Tuesday, April 21, 2026
Homeಅಂತಾರಾಷ್ಟ್ರೀಯಕ್ರೂರಿ ಖಮೇನಿ ಹತ್ಯೆ : ಒಂದೆಡೆ ಸಂಭ್ರಮಾಚರಣೆ, ಮತ್ತೊಂದೆಡೆ ಆಕ್ರಂದನ

ಕ್ರೂರಿ ಖಮೇನಿ ಹತ್ಯೆ : ಒಂದೆಡೆ ಸಂಭ್ರಮಾಚರಣೆ, ಮತ್ತೊಂದೆಡೆ ಆಕ್ರಂದನ

Iranians on Khamenei’s Death: Mourning on State TV, Public Joy

ಬ್ರೂಸೆಲ್ಸ್ , ಮಾ.1- ಇರಾನ್‌ನ ಸರ್ವೋಚ್ಛ ನಾಯಕ ಖಮೇನಿ ಹತ್ಯೆಗೆ ಇರಾನ್‌ ನಲ್ಲೇ ಬಹುತೇಕರು ಸಂಭ್ರಮಾಚರಣೆ ಮಾಡಿದ್ದಾರೆ. ಜಾಗತಿಕ ನಾಯಕರು ಎಚ್ಚರಿಕೆಯಿಂದ ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಇರಾನ್‌ನ ಸರ್ಕಾರಿ ಮಾಧ್ಯಮ ಭಾನುವಾರ ಮುಂಜಾನೆ 86 ವರ್ಷದ ನಾಯಕ ನಿಧನರಾದರು ಎಂದು ಕಾರಣವನ್ನು ವಿವರಿಸದೆ ವರದಿ ಮಾಡಿದೆ.

ಇಸ್ರೇಲಿ ಅಧಿಕಾರಿಗಳು ಅಸೋಸಿಯೇಟೆಡ್‌ ಪ್ರೆಸ್‌‍ಗೆ ಖಮೇನಿ ನಿಧನರಾಗಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದೆ ಅನಾಮಧೇಯತೆಯ ಸ್ಥಿತಿಯಲ್ಲಿ ಮಾಹಿತಿ ನೀಡಿದ್ದಾರೆ. ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು, ದೂರದರ್ಶನದ ಭಾಷಣದಲ್ಲಿ ಶನಿವಾರ ಮುಂಜಾನೆ ಇಸ್ರೇಲ್‌ ದಾಳಿಯಲ್ಲಿ ಖಮೇನಿ ಕೊಲ್ಲಲ್ಪಟ್ಟಿದ್ದಾರೆ ಎಂದು ಸ್ಪಷ್ಟ ಪಡಿಸಿದ್ದಾರೆ.

ಉತ್ತರಾಧಿಕಾರಿ ನಿಗದಿಯಾಗದೆ ಇರುವ ಇರಾನ್‌ ನ ಭವಿಷ್ಯ ಅನಿಶ್ಚಿತತೆ ಸಿಲುಕಿದೆ. ಇದು ಈಗಾಗಲೇ ಬೆಳೆಯುತ್ತಿರುವ ಸಂಘರ್ಷದ ಆತಂಕಗಳನ್ನು ಮತ್ತಷ್ಟು ಉಲ್ಬಣಗೊಳಿಸಿದೆ. ಅನೇಕ ರಾಷ್ಟ್ರಗಳು ಜಂಟಿ ದಾಳಿಗಳ ಬಗ್ಗೆ ನೇರವಾಗಿ ಪ್ರತಿಕ್ರಿಯಿಸದೆ ಪರೋಕ್ಷವಾಗಿ ವಿರೋಧ ವ್ಯಕ್ತ ಪಡಿಸಿವೆ. ಅಮೆರಿಕಾ ಇಸ್ರೇಲ್‌ ನ ಪ್ರತಿಕಾರವನ್ನು ಟೆಹ್ರಾನ್‌ ಖಂಡಿಸಿದೆ. ಯುರೋಪ್‌ ಜೊತೆಯಲ್ಲಿ, ಮಧ್ಯಪ್ರಾಚ್ಯದಾದ್ಯಂತದ ಅರಬ್‌ ನೆರೆಹೊರೆಯ ರಾಷ್ಟ್ರಗಳು ಇರಾನ್‌ ಮೇಲಿನ ದಾಳಿಗಳನ್ನು ಖಂಡಿಸಿವೆ.

