ಟೆಹ್ರಾನ್( ಇರಾನ್)- ದಶಕಗಳ ಕಾಲ ಇಡೀ ದೇಶವನ್ನೇ ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿದ್ದ ಇರಾಕ್ ಸರ್ವೋಚ್ಛಾಧಿಕಾರಿ ಆಯತೊಲ್ಲಾ ಅಲಿ ಖಮೇನಿ ಅಮೆರಿಕ ಹಾಗೂ ಇಸ್ರೇಲ್ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಹತರಾಗಿದ್ದಾರೆ. ದಾಳಿಯಲ್ಲಿ ಆಯತುಲ್ಲಾ ಅಲಿ ಖಾಮೇನಿ ಪುತ್ರಿ, ಅಳಿಯ ಮತ್ತು ಮೊಮ್ಮಗ ಕೂಡ ಮೃತಪಟ್ಟಿದ್ದಾರೆ ಎಂದು ಇರಾನ್ ಸರಕಾರಿ ಮಾಧ್ಯಮಗಳು ತಿಳಿಸಿವೆ.
ಟೆಹ್ರಾನ್‌ನ ಹೃದಯಭಾಗದಲ್ಲಿರುವ ಖಮೇನಿ ಅವರ ಅಧಿಕೃತ ನಿವಾಸ ಮತ್ತು ಕಾಂಪೌಂಡ್ ಮೇಲೆ ನಡೆದ ಭೀಕರ ದಾಳಿಯಲ್ಲಿ ಅದು ಸಂಪೂರ್ಣ ನಾಶವಾಗಿದ್ದು, ಈ ಸರ್ವಾಧಿಕಾರಿ ಈಗ ಜೀವಂತವಾಗಿಲ್ಲ ಎನ್ನಲು ಸಾಕಷ್ಟು ಪುರಾವೆಗಳಿವೆ ಎಂದು ಇಸ್ರೇಲ್ ಪ್ರಧಾನಿನೆತನ್ಯಾಹು ದೂರದರ್ಶನದ ಮೂಲಕ ನೀಡಿದ ಭಾಷಣದಲ್ಲಿ ತಿಳಿಸಿದ್ದಾರೆ. ಇಸ್ರೇಲ್ ಮತ್ತು ಅಮೆರಿಕದ ಪಡೆಗಳು ಇರಾನ್‌ನ ವಿವಿಧ ಭಾಗಗಳಲ್ಲಿ ಈ ದಾಳಿ ನಡೆಸಿದ ಕೆಲವೇ ಗಂಟೆಗಳಲ್ಲಿ ಈ ಹೇಳಿಕೆ ಹೊರಬಿದ್ದಿದೆ.
ಇಸ್ರೇಲ್‌ನ ಚಾನೆಲ್ 12 ಸೇರಿದಂತೆ ಹಲವು ಮಾಧ್ಯಮಗಳು 86 ವರ್ಷದ ಖಮೇನಿ ಸಾವನ್ನಪ್ಪಿದ್ದಾರೆ ಎಂಬ ವರದಿಗಳನ್ನು ಪ್ರಸಾರ ಮಾಡಿವೆ. ದಾಳಿಯ ಸಮಯದಲ್ಲಿ ಖಮೇನಿ ಅವರ ಬಂಕರ್ ಮೇಲೆ ಸುಮಾರು 30 ಬಾಂಬ್‌ಗಳನ್ನು ಹಾಕಲಾಗಿದ್ದು, ಅವರು ಮೃತಪಟ್ಟಿರುವುದು ಬಹುತೇಕ ಖಚಿತ ಎಂದು ತಿಳಿಸಿವೆ. ಇದೇ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಖಮೇನಿ ಸಾವಿನ ವರದಿಗಳು ಸರಿ ಇರಬಹುದು ಎಂದು ಹೇಳಿಕೆ ನೀಡಿದ್ದು, ಇರಾನ್‌ನ ಪ್ರಮುಖ ನಾಯಕತ್ವವನ್ನು ಹತ್ತಿಕ್ಕಲಾಗಿದೆ ಎಂದು ತಿಳಿಸಿದ್ದಾರೆ.
