Friday, November 22, 2024
Homeರಾಷ್ಟ್ರೀಯ | Nationalಇಸ್ರೇಲ್‍ನಲ್ಲಿರುವ ಭಾರತೀಯರ ರಕ್ಷಣೆಗೆ 'ಆಪರೇಷನ್ ಅಜಯ್' ಕಾರ್ಯಾಚರಣೆ ಆರಂಭ

ಇಸ್ರೇಲ್‍ನಲ್ಲಿರುವ ಭಾರತೀಯರ ರಕ್ಷಣೆಗೆ ‘ಆಪರೇಷನ್ ಅಜಯ್’ ಕಾರ್ಯಾಚರಣೆ ಆರಂಭ

ನವದೆಹಲಿ,ಅ.12- ಇಸ್ರೇಲ್ ಹಾಗೂ ಪಾಲೇಸ್ತೀನ್ ನಡುವೆ ನಡೆಯುತ್ತಿರುವ ಭೀಕರ ರಣ ಕಾಳಗದಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಕೇಂದ್ರ ಸರ್ಕಾರ ಆಪರೇಷನ್ ಅಜಯ್ ಕಾರ್ಯಾಚರಣೆ ಆರಂಭಿಸಿದೆ. ಯುದ್ಧ ಪೀಡಿತ ಇಸ್ರೇಲ್‍ನಲ್ಲಿ ಸಾವಿರಾರು ಮಂದಿ ಭಾರತೀಯರು ಸಿಲುಕಿಕೊಂಡಿದ್ದು, ಅವರೆಲ್ಲರನ್ನೂ ಭಾರತಕ್ಕೆ ಕರೆತರಲು ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆ ಆಪರೇಷನ್ ಅಜಯ್ ಹೆಸರಿನಲ್ಲಿ ವಿಶೇಷ ವಿಮಾನಗಳನ್ನು ಕಳುಹಿಸಲು ಸಿದ್ಧತೆ ನಡೆಸಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಿ ಪೋಸ್ಟ್ ಮಾಡಿರುವರ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್.ಜೈಶಂಕರ್, ಇಸ್ರೇಲ್‍ನಲ್ಲಿ 18,000 ಭಾರತೀಯರಿದ್ದಾರೆ. ಅವರನ್ನು ಕರೆತರಲು ವಿಶೇಷ ಚಾರ್ಟರ್ ಫ್ಲೈಟ್ ಗಳನ್ನು ಕಳಿಸಲಾಗುವುದು. ವಿದೇಶದಲ್ಲಿರುವ ನಮ್ಮ ಪ್ರಜೆಗಳ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದಿದ್ದಾರೆ.

ಭಾರತಕ್ಕೆ ಹಿಂದಿರುಗಲು ಅಲ್ಲಿರುವ ಭಾರತೀಯರು ಮೊದಲು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕೆಂದು ಸೂಚನೆ ನೀಡಲಾಗಿದೆ. ನಾಳೆ ಭಾರತಕ್ಕೆ ಮೊದಲ ವಿಶೇಷ ವಿಮಾನದಲ್ಲಿ ಅವರನ್ನು ಕಳಿಸಲಾಗುವುದು. ಅಲ್ಲದೇ ನೋಂದಾಯಿತರಿಗೆ ಇಮೇಲ್ ಮೂಲಕ ಸಂದೇಶ ರವಾನಿಸಲಾಗಿದೆ ಎಂದು ಇಸ್ರೇಲ್‍ನಲ್ಲಿರುವ ಭಾರತದ ರಾಯಭಾರ ಕಚೇರಿ ತಿಳಿಸಿದೆ.

ಇದುವರೆಗೂ ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವಿನ ಯುದ್ಧದಲ್ಲಿ ಸುಮಾರು 3,000ಕ್ಕೂ ಅಕ ಮಂದಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಈಗಾಗಲೇ ನಾವು ಇಸ್ರೇಲ್‍ಗೆ ವಿಶೇಷ ವಿಶೇಷ ಚಾರ್ಟರ್ ವಿಮಾನ ಮತ್ತು ಇತರ ವ್ಯವಸ್ಥೆಗಳನ್ನು ಕಲ್ಪಿಸಿಕೊಟ್ಟಿದ್ದೇವೆ. ಪ್ರತಿಯೊಬ್ಬ ಭಾರತೀಯರನ್ನು ಸ್ವದೇಶಕ್ಕೆ ಸುರಕ್ಷಿತವಾಗಿ ಕರೆತರಲಾಗುವುದು ಎಂದು ಜೈಶಂಕರ್ ಮಾಹಿತಿ ನೀಡಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಮೋದಿಗೆ ಸಿಕ್ಕ ಗೌರವ ಅಭೂತಪೂರ್ವ : ಮಿಲ್ಟನ್ ಡಿಕ್