ಆಸ್ಟ್ರೇಲಿಯಾ ಮತ್ತು ಕೆನಡಾ ದೇಶಗಳು ಅಮೆರಿಕಾ ದಾಳಿಗಳಿಗೆ ಮುಕ್ತ ಬೆಂಬಲವನ್ನು ವ್ಯಕ್ತಪಡಿಸಿವೆ. ರಷ್ಯಾ ಮತ್ತು ಚೀನಾ ನೇರ ವಿರೋಧ ವ್ಯಕ್ತ ಪಡಿಸಿವೆ. ಬ್ರಿಟಿಷ್‌ ಪ್ರಧಾನಿ ಕೀರ್‌ ಸ್ಟಾರ್ಮರ್‌, ಫ್ರೆಂಚ್‌ ಅಧ್ಯಕ್ಷ ಎಮ್ಯಾನುಯೆಲ್‌ ಮ್ಯಾಕ್ರನ್‌ ಮತ್ತು ಜರ್ಮನ್‌ ಚಾನ್ಸೆಲರ್‌ ಫ್ರೆಡ್ರಿಕ್‌ ಮೆರ್ಜ್‌ ಅವರು, ಅಮೆರಿಕ ಮತ್ತು ಇರಾನ್‌ ಮಾತುಕತೆಗಳನ್ನು ಪುನರಾರಂಭಿಸುವಂತೆ ಒತ್ತಾಯಿಸಿದ್ದಾರೆ. ಸಂಘರ್ಷಕ್ಕೆ ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ತಮ ದೇಶಗಳು ಇರಾನ್‌ ಮೇಲಿನ ದಾಳಿಯಲ್ಲಿ ಭಾಗವಹಿಸಿಲಿಲ್ಲ ಆದರೆ ಅಮೆರಿಕ, ಇಸ್ರೇಲ್‌ ನಿಕಟ ಸಂಪರ್ಕದಲ್ಲಿವೆ ಎಂದು ಹೇಳಿದ್ದಾರೆ.ಇರಾನ್‌ನ ಪರಮಾಣು ಕಾರ್ಯಕ್ರಮದ ಕುರಿತು ಮಾತುಕತೆಯ ಮೂಲಕ ಪರಿಹಾರ ಕಂಡು ಹಿಡಿಯಲು ಮೂರು ದೇಶಗಳು ಪ್ರಯತ್ನಗಳನ್ನು ನಡೆಸಿವೆ. ಇರಾನಿನ ದಾಳಿಯನ್ನು ನಾವು ಅತ್ಯಂತ ಕಠಿಣ ಪದಗಳಲ್ಲಿ ಖಂಡಿಸುತ್ತೇವೆ. ಇರಾನ್‌ ವಿವೇಚನಾರಹಿತ ಮಿಲಿಟರಿ ದಾಳಿಗಳಿಂದ ದೂರವಿರಬೇಕು ಎಂದು ಅವರು ಆಗ್ರಹಿಸಿದ್ದಾರೆ. ಇರಾನಿನ ಜನರಿಗೆ ತಮ ಭವಿಷ್ಯವನ್ನು ನಿರ್ಧರಿಸಲು ಮುಕ್ತ ಅವಕಾಶ ನೀಡಬೇಕು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ತುರ್ತು ಭದ್ರತಾ ಸಭೆಯಲ್ಲಿ, ಮ್ಯಾಕ್ರನ್‌ ಫ್ರಾನ್‌್ಸಯಲ್ಲಿ ಭಾಗಿಯಾಗಿಲ್ಲ ಎಂದು ತಿಳಿಸಿದ್ದಾರೆ. ಇರಾನ್‌ನ ಪರಮಾಣು ಕಾರ್ಯಕ್ರಮ, ಬ್ಯಾಲಿಸ್ಟಿಕ್‌ ಚಟುವಟಿಕೆ, ಪ್ರಾದೇಶಿಕ ಅಸ್ಥಿರತೆಯ ಪ್ರಶ್ನೆಗಳನ್ನು ದಾಳಿಗಳಿಂದ ಮಾತ್ರ ಪರಿಹರಿಸಲಾಗುತ್ತದೆ ಎಂದು ಯಾರೂ ಭಾವಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