ಈ ದಾಳಿಯು ಇರಾನ್‌ನಲ್ಲಿ ಆಡಳಿತ ಬದಲಾವಣೆಯ ಉದ್ದೇಶವನ್ನು ಹೊಂದಿದೆ ಎಂಬ ಸುಳಿವನ್ನು ಉಭಯ ನಾಯಕರು ನೀಡಿದ್ದಾರೆ.ಶನಿವಾರ ಬೆಳಗಿನ ಜಾವ ಖಾಮಿನೈ ಅವರು ತಮ್ಮ ಕಚೇರಿಯಲ್ಲಿ “ತಮ್ಮ ನಿಯೋಜಿತ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದಾಗ” ಹತ್ಯೆಯಾಗಿದ್ದಾರೆ. ಖಾಮಿನೈಯವರ ಹತ್ಯೆಯ ಹಿನ್ನೆಲೆಯಲ್ಲಿ ಇರಾನ್ ಸರಕಾರ 40 ದಿನಗಳ ಸಾರ್ವಜನಿಕ ಶೋಕಾಚರಣೆಯನ್ನು ಘೋಷಿಸಿದೆ ಎಂದು ಫಾರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಟ್ರಂಪ್ ಘೋಷಣೆ ಏನು?
ಖಮೇನಿ ಎಂಬ ಇತಿಹಾಸದ ಅತ್ಯಂತ ಕ್ರೂರ ವ್ಯಕ್ತಿಗಳಲ್ಲಿ ಒಬ್ಬ ಹತನಾಗಿದ್ದಾನೆ ಎಂದು ಟ್ರಂಪ್ ತನ್ನ ಸೋಷಿಯಲ್ ಮೀಡಿಯಾ ವೇದಿಕೆ ʻಟ್ರುತ್ ಸೋಶಿಯಲ್ʼನಲ್ಲಿ ಬರೆದುಕೊಂಡಿದ್ದರು. ಇದು ಕೇವಲ ಇರಾನ್ ಜನರಿಗೆ ಸಂದ ಜಯ ಮಾತ್ರವಲ್ಲ, ಖಮೇನಿ ಮತ್ತು ಆತನ ರಕ್ತಪಿಪಾಸು ಗೂಂಡಾ ಪಡೆಯಿಂದ ಹತರಾದ ಅಥವಾ ಅಂಗವೈಕಲ್ಯಕ್ಕೊಳಗಾದ ಶ್ರೇಷ್ಠ ಅಮೆರಿಕನ್ನರಿಗೆ ಹಾಗೂ ವಿಶ್ವದ ವಿವಿಧ ದೇಶಗಳ ಜನರಿಗೆ ಸಿಕ್ಕ ನ್ಯಾಯ ಎಂದು ಹೇಳಿದರು.
ನಮ್ಮ ಗುಪ್ತಚರ ಮತ್ತು ಅತ್ಯಾಧುನಿಕ ಟ್ರ್ಯಾಕಿಂಗ್ ವ್ಯವಸ್ಥೆಗಳಿಂದ ತಪ್ಪಿಸಿಕೊಳ್ಳಲು ಆತನಿಗೆ ಸಾಧ್ಯವಾಗಲಿಲ್ಲ. ಇಸ್ರೇಲ್ ಜೊತೆ ನಿಕಟವಾಗಿ ಕಾರ್ಯನಿರ್ವಹಿಸಿದ ನಮಗೆ, ಆತನಾಗಲಿ ಅಥವಾ ಆತನ ಜೊತೆಗೆ ಹತರಾದ ಇತರ ನಾಯಕರಾಗಲಿ ಏನೂ ಮಾಡಲು ಸಾಧ್ಯವಾಗಲಿಲ್ಲ. ಇರಾನ್ ಜನರಿಗೆ ತಮ್ಮ ದೇಶವನ್ನು ಮರಳಿ ಪಡೆಯಲು ಇದು ಅತ್ಯುತ್ತಮ ಅವಕಾಶ. ಇರಾನ್‌ನ ಐಆರ್‌ಜಿಸಿ, ಸೇನೆ, ಇತರ ಭದ್ರತಾ ಹಾಗೂ ಪೊಲೀಸ್ ಪಡೆಗಳು ಇನ್ನು ಮುಂದೆ ಹೋರಾಟ ನಡೆಸಲು ಇಚ್ಛಿಸುತ್ತಿಲ್ಲ. ಅವರು ನಮ್ಮ ದಾಳಿಯಿಂದ ರಕ್ಷಣೆಯನ್ನಷ್ಟೇ ಬಯಸುತ್ತಿದ್ದಾರೆ ಎಂಬ ಮಾಹಿತಿ ನಮಗೆ ಲಭ್ಯವಾಗುತ್ತಿದೆ ಎಂದು ತಿಳಿಸಿದ್ದಾರೆ.
