Monday, July 15, 2024
Homeರಾಜ್ಯಈರುಳ್ಳಿ ಬೆಲೆ ಮತ್ತೆ ಗಗನಕ್ಕೇರುವ ಸಾಧ್ಯತೆ

ಈರುಳ್ಳಿ ಬೆಲೆ ಮತ್ತೆ ಗಗನಕ್ಕೇರುವ ಸಾಧ್ಯತೆ

ಬೆಂಗಳೂರು,ಅ.12- ಮಳೆ ಅಭಾವದಿಂದಾಗಿ ರಾಜ್ಯ ಹಾಗೂ ದೇಶದಲ್ಲಿ ಈರುಳ್ಳಿ ಬೆಳೆಯುವ ಪ್ರದೇಶಗಳಲ್ಲಿ ಬೆಳೆ ಇಳುವರಿ ಕಡಿಮೆಯಾಗಿರುವುದರಿಂದ ಮುಂದಿನ ದಿನಗಳಲ್ಲಿ ಈರುಳ್ಳಿ ಬೆಲೆ ಗಗನಕ್ಕೇರುವ ಸಾಧ್ಯತೆ ಇದೆ. ದೇಶಾದ್ಯಂತ ಮಳೆಯ ಅನಿಶ್ಚಿತ ಕೃಷಿ ವಲಯದ ಮೇಲೆ ಭಾರೀ ಪರಿಣಾಮ ಬೀರಿದೆ. ಮಳೆ ಆಧಾರಿತ ಬೆಳೆಗಳ ಉತ್ಪಾದನೆ ತೀವ್ರವಾಗಿ ಕುಂಠಿತವಾಗಿದ್ದು, ಪೂರೈಕೆಯಲ್ಲಿ ವ್ಯತ್ಯಾಸ ಉಂಟು ಮಾಡಲಿದೆ.

ಅಕ್ಕಿ, ಬೇಳೆ ಸೇರಿದಂತೆ ಹಲವು ಆಹಾರ ಧಾನ್ಯಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಈರುಳ್ಳಿ ಕೂಡ ಇದೇ ಸಾಲಿನಲ್ಲಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ದರ ಹೆಚ್ಚಳವಾಗುವ ಸಾಧ್ಯತೆ ಇದೆ. ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಗಳು ಬರಕ್ಕೆ ತುತ್ತಾಗಿವೆ. ಅದರಲ್ಲೂ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬೆಳೆಯುವ ಪ್ರದೇಶಗಳಾದ ಚಿತ್ರದುರ್ಗ, ಚಿಕ್ಕಬಳ್ಳಾಪುರ, ಗದಗ, ವಿಜಯಪುರ ಮತ್ತು ಹಲವು ಜಿಲ್ಲೆಗಳಲ್ಲಿ ಮಳೆ ಅಭಾವ ಕಾಡುತ್ತಿರುವ ಕಾರಣ ಈರುಳ್ಳಿ ಇಳುವರಿ ಕಡಿಮೆಯಾಗಿರುವುದರಿಂದ ಈ ಪ್ರದೇಶಗಳಲ್ಲೂ ಈರುಳ್ಳಿ ಬೆಲೆ ಏರಿಕೆಯಾಗಲಿದೆ ಎಂದು ಹೇಳಲಾಗಿದೆ.

ರಾಜ್ಯದಲ್ಲಿ ಹೊಸ ಈರುಳ್ಳಿ ಬೆಳೆಯ ಒಟ್ಟು ಇಳುವರಿ ಕೇವಲ ಶೇ.40ರಷ್ಟಿದ್ದು, ಈಗಾಗಲೇ ಶೇ.25ರಷ್ಟು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ರಾಜ್ಯದಲ್ಲಿ ಬೆಳೆಯುವ ಈರುಳ್ಳಿ ಬೆಳೆ ಹೊರತುಪಡಿಸಿ, ಇಡೀ ಈರುಳ್ಳಿ ಮಾರುಕಟ್ಟೆ ನಾಸಿಕ್ ಮತ್ತು ಮಹಾರಾಷ್ಟ್ರದ ಇತರ ಈರುಳ್ಳಿ ಬೆಳೆಯುವ ಪ್ರದೇಶಗಳನ್ನು ಅವಲಂಬಿಸಿದೆ.

ಕಳೆದ 15 ದಿನಗಳಿಂದ ಶಿವಮೊಗ್ಗ ಸಗಟು ಮಾರುಕಟ್ಟೆಯಲ್ಲಿ ಕೆಜಿ ಈರುಳ್ಳಿ ಬೆಲೆ ಸುಮಾರು 25ರಿಂದ 30 ರೂ.ಗಳಿದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ 30ರಿಂದ 35 ರೂ.ಗೆ ಮಾರಾಟವಾಗುತ್ತಿತ್ತು. ಸದ್ಯಕ್ಕೆ ಶಿವಮೊಗ್ಗದ ಸಗಟು ಮಾರುಕಟ್ಟೆಯಲ್ಲಿ ಕೆಜಿ ಈರುಳ್ಳಿ 32ರಿಂದ 35 ರೂ.ಗೆ ಏರಿಕೆಯಾಗಿದೆ. ಈರುಳ್ಳಿ ರಫ್ತಿನ ಮೇಲೆ ಕೇಂದ್ರ ಸರ್ಕಾರ ಶೇ 40ರಷ್ಟು ತೆರಿಗೆ ವಿಸಿದೆ. ಈ ಕ್ರಮವು ಮಹಾರಾಷ್ಟ್ರದ ಪ್ರಮುಖ ಮಾರಾಟಗಾರರು ರಫ್ತು ಮಾಡಲು ಕಡಿವಾಣ ಹಾಕಿದ್ದಾರೆ ಎಂದು ವ್ಯಾಪಾರಿಗಳು ಆಳಲು ತೊಡಿಕೊಂಡಿದ್ದಾರೆ.

