ನಿತ್ಯ ನೀತಿ : ಕೆಟ್ಟದ್ದನ್ನು ಮಾಡಲು ಶಕ್ತಿ ವ್ಯಯಿಸಬೇಕು. ನಮಗೆ ಬೇಕಾದ ಒಳ್ಳೆಯದನ್ನು ದೊರಕಿಸಿಕೊಳ್ಳಲು ಪ್ರೀತಿ, ವಿಶ್ವಾಸ ಬೇಕು. ಒಳ್ಳೇ ಸಂಗತಿಗಳ ಒಡೆಯರಾಗೋಣ.
ಪಂಚಾಂಗ : ಭಾನುವಾರ, 01-03-2026
ವಿಶ್ವಾವಸುನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ವಸಂತ / ಮಾಸ: ಫಾಲ್ಗುಣ / ಪಕ್ಷ: ಶುಕ್ಲ / ತಿಥಿ: ತ್ರಯೋದಶಿ / ನಕ್ಷತ್ರ: ಪುಷ್ಯ / ಯೋಗ: ಶೋಭನ / ಕರಣ: ಕೌಲವ-ಗರಜೆ
ಸೂರ್ಯೋದಯ – 06.37
ಸೂರ್ಯಾಸ್ತ – 6.29
ರಾಹುಕಾಲ – 4.30-6.00
ಯಮಗಂಡ ಕಾಲ – 12.00-1.30
ಗುಳಿಕ ಕಾಲ – 3.00-4.30
ರಾಶಿಭವಿಷ್ಯ :
ಮೇಷ: ಬಡ್ತಿ, ವರ್ಗಾವಣೆ, ವೇತನ ಹೆಚ್ಚಳದ ನಿರೀಕ್ಷೆ ಯಲ್ಲಿರುವವರಿಗೆ ಅಂದು ಕೊಂಡಂತೆಯೇ ಆಗಲಿದೆ.
ವೃಷಭ: ನೀವು ಅಂದುಕೊಳ್ಳದ ರೀತಿಯಲ್ಲಿ ಖರ್ಚಿನ ಪ್ರಮಾಣ ವಿಪರೀತ ಹೆಚ್ಚಾಗುತ್ತದೆ.
ಮಿಥುನ: ಎಲ್ಲರನ್ನೂ ಮೆಚ್ಚಿಸುವ ಪ್ರಯತ್ನದಲ್ಲಿ ನೀವು ವಿಫಲರಾಗುವಿರಿ. ಎಚ್ಚರಿಕೆಯಿಂದಿರಿ.
ಕಟಕ: ವಿದ್ಯಾರ್ಥಿಗಳು ಹೊಸದಾಗಿ ಕೋರ್ಸ್ ಸೇರುವ ಮುನ್ನ ಅಳೆದು, ತೂಗಿ ಮುಂದೆ ಹೆಜ್ಜೆ ಇಡಿ.
ಸಿಂಹ: ವ್ಯಾಪಾರ- ಉದ್ಯಮ ನಡೆಸುತ್ತಿರುವ ವರಿಗೆ ಲಾಭ ದೊರೆಯಲಿದೆ.
ಕನ್ಯಾ: ಕಾನೂನು ತೊಡಕು ಗಳು ಬೆನ್ನತ್ತಿ ಬರಲಿವೆ. ಜವಾಬ್ದಾರಿ ನಿರ್ವಹಿಸುವುದು ಕಷ್ಟಸಾಧ್ಯವಾಗಲಿದೆ.
ತುಲಾ: ಚರ್ಮಕ್ಕೆ ಸಂಬಂ ಸಿದ ಅನಾರೋಗ್ಯ ಸಮಸ್ಯೆ ಕಾಣಿಸಿಕೊಳ್ಳ ಬಹುದು. ವೈದ್ಯರನ್ನು ಸಂಪರ್ಕಿಸಿ.
ವೃಶ್ಚಿಕ: ಉದ್ಯೋಗಸ್ಥರಿಗೆ ಮೇಲ ಕಾರಿಗಳಿಂದ ಅತ್ಯುತ್ತಮ ಬೆಂಬಲ ಸಿಗಲಿದೆ.
ಧನುಸ್ಸು: ವಿವಾಹದ ಆಚೆಗಿನ ಸಂಬಂಧದ ಕಡೆಗೆ ಆಕರ್ಷಿತರಾಗಿ, ನೆಮ್ಮದಿ ಹಾಳಾಗುವ ಸಾಧ್ಯತೆ ಇದೆ.
ಮಕರ: ಗರ್ಭಿಣಿಯರು ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡಿ. ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿರಿ.
ಕುಂಭ: ಹಣಕಾಸಿನ ವಿಷಯದಲ್ಲಿ ಎಚ್ಚರಿಕೆ ವಹಿಸಿ.
ಮೀನ: ಮಧುಮೇಹದಂಥ ಆರೋಗ್ಯ ಸಮಸ್ಯೆ ಇರುವವರು ಕಡ್ಡಾಯವಾಗಿ ವೈದ್ಯರನ್ನು ಸಂಪರ್ಕಿಸಿ.
