Homeರಾಜ್ಯಬೆಂಗಳೂರಿಗರ ಮೇಲೆ ಮತ್ತೊಂದು ತೆರಿಗೆ ಬರೆ ಎಳೆಯಲು ಮುಂದಾದ ಜಿಬಿಎ

ಬೆಂಗಳೂರಿಗರ ಮೇಲೆ ಮತ್ತೊಂದು ತೆರಿಗೆ ಬರೆ ಎಳೆಯಲು ಮುಂದಾದ ಜಿಬಿಎ

ಬೆಂಗಳೂರು, ಸೆ.16- ದುಡ್ಡು ಮಾಡೋದು ಹೇಗೆ ಅಂತಾ ಜಿಬಿಎಯವರನ್ನು ನೋಡಿ ಕಲಿಯಬೇಕು. ಏಕೆ ಅಂತೀರಾ ಅವರು ಜನರಿಗೆ ಗೊತ್ತಿಲ್ಲದಂತೆ ಅವರ ಜೇಬಿಗೆ ಕತ್ತರಿ ಹಾಕಿ ಹಣ ಲೂಟಿ ಮಾಡೋದ್ರಲ್ಲಿ ಫೇಮಸ್‌‍. ಜನರಿಂದ ಈಗಾಗಲೇ ಆಸ್ತಿ ತೆರಿಗೆ ವಸೂಲಿ ನೆಪದಲ್ಲಿ ಗ್ರಂಥಾಲಯ ಸೆಸ್‌‍, ಒಳಚರಂಡಿ ಸೆಸ ಹಾಗೂ ಕಸದ ಸೆಸ್‌‍ ಅಂತಾ ಹಾಕಿ ಟೋಪಿ ಹಾಕುತ್ತಿದ್ದಾರೆ.

ಇದೀಗ ಅದರ ಜೊತೆಗೆ ಹೊಸದಾಗಿ ಸಾಫ್ಟ್ ವೇರ್‌ ಸೆಸ್‌‍ ಅಂತಾ ಹೊಸ ಶುಲ್ಕ ಹಾಕುವ ಮೂಲಕ ಸಾರ್ವಜನಿಕರಿಂದ ಹಣ ಲೂಟಿ ಮಾಡುವ ಹೊಸ ಐಡಿಯಾಕ್ಕೂ ಕೈ ಹಾಕಿದ್ದಾರೆ. ಆಸ್ತಿ ತೆರಿಗೆ ವಸೂಲಿ ಸಂದರ್ಭದಲ್ಲಿ ವಿವಿಧ ಸೆಸ್‌‍ಗಳನ್ನು ಸಂಗ್ರಹಿಸುತ್ತಿದ್ದ ಜಿಬಿಎ, ಇದೀಗ ಆಸ್ತಿ ತೆರಿಗೆ ವ್ಯವಸ್ಥೆಯಲ್ಲೇ ಹೊಸದಾಗಿ ಸಾಫ್ಟ್ ವೇರ್‌ ಶುಲ್ಕ ವಿಧಿಸಲು ಮುಂದಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಜಿಬಿಎ ವ್ಯಾಪ್ತಿಯಲ್ಲಿ ಸುಮಾರು 25 ಲಕ್ಷ ಆಸ್ತಿಗಳಿದ್ದು, ಪ್ರತಿಯೊಂದು ಆಸ್ತಿಯಿಂದಲೂ ಸಾಫ್ಟ್ ವೇರ್‌ ಶುಲ್ಕ ಸಂಗ್ರಹಿಸುವ ಮಹಾನ್‌ ಕಾರ್ಯಕ್ಕೆ ಕೈ ಹಾಕಿದೆ. ವಸತಿ ಕಟ್ಟಡಗಳಿಗೆ ವಾರ್ಷಿಕ 200 ಹಾಗೂ ವಾಣಿಜ್ಯ ಕಟ್ಟಡಗಳಿಗೆ ವಾರ್ಷಿಕ 1,000 ಶುಲ್ಕ ವಿಧಿಸಲಾಗುತ್ತಿದೆ. ಈ ಹೊಸ ಶುಲ್ಕ ಈ ವರ್ಷದಿಂದ ಜಾರಿಗೆ ಬಂದಿದೆ. ಆಸ್ತಿ ಮಾಲೀಕರು ಪ್ರತಿವರ್ಷ ಆಸ್ತಿ ತೆರಿಗೆಯ ಜತೆಗೆ ಈ ಹೆಚ್ಚುವರಿ ಮೊತ್ತವನ್ನೂ ಪಾವತಿಸಬೇಕಾಗುತ್ತದೆ. ವಿಶೇಷವಾಗಿ ವಾಣಿಜ್ಯ ಕಟ್ಟಡಗಳ ಮಾಲೀಕರಿಗೆ ವಾರ್ಷಿಕ 1,000 ಹೆಚ್ಚುವರಿ ಹೊರೆಯಾಗಲಿದೆ.

