆನ್ನಲ್ಲೆ ಮನೆಯ ಬಳಿ ವ್ಯಕ್ತಿಯೊಬ್ಬ ಹಿಂಬದಿಯಿಂದ ಬಂದು ಮಹಿಳೆಯನ್ನು ಸ್ಪರ್ಶಿಸಿ ದುರ್ವರ್ತನೆ ತೋರಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹೊರಗಡೆ ಹೋಗಿದ್ದ ಮಹಿಳೆ ವಾಪಸ್ ಬಂದು ಮನೆಯ ಗೇಟ್ ತೆಗೆಯುವಾಗ ಏಕಾಏಕಿ ನುಗ್ಗಿದ ಅನಾಮಧೇಯ ವ್ಯಕ್ತಿ ನನ್ನನ್ನು ಹಿಂದಿನಿಂದ ತಬ್ಬಿ ಸ್ಪರ್ಶಿಸಿ ಪರಾರಿಯಾಗಿದ್ದಾನೆ ಎಂದು ನೊಂದ ಮಹಿಳೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ನೋವನ್ನು ತೋಡಿಕೊಂಡಿದ್ದಾರೆ.
ಕಳೆದ 19 ರಂದು ಈ ಕಹಿ ಘಟನೆ ನಡೆದಿದ್ದು ಇದರಿಂದ ಭಾರಿ ಮುಜುಗರಕ್ಕೀಡಾಗಿದ್ದ ಮಹಿಳೆ ಕಿರುಕುಳದ ವಿಡಿಯೋವನ್ನು ಸಹ ಪೊಸ್ಟ್ ಮಾಡಿದ್ದಾರೆ ಮಹಿಳೆ ರೆಕಾರ್ಡ್ ಮಾಡಿರುವ ವಿಡಿಯೋದಲ್ಲಿ ವ್ಯಕ್ತಿಯ ಮುಖ ವನ್ನು ಮುಚ್ಚಿಕೊಳ್ಳುತ್ತಿರುವುದು ಕಂಡುಬಂದಿದೆ.
ತನಗಾದ ಕಿರುಕುಳ ಬೇರೆ ಮಹಿಳೆಯರಿಗೆ ಆಗುವುದು ಬೇಡ ಎಚ್ಚರದಿಂದಿರಿ ಅಪರಿಚಿತ ವ್ಯಕ್ತಿಗಳಿಂದ ಸಾಕಷ್ಟು ದೂರವಿರಿ ಒಂದು ವೇಳೆ ಅನುಮಾನ ಬಂದರೆ ಪೊಲೀಸರಿಗೆ ಮಾಹಿತಿ ನೀಡಿ ಎಂದು ಮಹಿಳೆ ಜಾಗೃತಿ ಮೂಡಿಸಿದ್ದಾರೆ.