22 ರಾಷ್ಟ್ರಗಳ ಅರಬ್‌ ಲೀಗ್‌ ಇರಾನಿನ ದಾಳಿಗಳನ್ನು ಶಾಂತಿಗಾಗಿ ಪ್ರತಿಪಾದಿಸುವ ಮತ್ತು ಸ್ಥಿರತೆಗಾಗಿ ಶ್ರಮಿಸುವ ದೇಶಗಳ ಸಾರ್ವಭೌಮತ್ವದ ಸ್ಪಷ್ಟ ಉಲ್ಲಂಘನೆ ಎಂದು ಕರೆದಿವೆ. ದಾಳಿಗಳಿಂದ ಇಸ್ರೇಲ್‌ ಮತ್ತು ಇರಾನ್‌ ಎರಡನ್ನೂ ಅಸ್ಥಿರಗೊಳಿಸುವ ಅಪಾಯವಿದೆ ಎಂದು ಶಂಕಿಸಿದ್ದಾರೆ.

ಕುವೈತ್‌, ಬಹ್ರೇನ್‌, ಕತಾರ್‌ ಮತ್ತು ಎಮಿರೇಟ್‌್ಸಸೇರಿದಂತೆ ಈ ಪ್ರದೇಶದಲ್ಲಿನ ಅಮೆರಿಕಾ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನಿನ ದಾಳಿಗಳನ್ನು ಮೊರಾಕೊ, ಜೋರ್ಡಾನ್‌, ಸಿರಿಯಾ ಮತ್ತು ಯುನೈಟೆಡ್‌ ಅರಬ್‌ ಎಮಿರೇಟ್ಸ್ ಖಂಡಿಸಿವೆ.

ಸೌದಿ ಅರೇಬಿಯಾ ಇರಾನಿನ ವಿಶ್ವಾಸಘಾತುಕ ಆಕ್ರಮಣ ಮತ್ತು ಸಾರ್ವಭೌಮತ್ವದ ಸ್ಪಷ್ಟ ಉಲ್ಲಂಘನೆಯನ್ನು ಅತ್ಯಂತ ಕಠಿಣ ಪದಗಳಲ್ಲಿ ಖಂಡಿಸುತ್ತದೆ ಎಂದು ಹೇಳಿದೆ. ಇರಾನ್‌ ಮತ್ತು ಯುಎಸ್‌‍ ನಡುವಿನ ಮಾತುಕತೆಗೆ ಮಧ್ಯಸ್ಥಿಕೆ ವಹಿಸುತ್ತಿರುವ ಓಮನ್‌, ಯುಎಸ್‌‍ ಕ್ರಮವು ಅಂತರರಾಷ್ಟ್ರೀಯ ಕಾನೂನಿನ ನಿಯಮಗಳು ಮತ್ತು ದ್ವೇಷ ಮತ್ತು ರಕ್ತಪಾತದ ಮೂಲಕ ವಿವಾದಗಳನ್ನು ಶಾಂತಿಯುತ ವಿಧಾನಗಳ ಮೂಲಕ ಪರಿಹರಿಸುವ ತತ್ವದ ಉಲ್ಲಂಘನೆಯಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

RELATED ARTICLES

Latest News