Thursday, May 2, 2024
Homeಅಂತಾರಾಷ್ಟ್ರೀಯಭಾರತದ ಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಚೀನಾ

ಭಾರತದ ಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಚೀನಾ

ಬೀಜಿಂಗ್,ಡಿ.1- ಎರಡನೇ ಸ್ವದೇಶಿ ವಿಮಾನವಾಹಕ ನೌಕೆಯನ್ನು ನಿರ್ಮಿಸುವ ಭಾರತದ ಯೋಜನೆಗೆ ಚೀನಾ ಕುತೂಹಲದ ಜೊತೆಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಭಾರತದ ಉದ್ದೇಶಗಳು ಮತ್ತು ಸಾಮರ್ಥ್ಯಗಳ ಬಗ್ಗೆ ಸಂದೇಹ ವ್ಯಕ್ತಪಡಿಸಿದೆ. ಆದರೆ ನೌಕೆ ನಿರ್ಮಿಸುವ ಭಾರತದ ಸಾಮರ್ಥ್ಯವು ಶ್ಲಾಘನೀಯವಾಗಿದೆ ಎಂದು ಸರ್ಕಾರಿ ಗ್ಲೋಬಲ್ ಟೈಮ್ಸನಲ್ಲಿ ಚೀನಾದ ವಿಶ್ಲೇಷಕರನ್ನು ಉಲ್ಲೇಖಿಸಿ ಪ್ರತಿಕ್ರಿಯೆ ನೀಡಲಾಗಿದೆ.

ಚೀನಾವನ್ನು ಎದುರಿಸಲು ಸಂಕುಚಿತ ಕಾರ್ಯತಂತ್ರ ರೂಪಿಸಲಾಗುತ್ತಿದೆ ಎಂದು ಬೀಜಿಂಗ್ ಮೂಲದ ಮಿಲಿಟರಿ ತಜ್ಞರು, ಅನಾಮಧೇಯತೆಯ ಶರತ್ತಿನ ಮೇಲೆ ಗ್ಲೋಬಲ್ ಟೈಮ್ಸ್‍ನೊಂದಿಗೆ ಸಂದರ್ಶನ ನೀಡಿದ್ದಾರೆ. ತನ್ನದೇ ಆದ ವಿಮಾನ ವಾಹಕ ನೌಕೆಯನ್ನು ಅಭಿವೃದ್ಧಿ ಪಡಿಸುವಲ್ಲಿ ಭಾರತದ ಸಾಧನೆಯನ್ನು ಒಪ್ಪಿಕೊಂಡದ್ದು, ಪ್ರಪಂಚದ ಅನೇಕ ದೇಶಗಳು ಸ್ವತಂತ್ರವಾಗಿ ವಿಮಾನ ವಾಹಕ ನೌಕೆಗಳನ್ನು ನಿರ್ಮಿಸಲು ಸಾಧ್ಯವಿಲ್ಲ.

ಸೌರಶಕ್ತಿ ಚಾಲಿತ ಬಸ್‍ನಲ್ಲಿ ಸಂಚರಿಸುತ್ತ ಹವಾಮಾನ ಬದಲಾವಣೆ ಜಾಗೃತಿ ಮೂಡಿಸುತ್ತಿದ್ದಾರೆ ಐಐಟಿ ಪ್ರೊಫೆಸರ್

ಆದ್ದರಿಂದ ಆ ಅರ್ಥದಲ್ಲಿ ಭಾರತವು ದೊಡ್ಡ ಸಾಧನೆ ಮಾಡಿದೆ. ಭಾರತವು ತನ್ನ ನೌಕಾಪಡೆಯನ್ನು ಸರಿಯಾಗಿ ಅಭಿವೃದ್ಧಿಪಡಿಸಬಹುದು. ಆದರೆ ಅದರ ತಂತ್ರವು ಚೀನಾವನ್ನು ಗುರಿಯಾಗಿಸಿಕೊಂಡರೆ, ಅದು ನಮ್ಮನ್ನು ನಿಲುಕಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.ಭಾರತವು ಪ್ರಚೋದನೆಯಿಂದ ದೂರವಿರುವವರೆಗೂ ಚೀನಾವು ಯಾವುದೇ ಬೆದರಿಕೆಂ ಒಡ್ಡುವುದಿಲ್ಲ ಎಂದು ಹೇಳುವ ಮೂಲಕ ರಾಷ್ಟ್ರೀಯ ರಕ್ಷಣೆಗೆ ಚೀನಾದ ರಕ್ಷಣಾತ್ಮಕ ವಿಧಾನದ ಬಗ್ಗೆ ಒತ್ತಿ ಹೇಳಿದ್ದಾರೆ.

