Thursday, February 22, 2024
Homeರಾಷ್ಟ್ರೀಯನಿಂತಿದ್ದ ಟ್ರಕ್‍ಗೆ ವಾಹನ ಡಿಕ್ಕಿ, 8 ಮಂದಿ ಸಾವು

ನಿಂತಿದ್ದ ಟ್ರಕ್‍ಗೆ ವಾಹನ ಡಿಕ್ಕಿ, 8 ಮಂದಿ ಸಾವು

ಕಿಯೋಂಜಾರ್ (ಒಡಿಶಾ), ಡಿ 1 (ಪಿಟಿಐ) ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ ಇಂದು ಮುಂಜಾನೆ ವಾಹನವು ನಿಂತಿದ್ದ ಟ್ರಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಹಿಳೆಯರು ಮತ್ತು ಮಗು ಸೇರಿದಂತೆ ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 20 ರಲ್ಲಿ ಘಾಟಗೋನ್ ಪ್ರದೇಶದ ಬಲಿಜೋಡಿ ಗ್ರಾಮದ ಬಳಿ ವಾಹನದಲ್ಲಿದ್ದವರು ದೇವಸ್ಥಾನಕ್ಕೆ ಭೇಟಿ ನೀಡಲು ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಏಳು ಮಂದಿ ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಭದ್ರತಾ ಪಡೆ ಎನ್‌ಕೌಂಟರ್‌ನಲ್ಲಿ ಉಗ್ರ ಖತಂ

ಗಾಯಗೊಂಡವರ ಪೈಕಿ ಐವರು ಕಿಯೋಂಜಾರ್ ಜಿಲ್ಲಾಸ್ಪತ್ರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮೂವರನ್ನು ಕಟಕ್‍ನ ಎಸ್‍ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಅವರ ಸ್ಥಿತಿ ಹದಗೆಟ್ಟಿದೆ.

ಗಂಜಾಂ ಜಿಲ್ಲೆಯ ಪುದಮರಿ ಗ್ರಾಮದ ಒಟ್ಟು 20 ಜನರು ತ್ರಾರಿಣಿ ದೇವಿಯ ದರ್ಶನಕ್ಕೆ ತೆರಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಚಾಲಕ ನಿದ್ರೆಗೆ ಜಾರಿದ್ದೇ ಅಪಘಾತಕ್ಕೆ ಕಾರಣ ಎಂದು ಶಂಕಿಸಲಾಗಿದೆ ಅದು ದೇವಸ್ಥಾನದಿಂದ ಕೇವಲ ಮೂರು ಕಿಮೀ ದೂರದಲ್ಲಿ ನಡೆಯಿತು. ಪೊಲೀಸರು ತನಿಖೆ ಆರಂಭಿಸಿದ್ದಾರೆ.

RELATED ARTICLES

Latest News