Friday, February 23, 2024
Homeಕ್ರೀಡಾ ಸುದ್ದಿವೈಝಾಗ್ ಟೆಸ್ಟ್‌ನಲ್ಲಿ ಇಂಗ್ಲೆಂಡ್‍ಗೆ 106 ರನ್‍ಗಳ ಸೋಲು

ವೈಝಾಗ್ ಟೆಸ್ಟ್‌ನಲ್ಲಿ ಇಂಗ್ಲೆಂಡ್‍ಗೆ 106 ರನ್‍ಗಳ ಸೋಲು

ವಿಶಾಖಪಟ್ಟಣಂ,ಫೆ.5- ಜಸ್ಪ್ರೀತ್ ಬುಮ್ರಾ (46ಕ್ಕೆ 3) ಹಾಗೂ ರವಿಚಂದ್ರನ್ ಅಶ್ವಿನ್ (72ಕ್ಕೆ 3) ಅವರ ಮಾರಕ ಬೌಲಿಂಗ್ ದಾಳಿಗೆ ನಲುಗಿದ ಇಂಗ್ಲೆಂಡ್ ತಂಡ ದ್ವಿತೀಯ ಇನ್ನಿಂಗ್ಸ್‍ನಲ್ಲಿ 292 ರನ್‍ಗಳಿಗೆ ಅಲೌಟ್ ಆಗುವ ಮೂಲಕ 106 ರನ್‍ಗಳ ಸೋಲು ಕಂಡಿದೆ. ಹೈದ್ರಾಬಾದ್‍ನ ರಾಜೀವ್‍ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ 28 ರನ್‍ಗಳಿಂದ ಮಣಿದು 5 ಪಂದ್ಯಗಳ ಸರಣಿಯಲ್ಲಿ 1-0 ಹಿನ್ನೆಡೆ ಅನುಭವಿಸಿದ್ದ ರೋಹಿತ್ ಶರ್ಮಾ ಪಡೆ ಈ ಪಂದ್ಯ ಗೆಲ್ಲುವ ಮೂಲಕ ಸರಣಿಯಲ್ಲಿ 1-1 ರಿಂದ ಸಮಬಲಗೊಳಿಸಿದೆ.

ವಿಶಾಖಪಟ್ಟಣಂನ ಎಸಿಸಿ- ವಿಡಿಸಿಎ ಅಂಗಳದಲ್ಲಿ ನಡೆದ ದ್ವಿತೀಯ ಟೆಸ್ಟ್ ನ 3ನೆ ದಿನದಾಟದ ಅಂತ್ಯಕ್ಕೆ ಒಂದು ವಿಕೆಟ್ ನಷ್ಟಕ್ಕೆ 67 ರನ್ ಗಳಿಸಿದ್ದ ಇಂಗ್ಲೆಂಡ್ ತಂಡ ಗೆಲುವಿನ ಹುಮ್ಮಸ್ಸಿನಲ್ಲಿತ್ತಾದರೂ ನಾಲ್ಕನೇ ದಿನದಾಟದಲ್ಲಿ ಟೀಮ್ ಇಂಡಿಯಾದ ಬೌಲರ್‍ಗಳನ್ನು ದಿಟ್ಟವಾಗಿ ಎದುರಿಸಲು ಸಾಧ್ಯವಾಗದೆ ಮುಗ್ಗರಿಸಿದೆ.

ಯಾವ ಕ್ಷೇತ್ರಕ್ಕೂ ಅಭ್ಯರ್ಥಿ ಆಯ್ಕೆ ಅಂತಿಮಗೊಂಡಿಲ್ಲ : ವಿಜಯೇಂದ್ರ ಸ್ಪಷ್ಟನೆ

ಇಂಗ್ಲೆಂಡ್ ತಂಡದ ಪರ ಆರಂಭಿಕ ಆಟಗಾರ ಝಾಕ್ ಕ್ರಾಲಿ (73 ರನ್) ಆಕರ್ಷಕ ಅರ್ಧಶತಕ, ವಿಕೆಟ್ ಕೀಪರ್ ಬೆನ್‍ಫೋಕ್ಸ್ ಹಾಗೂ ಟಾಮ್ ಹಾಟ್ರ್ಲಿ ಅವರು ಸ್ವಲ್ಪ ಹೋರಾಟ ತೋರಿ ತಲಾ 36 ರನ್ ಗಳಿಸಿದರೂ ಸೋಲಿನಿಂದ ತಂಡವನ್ನು ಪಾರು ಮಾಡಲು ಆಗಲಿಲ್ಲ.

ಟೀಮ್ ಇಂಡಿಯಾ ಪರ ಜಸ್ಪ್ರೀತ್ ಬುಮ್ರಾ ಹಾಗೂ ರವಿಚಂದ್ರನ್ ಅಶ್ವಿನ್ ತಲಾ 3 ವಿಕೆಟ್ ಪಡೆದರೆ, ಮುಕೇಶ್‍ಕುಮಾರ್, ಕುಲ್ದೀಪ್ ಯಾದವ್, ಅಕ್ಷರ್‍ಪಟೇಲ್ ತಲಾ 1 ವಿಕೆಟ್ ಪಡೆದು ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದರು.

RELATED ARTICLES

Latest News