Thursday, February 22, 2024
Homeರಾಷ್ಟ್ರೀಯಸೌರಶಕ್ತಿ ಚಾಲಿತ ಬಸ್‍ನಲ್ಲಿ ಸಂಚರಿಸುತ್ತ ಹವಾಮಾನ ಬದಲಾವಣೆ ಜಾಗೃತಿ ಮೂಡಿಸುತ್ತಿದ್ದಾರೆ ಐಐಟಿ ಪ್ರೊಫೆಸರ್

ಸೌರಶಕ್ತಿ ಚಾಲಿತ ಬಸ್‍ನಲ್ಲಿ ಸಂಚರಿಸುತ್ತ ಹವಾಮಾನ ಬದಲಾವಣೆ ಜಾಗೃತಿ ಮೂಡಿಸುತ್ತಿದ್ದಾರೆ ಐಐಟಿ ಪ್ರೊಫೆಸರ್

ಇಂದೋರ್,ಡಿ.1- ಸೌರಶಕ್ತಿ ಮತ್ತು ಹವಾಮಾನ ಬದಲಾವಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು 2020ರಿಂದ ಐಐಟಿ ಪ್ರಾಧ್ಯಾಪಕರೊಬ್ಬರು ಪ್ರತಿನಿತ್ಯ ಸೌರಶಕ್ತಿ ಚಾಲಿತ ಬಸ್‍ನಲ್ಲಿ ದೇಶಾದ್ಯಂತ ಪ್ರವಾಸ ಮಾಡುತ್ತ ಗಮನ ಸೆಳೆಯುತ್ತಿದ್ದಾರೆ. ಮಾತ್ರವಲ್ಲ ಅವರು, ಹವಾಮಾನ ಬದಲಾವಣೆಯ ಪ್ರಭಾರ ಬೀರುವ ಅಗ್ರ ರಾಷ್ಟ್ರಗಳಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂದು ಎಚ್ಚರಿಸಿದ್ದಾರೆ.

ಪ್ರೊಫೆಸರ್ ಚೇತನ್ ಸಿಂಗ್ ಸೋಲಂಕಿ ಅವರನ್ನು ಸಾಮಾನ್ಯವಾಗಿ ಭಾರತದ ಸೌರಮಾನ ಎಂದು ಕರೆಯುತ್ತಾರೆ, ಅವರು ತಮ್ಮ ಎನಜಿ ಸ್ವರಾಜ್ ಯಾತ್ರೆಯ ಭಾಗವಾಗಿ ಮಧ್ಯಪ್ರದೇಶದ ಇಂದೋರ್‍ಗೆ ಆಗಮಿಸಿದರು. ಹವಾಮಾನ ಬದಲಾವಣೆಯಿಂದ ಹೆಚ್ಚು ಪರಿಣಾಮ ಬೀರುವ ದೇಶಗಳಲ್ಲಿ ಭಾರತವೂ ಸೇರಿದೆ. ಹವಾಮಾನ ಬದಲಾವಣೆಯು ಅಕಾಲಿಕ ಮಳೆ ಮತ್ತು ತೀವ್ರ ಪ್ರವಾಹಕ್ಕೆ ಕಾರಣವಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ ಎಂದು ಸೋಲಂಕಿ ಪಿಟಿಐಗೆ ತಿಳಿಸಿದರು.

ಡ್ರಗ್ ಪೆಡ್ಲಿಂಗ್ : ವಿದೇಶಿ ಪ್ರಜೆ ಸೇರಿ ಮೂವರ ಬಂಧನ

ಹವಾಮಾನ ಬದಲಾವಣೆಯ ಬೆದರಿಕೆಯ ಬಗ್ಗೆ ಜಾಗೃತಿ ಮೂಡಿಸಲು, ಸೋಲಂಕಿ ಅವರು ನವೆಂಬರ್ 2020 ರಲ್ಲಿ ಎನರ್ಜಿ ಸ್ವರಾಜ್ ಯಾತ್ರೆಗೆ ತೆರಳಲು ಐಐಟಿ ಬಾಂಬೆಯಿಂದ ವೇತನವಿಲ್ಲದೆ ರಜೆ ತೆಗೆದುಕೊಂಡಿದ್ದಾರೆ ಎಂದು ಹೇಳಿದರು,ಈ ಪ್ರವಾಸ 2030 ರವರೆಗೆ ಮುಂದುವರಿಯುತ್ತದೆ ಎಂದು ಹೇಳಿದರು.

