Friday, October 3, 2025
Homeಕ್ರೀಡಾ ಸುದ್ದಿ | Sportsಮೂವರು ಭಾರತೀಯ ಬ್ಯಾಟರ್​ಗಳ ಶತಕ : ವಿಂಡೀಸ್ ವಿರುದ್ಧ ಭಾರತ ಬೃಹತ್ ಮುನ್ನಡೆ

ಮೂವರು ಭಾರತೀಯ ಬ್ಯಾಟರ್​ಗಳ ಶತಕ : ವಿಂಡೀಸ್ ವಿರುದ್ಧ ಭಾರತ ಬೃಹತ್ ಮುನ್ನಡೆ

ಅಹಮದಾಬಾದ್‌, ಅ. 3 (ಪಿಟಿಐ) ವೆಸ್ಟ್‌ ಇಂಡೀಸ್‌‍ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್‌.ರಾಹುಲ್‌ ಶತಕ ಬಾರಿಸಿದ್ದಾರೆ. ರಾಹುಲ್​ 197 ಎಸೆತಗಳಲ್ಲಿ 12 ಬೌಂಡರಿ ಸಹಿತ 100 ರನ್​ಗಳಿಸಿದರು. ಇದು ಅವರ ವೃತ್ತಿ ಜೀವನದ 11ನೇ ಹಾಗೂ ಭಾರತದ ನೆಲದಲ್ಲಿ 2ನೇ ಶತಕವಾಗಿದೆ. ಎರಡನೇ ದಿನ 448ರನ್​ಗಳಿಸಿದೆ. ಇಡೀ ದಿನ ವೆಸ್ಟ್ ಇಂಡೀಸ್ ಬೌಲರ್​ಗಳು ಕೇವಲ 3 ವಿಕೆಟ್ ಮಾತ್ರ ಪಡೆಯಲು ಸಾಧ್ಯವಾಯಿತು. ಮೂವರು ಭಾರತೀಯ ಬ್ಯಾಟರ್​ಗಳು ಶತಕ ಸಿಡಿಸಿ ಮಿಂಚಿದರು.

ರಾಹುಲ್ ವಿಕೆಟ್ ನಂತರ ನಂತರ ಒಂದಾದ ಜುರೆಲ್-ಜಡೇಜಾ 5ನೇ ವಿಕೆಟ್ ಜೊತೆಯಾಟದಲ್ಲಿ 206 ರನ್​ಗಳ ಜೊತೆಯಾಟ ನಡೆಸಿದರು. ಈ ಇಬ್ಬರು ಬ್ಯಾಟರ್​ಗಳು 55.1 ಓವರ್​ಗಳ ಕಾಲ ವಿಂಡೀಸ್ ಬೌಲರ್​ಗಳನ್ನ ಹೈರಾಗೊಳಿಸಿದರು. ಜುರೆಲ್ 210 ಎಸೆತಗಳಲ್ಲಿ 15 ಬೌಂಡರಿ, 3 ಸಿಕ್ಸರ್​ಗಳೊಂದಿಗೆ 125 ರನ್​ಗಳಿಸಿ ಔಟ್ ಆದರು. ಜುರೆಲ್ಗೆ ಇದು ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಚೊಚ್ಚಲ ಶತಕವಾಗಿದೆ. ಜುರೆಲ್ ಬೆನ್ನಲ್ಲೇ ಜಡೇಜಾ ಕೂಡ ಶತಕ ಪೂರ್ಣಗೊಳಿಸಿದರು. 168 ಎಸೆತಗಳಲ್ಲಿ ಶತಕ ಪೂರೈಸಿದ ಜಡೇಜಾ ವೃತ್ತಿ ಜೀವನದ 6ನೇ ಶತಕ ದಾಖಲಿಸಿದ್ದಾರೆ.

ಜಡೇಜಾ 176 ಎಸೆತಗಳಲ್ಲಿ 6 ಬೌಂಡರಿ, 5 ಸಿಕ್ಸರ್​ಗಳ ಸಹಿತ ಅಜೇಯ 104 ರನ್​ಗಳಿಸಿದ್ದು 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ. ವಾಷಿಂಗ್ಟನ್ ಸುಂದರ್ ಅಜೇಯ 9 ರನ್​ಗಳಿಸಿದ್ದರು.
ರೋಸ್ಟನ್ ಚೇಸ್ 90ಕ್ಕೆ2, ಖಾರಿ ಪಿಯರ್ 91ಕ್ಕೆ1, ಜೊಮೆಲ್ ವಾರಿಕನ್ 102ಕ್ಕೆ1, ಜೇಡನ್ ಸೀಲ್ಸ್ 53ಕ್ಕೆ1 ವಿಕೆಟ್ ಪಡೆದರು.

RELATED ARTICLES

Latest News