ಕೇವಲ ಒಂದೇ ದಿನದಲ್ಲಿ ಇರಾನ್ ದೇಶವು ಬಹಳಷ್ಟು ನಾಶವಾಗಿದೆ. ಆದಾಗ್ಯೂ, ಮಧ್ಯಪ್ರಾಚ್ಯದಲ್ಲಿ ಮತ್ತು ಇಡೀ ವಿಶ್ವದಲ್ಲಿ ಶಾಂತಿ ಸ್ಥಾಪಿಸುವ ನಮ್ಮ ಗುರಿ ಸಾಧಿಸುವವರೆಗೆ, ನಿಖರ ಮತ್ತು ದೊಡ್ಡ ಬಾಂಬ್ ದಾಳಿಗಳು ಅಗತ್ಯವಿರುವಷ್ಟು ಕಾಲ ಅಡೆತಡೆಯಿಲ್ಲದೆ ಮುಂದುವರಿಯುತ್ತದೆ ಎಂದೂ ಟ್ರಂಪ್ ಹೇಳಿದ್ದಾರೆ.
ಯಾರು ಖಮೇನಿ?
ಅಯತೊಲ್ಲಾ ಅಲಿ ಖಮೇನಿ 1989 ರಿಂದ ಇರಾನ್‌ನ ಸುಪ್ರೀಂ ಲೀಡರ್ ಆಗಿದ್ದರು. ಅವರು ದೇಶದ ಅತ್ಯಂತ ಶಕ್ತಿಶಾಲಿ ಸ್ಥಾನವನ್ನು ಹೊಂದಿದ್ದರು ಮತ್ತು ಮಿಲಿಟರಿಯಿಂದ ವಿದೇಶಾಂಗ ನೀತಿಯವರೆಗೆ ಎಲ್ಲಾ ಪ್ರಮುಖ ನಿರ್ಧಾರಗಳ ಮೇಲೆ ಅಂತಿಮ ನಿಯಂತ್ರಣ ಹೊಂದಿದ್ದರು. 1979 ರ ಇಸ್ಲಾಮಿಕ್ ಕ್ರಾಂತಿಯ ನಂತರ ಅವರು ಇರಾನ್‌ನ ರಾಜಕೀಯ ಮತ್ತು ಧಾರ್ಮಿಕ ದಿಕ್ಕನ್ನು ರೂಪಿಸುತ್ತಿದ್ದಾರೆ.
1939 ರಲ್ಲಿ ಮಶಾದ್‌ನಲ್ಲಿ ಜನಿಸಿದ ಖಮೇನಿ ರುಹೊಲ್ಲಾ ಖಮೇನಿ ನಂತರ ದೇಶದ ಎರಡನೇ ಅತ್ಯುನ್ನತ ಅಧಿಕಾರದ ಕೇಂದ್ರ ಬಿಂದುವಾದರು. ಅವರು ಮಿಲಿಟರಿ, ನ್ಯಾಯಾಂಗ ಮತ್ತು ಮಾಧ್ಯಮ ಸಂಸ್ಥೆಗಳ ಮೇಲೆ ತಮ್ಮ ಪ್ರಾಬಲ್ಯವನ್ನು ಉಳಿಸಿಕೊಂಡರು. 1979 ರ ಇಸ್ಲಾಮಿಕ್ ಕ್ರಾಂತಿಯ ನಂತರ ಅವರು ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ಅವರ ಅಧಿಕಾರಾವಧಿಯು ಪಾಶ್ಚಿಮಾತ್ಯ ದೇಶಗಳೊಂದಿಗಿನ ಉದ್ವಿಗ್ನತೆ ಮತ್ತು ಮಧ್ಯಪ್ರಾಚ್ಯ ಭೌಗೋಳಿಕ ರಾಜಕೀಯದಲ್ಲಿ ಇರಾನ್‌ನ ಪಾತ್ರವನ್ನು ವ್ಯಾಖ್ಯಾನಿಸಿತು.
ಇರಾನ್‌ನಲ್ಲಿ ಜನರ ಸಂಭ್ರಮ:
ಈ ಮಧ್ಯೆ, ಇರಾನ್‌ನಲ್ಲಿ ಜನರು ಗುಂಪುಗಳು ಬೀದಿಗಳಲ್ಲಿ ಸಂಭ್ರಮಿಸುತ್ತಿರುವ ಕುರಿತ ಫೋಟೋ, ವಿಡಿಯೋಗಳು ವೈರಲ್ ಆಗುತ್ತಿವೆ.ಇರಾನ್‌ನ ಹಲವು ನಗರಗಳಲ್ಲಿ ಜನರು ಗುಂಪು ಸೇರಿ ಸಂಭ್ರಮಿಸುತ್ತಿರುವ ಸುದ್ದಿಯನ್ನು ಸಿಎನ್‌ಎನ್ ವರದಿ ಮಾಡಿದೆ. ಈ ವರದಿಗಳಲ್ಲಿ, “ಇಸ್ಲಾಮಿಕ್ ಗಣರಾಜ್ಯಕ್ಕೆ ಸಾವು” ಮತ್ತು “ಶಾ ಚಿರಾಯುವಾಗಲಿ” ಎಂಬ ಘೋಷಣೆಗಳು ಮೊಳಗಿವ
ಫಾಕ್ಸ್ ನ್ಯೂಸ್ ವಿಡಿಯೋ ಪೋಸ್ಟ್ ಮಾಡಿದ್ದು ಇದರಲ್ಲಿ, ಇರಾನ್‌ನ ಕರಾಜ್‌ನ ಉಪನಗರ ಬೆಸಾತ್ ಪಟ್ಟಣದ ಬೀದಿಗಳಲ್ಲಿ ಇರಾನಿಯನ್ನರು ಖಮೇನಿ ಸಾವನ್ನು ಸಂಭ್ರಮಿಸುತ್ತಿರುವುದು ಕಂಡುಬರುತ್ತದೆ.