ಯಾತ್ರೆ ಮುಗಿಯುವವರೆಗೂ ಮನೆಗೆ ಹೋಗುವುದಿಲ್ಲ ಎಂದು ಸಂಕಲ್ಪ ಮಾಡಿದ್ದೇನೆ. ಈ ಸೌರಶಕ್ತಿ ಚಾಲಿತ ಬಸ್ ಈಗ ನನ್ನ ಮನೆಯಾಗಿದೆ. ಇದು 47,000 ಕಿಲೋಮೀಟರ್‍ಗಳಿಗಿಂತ ಹೆಚ್ಚು ಕ್ರಮಿಸಿದೆ ಮತ್ತು 600 ಕ್ಕೂ ಹೆಚ್ಚು ಸಂಸ್ಥೆಗಳಲ್ಲಿ ನಾನು ಕಾರ್ಯಕ್ರಮಗಳನ್ನು ಉದ್ದೇಶಿಸಿ ಮಾತನಾಡಿದ್ದೇನೆ ಎಂದು ಅವರು ಹೇಳಿದರು.

ಬಸ್ಸಿನಲ್ಲಿ ಅವರು ಕಚೇರಿ, ಅಡುಗೆ ಕೋಣೆ, ಪೂಜಾ ಕೊಠಡಿ, ಹಾಸಿಗೆ, ತರಬೇತಿ ಕೊಠಡಿ, ಊಟದ ಕೋಣೆ, ಗ್ರಂಥಾಲಯ ಮತ್ತು ಬಾತ್-ಕಮ-ಟಾಯ್ಲೆಟ್ ಅನ್ನು ನಿರ್ಮಿಸಿದ್ದಾರೆ ಎಂದು ಸೋಲಂಕಿ ಹೇಳಿದರು.
ಹವಾಮಾನ ಬದಲಾವಣೆಗೆ ಮೂಲ ಕಾರಣ ನಿರಂತರವಾಗಿ ಹೆಚ್ಚುತ್ತಿರುವ ಇಂಗಾಲದ ಹೊರಸೂಸುವಿಕೆ. ಹವಾಮಾನ ಬದಲಾವಣೆಯ ಸಮಸ್ಯೆಗೆ ಸೌರ ಶಕ್ತಿಯು ಪರಿಹಾರವಾಗಬಹುದು, ಆದರೆ ಸೌರ ಶಕ್ತಿಯನ್ನು ಸರಿಯಾಗಿ ಬಳಸುವುದು ಬಹಳ ಮುಖ್ಯ ಎಂದು ಅವರು ಹೇಳಿದರು.

ಬಿಜೆಪಿಗೆ ಗೃಹ ಸಚಿವ ಪರಮೇಶ್ವರ್ ತಿರುಗೇಟು

ದೇಶದಲ್ಲಿ ಅವ್ಯಾಹತವಾಗಿ ಬೃಹತ್ ಸೌರವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸುವುದು ಸರಿಯಲ್ಲ, ಸ್ಥಳೀಯ ಮಟ್ಟದಲ್ಲಿ ಸೌರ ವಿದ್ಯುತ್ ಉತ್ಪಾದನೆಯಲ್ಲಿ ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡಬೇಕು.ಆಗ ಮಾತ್ರ ಇಂಧನ ಕ್ಷೇತ್ರದಲ್ಲಿ ಸ್ವರಾಜ್ಯ ಸಿಗುತ್ತದೆ, ಬೇರೆ ದೇಶಗಳನ್ನು ಅವಲಂಬಿಸಬೇಕಾಗಿಲ್ಲ. ಇಂಧನಗಳಿಗಾಗಿ ಎಂದು ಮಧ್ಯಪ್ರದೇಶ ಸರ್ಕಾರದ ಸೌರಶಕ್ತಿ ರಾಯಭಾರಿಯಾಗಿರುವ ಸೋಲಂಕಿ ಹೇಳಿದ್ದಾರೆ.

RELATED ARTICLES

Latest News