ಡಿಜಿಟಲ್‌ ವ್ಯವಸ್ಥೆಗಾಗಿ ಶುಲ್ಕ?ಆಸ್ತಿ ತೆರಿಗೆ ಹಾಗೂ ಆಸ್ತಿ ದಾಖಲೆಗಳ ನಿರ್ವಹಣೆಯನ್ನು ಮತ್ತಷ್ಟು ಡಿಜಿಟಲೀಕರಣಗೊಳಿಸುವ ಉದ್ದೇಶದಿಂದ ಜಿಬಿಎ ಹಲವು ಆನ್‌ಲೈನ್‌‍ ವ್ಯವಸ್ಥೆಗಳನ್ನು ಜಾರಿಗೊಳಿಸುತ್ತಿದೆ. ಜಿಬಿಎ ಅಧಿಕೃತ ಪೋರ್ಟಲ್‌ನಲ್ಲಿಯೂ ಆಸ್ತಿ ತೆರಿಗೆ, ಇ-ಆಸ್ತಿ ಸೇರಿದಂತೆ ಹಲವು ಡಿಜಿಟಲ್‌ ಸೇವೆಗಳನ್ನು ಒದಗಿಸಲಾಗುತ್ತಿದೆ.ಇದೀಗ ಸಾಪ್‌್ಟವೇರ್‌ ಹಾಗೂ ಡಿಜಿಟಲ್‌ ವ್ಯವಸ್ಥೆಗಳ ನಿರ್ವಹಣೆ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ಆಸ್ತಿ ಮಾಲೀಕರ ಮೇಲೆಯೇ ಪ್ರತ್ಯೇಕ ಶುಲ್ಕದ ಹೊರೆ ಹಾಕಿರುವುದು ಏಕೆ ಎಂದು ಮಾಜಿ ಉಪ ಮೇಯರ್‌ ಹಾಗೂ ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎಸ್‌‍.ಹರೀಶ್‌ ವಾಗ್ದಾಳಿ ನಡೆಸಿದ್ದಾರೆ.

ಜನರ ಕಣ್ಣಿಗೆ ಮಣ್ಣು ಎರಚಿ ಸೆಸ್‌‍ ಹೆಸರಲ್ಲಿ ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕುವ ಕಾರ್ಯವನ್ನು ನಿಲ್ಲಿಸದಿದ್ದರೆ ಬಿಜೆಪಿ ಪಕ್ಷದಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.ಈಗಾಗಲೇ ಆಸ್ತಿ ತೆರಿಗೆ ಪಾವತಿಸುವುದರ ಜತೆಗೆ ವಿವಿಧ ಸೆಸ್‌‍ಗಳು ಹಾಗೂ ಸೇವಾ ಶುಲ್ಕಗಳನ್ನು ಪಾವತಿಸುತ್ತಿದ್ದೇವೆ. ಇದರ ನಡುವೆ ಸಾಪ್‌್ಟವೇರ್‌ ಶುಲ್ಕದ ಹೆಸರಿನಲ್ಲಿ ಮತ್ತೊಂದು ಮೊತ್ತ ವಸೂಲಿ ಮಾಡುವುದು ಸರಿಯಲ್ಲ ಎನ್ನುವುದು ಅವರ ವಾದವಾಗಿದೆ. ಆಸ್ತಿ ನಿರ್ವಹಣೆ, ಕಟ್ಟಡದ ನಿರ್ವಹಣೆ, ನೀರು, ವಿದ್ಯುತ್‌ ಸೇರಿದಂತೆ ಎಲ್ಲದರ ವೆಚ್ಚ ಹೆಚ್ಚಾಗಿದೆ.

ಅದರ ನಡುವೆ ಪ್ರತಿ ವರ್ಷ ಹೊಸ ಹೊಸ ಶುಲ್ಕಗಳನ್ನು ವಿಧಿಸಿದರೆ ಸಾಮಾನ್ಯ ಆಸ್ತಿ ಮಾಲೀಕರಿಗೆ ಆರ್ಥಿಕ ಹೊರೆ ಹೆಚ್ಚಾಗಲಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಕಸದ ಸೆಸ್‌‍ನಿಂದ ವರ್ಷಕ್ಕೆ ಮೂರು ಸಾವಿರ ಕೋಟಿ ರೂ. ಹಣ ಪಡೆದುಕೊಳ್ಳುತ್ತಿದ್ದೀರಾ ಆ ಹಣವನ್ನು ಯಾವ ಕಾರ್ಯಕ್ಕೆ ಬಳಸುತ್ತಿದ್ದೀರಾ ಎಂಬ ಬಗ್ಗೆ ಮಾಹಿತಿ ನೀಡಿಲ್ಲ. ಇದೀಗ ಜಿಬಿಎಯ ಹೊಸ ಸಾಫ್ಟ್ ವೇರ್‌ ಶುಲ್ಕ ವಸೂಲಿಗೆ ಮುಂದಾಗಿರುವ ಯಾವ ಪುರುಷಾರ್ಥಕ್ಕೆ ಎಂದು ಅವರು ಪ್ರಶ್ನಿಸಿದ್ದಾರೆ.

ಸಮರ್ಥನೆ; ಹೊಸದಾಗಿ ಸಾಫ್‌್ಟವೇರ್‌ ಶುಲ್ಕ ವಿಧಿಸಲು ಮುಂದಾಗಿರುವ ಕ್ರಮವನ್ನು ಜಿಬಿಎ ವಿಶೇಷ ಆಯುಕ್ತ ಮೌನೀಶ್‌ ಮುದ್ಗಿಲ್‌ ಸಮಾರ್ಥಿಸಿಕೊಂಡಿದ್ದಾರೆ.ಹೌದು ನಾವು ಜಿಬಿಎ ಆಡಳಿತದ ದೃಷ್ಟಿಯಿಂದ ಸಾಫ್‌್ಟವೇರ್‌ ಶುಲ್ಕ ವಿಧಿಸಲು ತೀರ್ಮಾನಿಸಿದ್ದೇವೆ. ಪಂಚ ಪಾಲಿಕೆಗಳ ಆರ್ಥಿಕ ಬೆಳವಣಿಗೆ ದೃಷ್ಟಿಯಿಂದ ನಾವು ಇಂತಹ ಕ್ರಮ ಕೈಗೊಂಡಿದ್ದು ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

RELATED ARTICLES
spot_img

Latest News