ಕೇಂದ್ರ ಸರ್ಕಾರವು ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟದ (ಎನ್ಸಿಸಿಎಫ್) ಬೆಂಬಲದೊಂದಿಗೆ ಕಳೆದ ಕೆಲವು ತಿಂಗಳುಗಳಿಂದ ಮಹಾರಾಷ್ಟ್ರದಿಂದ ಈರುಳ್ಳಿಯನ್ನು ಖರೀದಿಸುವ ಮೂಲಕ ಬೆಲೆಯನ್ನು ನಿಯಂತ್ರಿಸುತ್ತಿದೆ. ನವೆಂಬರ್‌ನಿಂದ ಈರುಳ್ಳಿ ಬೆಲೆ ಸ್ಥಿರವಾದ ಏರಿಕೆಗೆ ಸಾಕ್ಷಿಯಾಗಬಹುದು ಮತ್ತು ಮಹಾರಾಷ್ಟ್ರದಿಂದ ಪೂರೈಕೆಯ ಆಧಾರದ ಮೇಲೆ ಬೆಲೆ ಏರಿಕೆ ನಿರ್ಧಾರವಾಗಲಿದೆ.

ವಿಶ್ವಸಂಸ್ಥೆಯಲ್ಲಿ ವಸುದೈವ ಕುಟುಂಬಕಂ ನಾಮಫಲಕ ಅನಾವರಣ

ಬೆಲೆ ನಿಯಂತ್ರಣಕ್ಕೆ ಕೇಂದ್ರದ ಕ್ರಮ ಈರುಳ್ಳಿ ಬೆಲೆ ಹೆಚ್ಚಳವನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಕೇಂದ್ರ ಸರ್ಕಾರ ಈರುಳ್ಳಿ ದಾಸ್ತಾನು ಮಾಡಿದ್ದು, ಬೆಲೆ ಹೆಚ್ಚಳವಾಗುವಾಗ ಮಾರುಕಟ್ಟೆಗೆ ಈರುಳ್ಳಿ ಬಿಡುಗಡೆ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯನ್ನು ನಿಯಂತ್ರಿಸುತ್ತಿದೆ.

ಕುಸಿದ ಟೊಮೊಟೊ ಬೆಲೆ:
ತಿಂಗಳ ಹಿಂದೆ ಟೊಮೆಟೊ ಕಾಯಲು ಹಲವರು ಇರುತ್ತಿದ್ದರು ಆದರೆ ಈಗ ಟೊಮೆಟೊ ಕೇಳುವವರೆ ಇಲ್ಲ ಎನ್ನುವಂತಾಗಿದೆ. ಟೊಮೆಟೊ ಬೆಳೆದಿದ್ದ ರೈತರು ಈಗ ಕಂಗಾಲಾಗಿದ್ದು, ಮಾರುಕಟ್ಟೆಗೆ ತಂದ ಟೊಮೆಟೊಗೆ ಬೆಲೆ ಸಿಗದ ಕಾರಣ ರಸ್ತೆಬದಿಯಲ್ಲೇ ಸುರಿದು ಹೋಗುತ್ತಿದ್ದಾರೆ.

ಜೈಲಿನಲ್ಲಿ ಚಂದ್ರಬಾಬು ನಾಯ್ಡು ಅವರಿಗೆ ಜೀವಭಯವಿದೆ : ನಾರಾ ಲೋಕೇಶ್

ರಾಜ್ಯದ ಸಗಟು ಮಾರುಕಟ್ಟೆಯಲ್ಲಿ ಕೆಜಿಗೆ 2 ರೂ.ಗೆ ಹಾಗೂ ಚಿಲ್ಲರೆ ಮಾರುಕಟ್ಟೆಯಲ್ಲಿ 8 ರಿಂದ 10 ರೂ.ಗೆ ತರಕಾರಿ ಮಾರಾಟವಾಗುತ್ತಿದೆ. ಚಳ್ಳಕೆರೆ ಮಾರುಕಟ್ಟೆಯಲ್ಲಿ ಮಂಗಳವಾರ ಮತ್ತು ಬುಧವಾರದಂದು ಟೊಮೆಟೊ ಕೆಜಿಗೆ 2 ರೂ.ಗೆ ಕುಸಿದಿದೆ.

ತಿಂಗಳ ಹಿಂದೆ 2,000 ರಿಂದ 2,500 ರೂ.ಗೆ ಮಾರಾಟವಾಗುತ್ತಿದ್ದ 15 ಕೆಜಿ ಟೊಮೇಟೊ ಕ್ರೇಟ್ ಈಗ 20-30 ರೂ.ಗೆ ಸಿಗುತ್ತಿಲ್ಲ, ಇದು ರೈತರನ್ನು ತೀವ್ರವಾಗಿ ಬಾಸುತ್ತಿದೆ. ಈ ಬೆಲೆಯಲ್ಲಿ ಟೊಮೆಟೊ ಮಾರಿದರೆ ಮಾರುಕಟ್ಟೆಗೆ ತರುವ ಬಾಡಿಗೆ ಸಹ ಸಿಗುವುದಿಲ್ಲ.

RELATED ARTICLES

Latest News