Thursday, February 29, 2024
Homeರಾಷ್ಟ್ರೀಯಮಾಸ್ಕ್ ಧರಿಸಿ 18 ಕೋಟಿ ಲೂಟಿ ಮಾಡಿದ ಡಕಾಯಿತರು

ಮಾಸ್ಕ್ ಧರಿಸಿ 18 ಕೋಟಿ ಲೂಟಿ ಮಾಡಿದ ಡಕಾಯಿತರು

ಇಂಫಾಲ್, ಡಿ 1 (ಪಿಟಿಐ) ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದ ಶಸ್ತ್ರ ಸಜ್ಜಿತ ಡಕಾಯಿತರ ಗುಂಪೊಂದು ಬ್ಯಾಂಕ್‍ಗೆ ನುಗ್ಗಿ 18.80 ಕೋಟಿ ರೂ. ದೋಚಿ ಪರಾರಿಯಾಗಿರುವ ಘಟನೆ ಮಣಿಪುರದ ಉಖ್ರುಲ್ ಜಿಲ್ಲೆಯಲ್ಲಿ ನಡೆದಿದೆ. ಉಖ್ರುಲ್ ಜಿಲ್ಲೆಯ ಸಾರ್ವಜನಿಕ ವಲಯದ ಬ್ಯಾಂಕ್‍ನ ಶಾಖೆಯೊಂದರಿಂದ ಮುಖಕ್ಕೆ ಮಾಸ್ಕ್‍ಗಳನ್ನು ಹಾಕಿಕೊಂಡಿದ್ದ ಶಸ್ತ್ರಸಜ್ಜಿತ ಡಕಾಯಿತರು 18.80 ಕೋಟಿ ರೂಪಾಯಿ ಹಣವನ್ನು ದೋಚಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊತ್ತ ದರೋಡೆಕೋರರು ರಾಜ್ಯ ರಾಜಧಾನಿ ಇಂಫಾಲ್‍ನಿಂದ ಸುಮಾರು 80 ಕಿಮೀ ದೂರದಲ್ಲಿರುವ ಉಖ್ರುಲ್ ಪಟ್ಟಣದ ಬ್ಯಾಂಕ್‍ಗೆ ಆಗಮಿಸಿ, ಭದ್ರತಾ ಸಿಬ್ಬಂದಿಯನ್ನು ಸದೆಬಡಿದು ಸಿಬ್ಬಂದಿಯನ್ನು ಬೆದರಿಸಿ ಬ್ಯಾಂಕ್‍ನಿಂದ ಮೊತ್ತವನ್ನು ದೋಚಿದ್ದಾರೆ.

ನಿಗಮ ಮಂಡಳಿಯಲ್ಲಿ ಕಾರ್ಯಕರ್ತರಿಗೂ ಅವಕಾಶ ಕಲ್ಪಿಸಿ : ಸತೀಶ್ ಜಾರಕಿಹೊಳಿ

ಮರೆಮಾಚುವ ಸಮವಸ್ತ್ರದಲ್ಲಿದ್ದ ದುಷ್ಕರ್ಮಿಗಳು, ಬ್ಯಾಂಕ್‍ನ ವಾಶ್‍ರೂಮ್‍ನೊಳಗೆ ನೌಕರರು ಮತ್ತು ಭದ್ರತಾ ಸಿಬ್ಬಂದಿಯನ್ನು ಲಾಕ್ ಮಾಡಿದ್ದಾರೆ ಎಂದು ಅಕಾರಿಗಳು ತಿಳಿಸಿದ್ದಾರೆ. ಹಿರಿಯ ಸಿಬ್ಬಂದಿಯೊಬ್ಬರು ಬಂದೂಕು ತೋರಿಸಿ ವಾಲ್ಟ ತೆರೆಯಲು ಯತ್ನಿಸಿದ್ದು, ಬಳಿಕ ದರೋಡೆಕೋರರು ಹಣವನ್ನು ದೋಚಿದ್ದಾರೆ.

ಈ ಕುರಿತು ಉಖ್ರುಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿಗಳನ್ನು ಗುರುತಿಸಲು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲು ಆರಂಭಿಸಿದ್ದಾರೆ.

RELATED ARTICLES

Latest News