ಹಿಂದೂ ಮಹಾಸಾಗರದಲ್ಲಿ ನಮ್ಮ ಪಿಎಲ್‍ಎ ನೌಕಾಪಡೆಯ ಉಪಸ್ಥಿತಿಯು ಭಾರತವನ್ನು ಗುರಿಯಾಗಿಸುವ ಉದ್ದೇಶವಲ್ಲ, ಬದಲಾಗಿ ವಾಣಿಜ್ಯ ಹಡಗು ಮಾರ್ಗಗಳನ್ನು ರಕ್ಷಿಸುವುದು ಮತ್ತು ಮಾನವೀಯ ನೆರವು ನೀಡುವಂತಹ ಶಾಂತಿಯುತ ಉದ್ದೇಶಕ್ಕೆ ಭದ್ರತೆ ಒದಗಿಸುವುದು ಎಂದು ಹೇಳಿದ್ದಾರೆ.

ಇದೇ ವೇಳೆ ಗ್ಲೋಬಲ್ ಟೈಮ್ಸ ಭಾರತದ ಮೊದಲ ಸ್ವದೇಶಿ ವಾಹಕ ನೌಕೆ ಐಎನ್‍ಎಸ್ ವಿಕ್ರಾಂತ್‍ಅನ್ನು ಚೀನಾದ ಮೊದಲ ದೇಶೀಯವಾಗಿ ನಿರ್ಮಿಸಿದ ವಾಹಕವಾದ ಶಾನ್‍ಡಾಂಗ್‍ಗೆ ಹೋಲಿಸಿದೆ. ಐಎನ್‍ಎಸ್ ವಿಕ್ರಾಂತ್‍ನ ಪೂರ್ಣ ಕಾರ್ಯಾಚರಣೆಯ ಸಾಮಥ್ರ್ಯವನ್ನು ಇನ್ನೂ ಸಾಧಿಸಿಲ್ಲ. ಆದರೆ ನಮ್ಮ ಶಾಂಡೊಂಗ್ ಹಲವಾರು ದೂರದ ಸಮುದ್ರದಲ್ಲಿ ತನ್ನ ಯುದ್ಧ ಸಾಮಥ್ರ್ಯಗಳನ್ನು ಪ್ರದರ್ಶಿಸಿದೆ ಎಂದು ವರದಿಯಲ್ಲಿ ಹೈಲೆಟ್ ಮಾಡಿದೆ.

ಮೃತದೇಹದೊಂದಿಗೆ ಲೈಂಗಿಕ ಸಂಪರ್ಕ ನಡೆಸಿದ ಆಸ್ಪತ್ರೆ ಸಿಬ್ಬಂದಿ..!

ಈ ಬೆಳವಣಿಗೆ ಭಾರತದ ಹಡಗು ನಿರ್ಮಾಣ ಉದ್ಯಮದ ದಕ್ಷತೆ ಮತ್ತು ನೌಕಾಪಡೆಯ ಒಟ್ಟಾರೆ ಸಾಮಥ್ರ್ಯಗಳ ಬಗ್ಗೆ ಚೀನಾ ಗಮನಿಸುತ್ತಿದೆ. ಭಾರತದ ಮಿಲಿಟರಿ ಮಹತ್ವಾಕಾಂಕ್ಷೆಗಳ ಬಗ್ಗೆ ಚೀನಾದ ಈಗ ಎಚ್ಚರಿಕೆ, ಸ್ಥಿರತೆಯನ್ನು ಕಾಪಾಡಿಕೊಳ್ಳುವ ಬಯಕೆಯನ್ನು ಹೊರಹಾಕಿದೆ.

RELATED ARTICLES

Latest News