Monday, November 25, 2024
Homeರಾಷ್ಟ್ರೀಯ | Nationalದೇಶದಲ್ಲಿ ಕೈಗಾರಿಕಾ ಕ್ರಾಂತಿ ಅಗತ್ಯವಿದೆ : ಪ್ರಧಾನಿ ಮೋದಿ

ದೇಶದಲ್ಲಿ ಕೈಗಾರಿಕಾ ಕ್ರಾಂತಿ ಅಗತ್ಯವಿದೆ : ಪ್ರಧಾನಿ ಮೋದಿ

ನವದೆಹಲಿ,ಮೇ.21-ದೇಶದಲ್ಲಿ ಕೃಷಿ ಕ್ಷೇತ್ರದ ಅವಲಂಬನೆಯನ್ನು ಕಡಿಮೆ ಮಾಡಿ ಕೈಗಾರಿಕಾ ಕ್ರಾಂತಿ ನಡೆಸುವ ಅವಶ್ಯಕತೆ ಇದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ದಲಿತರು, ಆದಿವಾಸಿಗಳು ಮತ್ತು ಇತರೆ ಹಿಂದುಳಿದ ವರ್ಗದವರಿಗೆ ಸ್ವಂತ ಜಮೀನು ಇಲ್ಲ ಮತ್ತು ಜೀವನೋಪಾಯಕ್ಕಾಗಿ ಕಷಿಯನ್ನು ಅವಲಂಬಿಸಿ ಪ್ರಗತಿ ಸಾಧಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಸಂವಿಧಾನ ಶಿಲ್ಪಿ ಬಿ.ಆರ್‌ ಅಂಬೇಡ್ಕರ್‌ ಅವರು ಭಾರತದಲ್ಲಿ ಕೈಗಾರಿಕಾ ಕ್ರಾಂತಿಯ ಅಗತ್ಯದ ಬಗ್ಗೆ ಮಾತನಾಡಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಮಾಧ್ಯಮವೊಂದರ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.

ಬಾಬಾಸಾಹೇಬ್‌ ಅಂಬೇಡ್ಕರ್‌ ಅವರು ಬಹಳ ಮುಖ್ಯವಾದದ್ದನ್ನು ಹೇಳುತ್ತಿದ್ದರು ಮತ್ತು ಇದನ್ನು ನಮ್ಮ ರಾಜಕಾರಣಿಗಳು ನಿರ್ಲಕ್ಷಿಸಿದ್ದಾರೆ. ಅವರು ಈ ದೇಶಕ್ಕೆ ಕೈಗಾರಿಕಾ ಕ್ರಾಂತಿ ಬಹಳ ಮುಖ್ಯ ಎಂದು ಹೇಳುತ್ತಿದ್ದರು ಏಕೆಂದರೆ ದಲಿತರು ಮತ್ತು ಆದಿವಾಸಿಗಳು ಸ್ವಂತ ಭೂಮಿ ಹೊಂದಿಲ್ಲ ಮತ್ತು ಕಷಿಯಲ್ಲಿ ಹೆಚ್ಚಿನದನ್ನು ಮಾಡಲು ಸಾಧ್ಯವಿಲ್ಲ. ಅವರು, ಕೈಗಾರಿಕಾ ಕ್ರಾಂತಿಯ ಭಾಗವಾಗುವುದು ಬಹಳ ಮುಖ್ಯ ಮತ್ತು ಅದಕ್ಕಾಗಿಯೇ ನಾವು ಇಂದು ಕಷಿಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬೇಕಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಇದಕ್ಕಾಗಿ ಕಾನೂನುಗಳು ಕೆಲಸ ಮಾಡುವುದಿಲ್ಲ, ಅದು ವೈವಿಧ್ಯೀಕರಣದ ಮಾರ್ಗವಾಗಿದೆ ಎಂದು ಪ್ರಧಾನಿ ಅವರು, ಒಂದು ಕುಟುಂಬಕ್ಕೆ ಇಬ್ಬರು ಗಂಡು ಮಕ್ಕಳಿದ್ದರೆ ಒಬ್ಬರು ಕಷಿ ಮತ್ತು ಇನ್ನೊಬ್ಬರು ಉದ್ಯಮದ ಭಾಗವಾಗಬಹುದು ಇದರಿಂದ ಕೃಷಿ ಕ್ಷೇತ್ರದ ಮೇಲಿನ ಹೊರೆ ಕಡಿಮೆಯಾಗುತ್ತದೆ ಎಂದಿದ್ದಾರೆ.

ಕೃಷಿ ಕ್ಷೇತ್ರವು ಸದಢವಾಗಿ ಮತ್ತು ಕಾರ್ಯಸಾಧ್ಯವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಕೈಗಾರಿಕಾ ಅಭಿವದ್ಧಿ ಮುಖ್ಯ ಎಂದು ಅವರು ಒತ್ತಿ ಹೇಳಿದರು ಮತ್ತು ವಲಯದಲ್ಲಿ ಮೌಲ್ಯವರ್ಧನೆ ಮತ್ತು ವೈವಿಧ್ಯೀಕರಣದಲ್ಲಿ ತೊಡಗಿರುವ ಕೈಗಾರಿಕೆಗಳತ್ತ ಗಮನ ಹರಿಸುವುದು ಮುಂದಿನ ಮಾರ್ಗವಾಗಿದೆ ಎಂದು ಹೇಳಿದರು.

RELATED ARTICLES

Latest News