Homeಅಂತಾರಾಷ್ಟ್ರೀಯಲಾಸ್‌‍ ಏಂಜಲೀಸ್‌‍ನಲ್ಲಿ ಹೆಲಿಕಾಪ್ಟರ್‌ ಪತನ : ಮೂವರ ಸಾವು

ಲಾಸ್‌‍ ಏಂಜಲೀಸ್‌‍ನಲ್ಲಿ ಹೆಲಿಕಾಪ್ಟರ್‌ ಪತನ : ಮೂವರ ಸಾವು

ಲಾಸ್‌ ಏಂಜಲೀಸ್‌, ಸೆ.16- ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ಇಂದು ಹೆಲಿಕಾಪ್ಟರ್‌ ಪತನಗೊಂಡು ಕನಿಷ್ಠ ಮೂವರು ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ ಕೆಲವರು ಹೆಲಿಕಾಪ್ಟರ್‌ನಲ್ಲಿದ್ದರೇ ಅಥವಾ ಹೊರಗಿದ್ದರೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಒಬ್ಬರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ತಕ್ಷಣಕ್ಕೆ ತಿಳಿದುಬಂದಿಲ್ಲ ಎಂದು ಲಾಸ್‌ ಏಂಜಲೀಸ್‌ ಅಗ್ನಿಶಾಮಕ ಇಲಾಖೆ ತಿಳಿಸಿದೆ.

ಕನಿಷ್ಠ ಒಬ್ಬರು ಪಾರ್ಕಿಂಗ್‌ ಸ್ಥಳದಲ್ಲಿದ್ದ ವೇಳೆ ಮೃತಪಟ್ಟಿದ್ದಾರೆ ಎಂದು ಅಗ್ನಿಶಾಮಕ ಇಲಾಖೆ ವಕ್ತಾರ ಕ್ಯಾಪ್ಟನ್‌ ಬ್ರಾಂಡನ್‌ ಸಿಲ್ವರ್‌ಮ್ಯಾನ್‌ ತಿಳಿಸಿದ್ದಾರೆ. ಹೆಲಿಕಾಪ್ಟರ್‌ ಪಾರ್ಕಿಂಗ್‌ನಲ್ಲಿ ನಿಲ್ಲಿಸಲಾಗಿದ್ದ ವಾಹನಗಳ ಮೇಲೆ ಬಿದ್ದಿದೆ. ಘಟನೆಯಿಂದ ನಾಲ್ಕು ವಾಹನಗಳು ಹಾಗೂ ಎರಡು ಶೇಖರಣಾ ಕಂಟೇನರ್‌ಗಳಿಗೆ ಬೆಂಕಿಯಿಂದ ಹಾನಿಯಾಗಿದೆ.

50ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದರು. ಹೆಲಿಕಾಪ್ಟರ್‌ ಸಂಪೂರ್ಣವಾಗಿ ನಾಶವಾಗಿದ್ದು, ಅವಶೇಷಗಳನ್ನು ತೆರವುಗೊಳಿಸಿದ ಬಳಿಕ ಅದರಲ್ಲಿದ್ದವರ ಸಂಖ್ಯೆಯ ಬಗ್ಗೆ ಸ್ಪಷ್ಟತೆ ಸಿಗಲಿದೆ ಎಂದು ಸಿಲ್ವರ್‌ಮ್ಯಾನ್‌ ಹೇಳಿದ್ದಾರೆ.ಘಟನೆಯ ತನಿಖೆಯನ್ನು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ಹಾಗೂ ಫೆಡರಲ್‌ ಏವಿಯೇಷನ್‌ ಆಡಳಿತ ನಡೆಸಲಿವೆ. ಹೆಲಿಕಾಪ್ಟರ್‌ನಲ್ಲಿದ್ದ ಪೈಲಟ್‌ ಬಗ್ಗೆಯೂ ಮಾಹಿತಿ ಲಭ್ಯವಾಗಿಲ್ಲ.

ಏಕಾಏಕಿ ಹೆಲಿಕಾಪ್ಟರ್‌ ಗಿರಕಿ ಹೊಡೆದು ವಾಹನಗಳ ಪಾರ್ಕಿಂಗ್‌ ಲಾಟ್‌ನಲ್ಲಿ ಬಿದ್ದಿದೆ. ಇದೇ ದಿನ ಲಾಸ್‌ ಏಂಜಲೀಸ್‌ನಲ್ಲಿ ಎಸ್‌ಯುವಿಯೊಂದು ಸಾರಿಗೆ ಬಸ್‌ಗೆ ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದರು.

RELATED ARTICLES
spot_img

Latest News