ಇರಾನಿನ ಕಾರ್ಯಕರ್ತೆ ಮತ್ತು ಪತ್ರಕರ್ತೆ ಮಸಿಹ್ ಅಲಿನೆಜಾದ್ ಅವರು ವಿಡಿಯೋ ಪೋಸ್ಟ್ ಮಾಡಿದ್ದು, ಅದರಲ್ಲಿ, “ಇಸ್ರೇಲ್ ಕ್ರೂರ ಖಮೇನಿಯನ್ನು ಕೊಂದಿದೆ ಎಂಬ ಸುದ್ದಿ ತಿಳಿದ ನಂತರ ಇರಾನಿನ ಮಹಿಳೆಯರು ಕೂದಲು ಮುಚ್ಚದೆ ಬೀದಿಗಳಲ್ಲಿ ಕುಣಿಯುತ್ತಿದ್ದಾರೆ” ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಇನ್ನೊಂದು ವಿಡಿಯೋದಲ್ಲಿ, ಇರಾನ್ ಒಳಗೆ ಇರಾನಿನ ಜನರು ಸಂಭ್ರಮಿಸುತ್ತಿರುವ ವಿಡಿಯೋ. ನಾನು ಕನಸು ಕಾಣುತ್ತಿದ್ದೇನೆಯೇ?” ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಗೊತ್ತುಪಡಿಸಿದ ಉತ್ತರಾಧಿಕಾರಿ ಇಲ್ಲದ ಇಸ್ಲಾಮಿಕ್ ಗಣರಾಜ್ಯದ ಎರಡನೇ ನಾಯಕನ ಹತ್ಯೆಯು ಟೆಹ್ರಾನ್‌ನ ಭವಿಷ್ಯವನ್ನು ಅನುಮಾನಕ್ಕೆ ದೂಡಬಹುದು ಮತ್ತು ಇರಾನಿನ ಪ್ರತೀಕಾರದ ಬೆದರಿಕೆಗಳನ್ನು ನೀಡಿದರೆ, ದೀರ್ಘಕಾಲದ ಸಂಘರ್ಷದ ನಿರೀಕ್ಷೆಯನ್ನು ಹೆಚ್ಚಿಸಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಮುಂದೇನು?
ಯಾವುದೇ ನಾಮನಿರ್ದೇಶಿತ ಉತ್ತರಾಧಿಕಾರಿ ಇಲ್ಲದ ಇಸ್ಲಾಮಿಕ್ ಗಣರಾಜ್ಯದ ಎರಡನೇ ನಾಯಕನ ಹತ್ಯೆಯು, ಟೆಹ್ರಾನ್‌ನ ಭವಿಷ್ಯವನ್ನು ಅಲುಗಾಡಿಸಿದೆ. ಖಮೇನಿ ಅನುಪಸ್ಥಿತಿಯಲ್ಲಿ ಇರಾನ್ ಮುನ್ನಡೆಸುವ ಹೊಣೆಯನ್ನು ಯಾರು ಸ್ವೀಕರಿಸಲಿದ್ದಾರೆ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.
ಒಂದು ವೇಳೆ ಇರಾನ್ ಪ್ರತೀಕಾರದ ಬೆದರಿಕೆಗಳನ್ನು ನೀಡಿದರೆ, ಅದು ಅಮೆರಿಕ ಮತ್ತು ಇಸ್ರೇಲ್‌ನಿಂದ ಮತ್ತಷ್ಟು ಆಕ್ರಮಣಗಳನ್ನು ಎದುರಿಸಬಹುದು. ಇದು ಮಧ್ಯಪ್ರಾಚ್ಯದಲ್ಲಿ ದೀರ್ಘಕಾಲದ ಸಂಘರ್ಷದ ಆತಂಕವನ್ನು ಹೆಚ್ಚಿಸಲಿದೆ.
