Thursday, May 14, 2026
Homeಅಂತಾರಾಷ್ಟ್ರೀಯಬಲೂಚಿಸ್ತಾನದಲ್ಲಿ ಪಾಕ್‌ ಸೇನೆಯ ಮೇಜರ್‌ ಸೇರಿ ಐವರು ಯೋಧರು ಸಾವು

ಬಲೂಚಿಸ್ತಾನದಲ್ಲಿ ಪಾಕ್‌ ಸೇನೆಯ ಮೇಜರ್‌ ಸೇರಿ ಐವರು ಯೋಧರು ಸಾವು

Five Pakistani soldiers killed during operation against terrorists in Balochistan

ಕರಾಚಿ, ಮೇ.14: ಪಾಕಿಸ್ತಾನದ ಬಲೂಚಿಸ್ತಾನದ ಬರ್ಕಾನ್‌ ಜಿಲ್ಲೆಯಲ್ಲಿ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆ ವೇಳೆ ಪಾಕಿಸ್ತಾನ ಸೇನೆಯ ಮೇಜರ್‌ ಸೇರಿ ಐವರು ಯೋಧರು ಸಾವನ್ನಪ್ಪಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಕನಿಷ್ಠ ಏಳು ಉಗ್ರರನ್ನು ಕೂಡ ಹತ್ಯೆ ಮಾಡಲಾಗಿದೆ ಎಂದು ಇಂಟರ್‌ ಸರ್ವಿಸಸ್‌‍ ಪಬ್ಲಿಕ್‌ ರಿಲೇಶನ್ಸ್ ಅಧಿಕಾರಿಗಳು ತಿಳಿಸಿದ್ದಾರೆ. ಪಾಕಿಸ್ತಾನ ಸೇನೆ ಮತ್ತು ಬಲೂಚಿಸ್ತಾನ್‌ ಫ್ರಾಂಟಿಯರ್‌ ಕಾರ್ಪ್ಸ್ ಸಂಯುಕ್ತವಾಗಿ ಮಾರ್ಖಮ್‌ನ ನೋಶಮ್‌ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದವು.

ಕಾರ್ಯಾಚರಣೆಯ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಏಳು ಉಗ್ರರನ್ನು ಹೊಡೆದುರುಳಿಸಲಾಗಿದ್ದು, ಮೇಜರ್‌ ಹುದ್ದೆಯ ಅಧಿಕಾರಿ ಸೇರಿದಂತೆ ಐವರು ಯೋಧರು ಹುತಾತ್ಮರಾಗಿದ್ದಾರೆ ಎಂದು ಐಎಸ್‌‍ಪಿಆರ್‌ತಿಳಿಸಿದೆ.

ಸತ್ತ ಉಗ್ರರಿಂದ ಶಸ್ತ್ರಾಸ್ತ್ರಗಳು, ಗುಂಡು-ಸಾಮಗ್ರಿಗಳು ಹಾಗೂ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.ಬಲೂಚಿಸ್ತಾನದಲ್ಲಿ ದೀರ್ಘಕಾಲದಿಂದ ಸಣ್ಣ ಮಟ್ಟದ ಬಂಡಾಯ ಚಟುವಟಿಕೆಗಳು ನಡೆಯುತ್ತಿದ್ದು, ಉಗ್ರರು ,ಭದ್ರತಾ ಪಡೆಗಳು ಮತ್ತು ಸರ್ಕಾರದ ಮೂಲಸೌಕರ್ಯಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿರುತ್ತಾರೆ.

RELATED ARTICLES

Latest News