20 ಸಾವಿರಕ್ಕೂ ಅಧಿಕ ಭಾರತೀಯರು:
ಮುಂಬೈನಲ್ಲಿರುವ ಇಸ್ರೇಲ್‍ನ ಕಾನ್ಸುಲ್ ಜನರಲ್ ಕೊಬ್ಬಿ ಶೋಶಾನಿ ಅವರು ಪಿಟಿಐ ಸುದ್ದಿ ಸಂಸ್ಥೆಗೆ 20,000ಕ್ಕೂ ಹೆಚ್ಚು ಭಾರತೀಯರು ವಾಸಿಸುತ್ತಿದ್ದಾರೆ ಎಂದು ಹೇಳಿದರು, ಇದು ಪ್ರಸ್ತುತ ಪ್ಯಾಲೆಸ್ತೀನ್ ಗುಂಪು ಹಮಾಸ್‍ನೊಂದಿಗೆ ಯುದ್ಧದಲ್ಲಿದೆ. ಇಸ್ರೇಲ್‍ನಲ್ಲಿ ಸಿಲುಕಿರುವ ಭಾರತೀಯರ ನಿಖರವಾದ ಸಂಖ್ಯೆ ತನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಜೈಶಂಕರ್‍ಗೆ ಪತ್ರ ಬರೆದು, ರಾಜ್ಯದ ಸುಮಾರು 7,000 ಜನರು ಇಸ್ರೇಲ್‍ನಲ್ಲಿದ್ದಾರೆ ಮತ್ತು ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮಧ್ಯಪ್ರವೇಶಿಸಬೇಕೆಂದು ಕೋರಿದ್ದಾರೆ. ಇಸ್ರೇಲ್‍ನಲ್ಲಿ ಸಿಲುಕಿರುವ ರಾಜ್ಯದ 84 ಮಂದಿಯ ಬಗ್ಗೆ ಮಾಹಿತಿ ಪಡೆದಿರುವುದಾಗಿ ತಮಿಳುನಾಡು ಸರ್ಕಾರವೂ ಹೇಳಿಕೆ ನೀಡಿದ್ದು, ಸಿಕ್ಕಿಬಿದ್ದ ಭಾರತೀಯರು ಹೆಚ್ಚಿನ ಅಧ್ಯಯನ, ವ್ಯಾಪಾರ ಅಥವಾ ಪ್ರವಾಸಿಗರಾಗಿ ಇಸ್ರೇಲ್‍ಗೆ ತೆರಳಿದ್ದರು ಎಂದು ಅಕಾರಿಗಳು ತಿಳಿಸಿದ್ದಾರೆ.

ಭಾರತೀಯರಿಗೆ ಸಹಾಯವಾಣಿ:
ಏತನ್ಮಧ್ಯೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ದೆಹಲಿಯಲ್ಲಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದ್ದು, ಪರಿಸ್ಥಿತಿಯ ಮೇಲ್ವಿಚಾರಣೆ ಮಾಡಲು ಮತ್ತು ಸಹಾಯದ ಅಗತ್ಯವಿರುವ ಭಾರತೀಯರಿಗೆ ಮಾಹಿತಿ ಮತ್ತು ನೆರವು ಒದಗಿಸಲು ಟೆಲ್ ಅವಿವ್ ಮತ್ತು ರಾಮಲ್ಲಾದಲ್ಲಿ ಪ್ರತ್ಯೇಕ ತುರ್ತು ಸಹಾಯವಾಣಿಗಳನ್ನು ಸ್ಥಾಪಿಸಲಾಗಿದೆ.

ಭಾರತೀಯರಿಗೆ ನೆರವು ನೀಡಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ 24 ಗಂಟೆಗಳ ಸಹಾಯ ವಾಣಿ ಸ್ಥಾಪಿಸಿದ್ದು, 1800118797 (ಟೋಲ್ ಫ್ರೀ), +91-11 23012113, +91-11-23014104, +91-11-23017905 ಮತ್ತು +919968291988ಗೆ ಸಂಪರ್ಕ ಮಾಡಬಹುದು. .

ವಿಶ್ವಸಂಸ್ಥೆಯಲ್ಲಿ ವಸುದೈವ ಕುಟುಂಬಕಂ ನಾಮಫಲಕ ಅನಾವರಣ

ಟೆಲ್ ಅವಿವ್‍ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಹ 24 ಗಂಟೆಗಳ ಸಹಾಯವಾಣಿ ಸ್ಥಾಪಿಸಿದೆ. ಅಗತ್ಯ ಇರುವವರು +972- 35226748, +972-543278392ಗೆ ಸಂರ್ಪಸಬಹುದೆಂದು ಅಕಾರಿಗಳು ತಿಳಿಸಿದ್ದಾರೆ.

RELATED ARTICLES

Latest News