Homeಅಂತಾರಾಷ್ಟ್ರೀಯಭಾರಿ ಚರ್ಚೆಗೆ ಗ್ರಾಸವಾಯ್ತು ತೈಲ ಆಮದು ನಿರ್ಬಂಧ ವಿನಾಯಿತಿ ಕುರಿತ ಟ್ರಂಪ್ ನಿರ್ಧಾರ

ಭಾರಿ ಚರ್ಚೆಗೆ ಗ್ರಾಸವಾಯ್ತು ತೈಲ ಆಮದು ನಿರ್ಬಂಧ ವಿನಾಯಿತಿ ಕುರಿತ ಟ್ರಂಪ್ ನಿರ್ಧಾರ

ವಾಷಿಂಗ್ಟನ್‌, ಅ.18- ರಷ್ಯಾದ ತೈಲ ಆಮದುಗಳಿಗೆ ಸಂಬಂಧಿಸಿದ ನಿರ್ಬಂಧಗಳು ಮತ್ತು ಸುಂಕಗಳ ಜಾರಿಗೆ 60 ದಿನಗಳ ವಿನಾಯಿತಿ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ ನಿರ್ಧಾರವು ಜಾಗತಿಕ ರಾಜಕೀಯ ಹಾಗೂ ಇಂಧನ ಮಾರುಕಟ್ಟೆಯಲ್ಲಿ ಚರ್ಚೆಗೆ ಕಾರಣವಾಗಿದೆ. ಈ ನಡುವೆ, ಭಾರತವು ಅಮೆರಿಕದ ಪ್ರಮುಖ ಮಿತ್ರ ಮತ್ತು ಪಾಲುದಾರ ರಾಷ್ಟ್ರವಾಗಿದ್ದು, ಭಾರತದ ಇಂಧನ ಅಗತ್ಯಗಳನ್ನು ಪರಿಗಣಿಸಿ ಮುಂದಿನ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ
ಹೇಳಿದ್ದಾರೆ.

ಭಾರತ ಮತ್ತು ಉಜ್ಬೇಕಿಸ್ತಾನ್‌ ಪ್ರವಾಸ ಕೈಗೊಳ್ಳುವ ಮುನ್ನ ಮಾತನಾಡಿದ ರೂಬಿಯೋ, ರಷ್ಯಾದ ಮೇಲಿನ ನಿರ್ಬಂಧಗಳು ಹಾಗೂ ರಷ್ಯಾದ ತೈಲ ಖರೀದಿಸುವ ದೇಶಗಳ ಮೇಲೆ ಸುಂಕ ವಿಧಿಸುವ ಕ್ರಮಗಳಿಂದ ಅಮೆರಿಕ ಮತ್ತು ಜಾಗತಿಕ ಆರ್ಥಿಕತೆಯ ಮೇಲೆ ಉಂಟಾಗಬಹುದಾದ ಪರಿಣಾಮಗಳನ್ನು ಪರಿಶೀಲಿಸಲು ಟ್ರಂಪ್‌ ಆಡಳಿತಕ್ಕೆ ಕಾಲಾವಕಾಶ ಅಗತ್ಯವಿದೆ ಎಂದು ತಿಳಿಸಿದರು.

ರಷ್ಯಾದಿಂದ ತೈಲ ಖರೀದಿಸುವ ದೇಶಗಳ ಮೇಲೆ ದಂಡನಾತಕ ಸುಂಕ ವಿಧಿಸಲು ಅವಕಾಶ ಕಲ್ಪಿಸುವ ಕಾನೂನಿನ ಪ್ರಮುಖ ನಿಬಂಧನೆಗಳಿಗೆ ಟ್ರಂಪ್‌ ಆಡಳಿತ ತಾತ್ಕಾಲಿಕ ವಿನಾಯಿತಿ ನೀಡಿದೆ. ಇದರಿಂದ ರಷ್ಯಾದ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವ ಭಾರತ ಸೇರಿದಂತೆ ಹಲವು ದೇಶಗಳಿಗೆ ಸದ್ಯಕ್ಕೆ ನಿರಾಳತೆ ದೊರೆಯುವ ಸಾಧ್ಯತೆಯಿದೆ.

ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವುದನ್ನು ತಕ್ಷಣವೇ ಸಂಪೂರ್ಣವಾಗಿ ಸ್ಥಗಿತಗೊಳಿಸುವುದು ಸುಲಭವಲ್ಲ. ಭಾರತ ತನ್ನ ಇಂಧನ ಮೂಲಗಳನ್ನು ವೈವಿಧ್ಯಗೊಳಿಸಲು ಕ್ರಮ ಕೈಗೊಂಡಿದ್ದರೂ, ದೇಶದ ಅಗತ್ಯಗಳನ್ನು ಪೂರೈಸಲು ರಷ್ಯಾದಿಂದ ಗಣನೀಯ ಪ್ರಮಾಣದ ಇಂಧನವನ್ನು ಪಡೆಯುತ್ತಿದೆ ಎಂದು ರೂಬಿಯೊ ವಿವರಿಸಿದರು.

ಜಾಗತಿಕ ಇಂಧನ ಪೂರೈಕೆಯಲ್ಲಿನ ವ್ಯತ್ಯಯಗಳು, ಇರಾನ್‌ಗೆ ಸಂಬಂಧಿಸಿದ ಯುದ್ಧದ ಪರಿಸ್ಥಿತಿ, ಸೌದಿ ಅರೇಬಿಯಾದಲ್ಲಿ ಹೌತಿ ದಾಳಿಗಳು ಹಾಗೂ ರಷ್ಯಾ-ಉಕ್ರೇನ್‌ ಸಂಘರ್ಷದ ಪರಿಣಾಮಗಳನ್ನು ಸಮಗ್ರವಾಗಿ ಪರಿಶೀಲಿಸಿದ ಬಳಿಕ ಮುಂದಿನ ಕ್ರಮ ನಿರ್ಧರಿಸಲಾಗುವುದು ಎಂದು ಅವರು ತಿಳಿಸಿದರು.

ಭಾರತವನ್ನು ಅಮೆರಿಕದ ಪ್ರಮುಖ ಮಿತ್ರ ರಾಷ್ಟ್ರವೆಂದು ಬಣ್ಣಿಸಿದ ರೂಬಿಯೋ, ಭಾರತದ ಇಂಧನ ಭದ್ರತೆ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ಪರಿಗಣಿಸುವ ಅಗತ್ಯವನ್ನು ಒತ್ತಿಹೇಳಿದರು. ಜಾಗತಿಕ ರಾಜಕೀಯ ಪರಿಸ್ಥಿತಿಯಲ್ಲಿ ಬದಲಾವಣೆಗಳಾಗುತ್ತಿರುವ ಸಂದರ್ಭದಲ್ಲಿ, ಮಿತ್ರ ರಾಷ್ಟ್ರಗಳ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳುವುದು ಮುಖ್ಯವಾಗಿದೆ ಎಂಬ ಸಂದೇಶವನ್ನು ಅವರ ಹೇಳಿಕೆ ನೀಡಿದೆ.

ಭಾರತಕ್ಕೆ ಭೇಟಿ ನೀಡಲಿರುವ ರೂಬಿಯೊ ಅವರ ಪ್ರವಾಸವು ದ್ವಿಪಕ್ಷೀಯ ಸಂಬಂಧಗಳು, ಇಂಧನ ಸಹಕಾರ ಮತ್ತು ಪ್ರಾದೇಶಿಕ ಭದ್ರತೆಯ ವಿಚಾರಗಳಲ್ಲಿ ಮಹತ್ವ ಪಡೆಯುವ ನಿರೀಕ್ಷೆಯಿದೆ.

ಟ್ರಂಪ್‌ ನಿರ್ಧಾರಕ್ಕೆ ಅಮೆರಿಕದಲ್ಲೇ ವಿರೋಧ:
ರಷ್ಯಾದ ಮೇಲಿನ ನಿರ್ಬಂಧಗಳಿಗೆ ತಾತ್ಕಾಲಿಕ ವಿನಾಯಿತಿ ನೀಡಿರುವ ಟ್ರಂಪ್‌ ನಿರ್ಧಾರಕ್ಕೆ ಅಮೆರಿಕದ ರಿಪಬ್ಲಿಕನ್‌ ಮತ್ತು ಡೆಮಾಕ್ರಟಿಕ್‌ ಪಕ್ಷಗಳ ಕೆಲವು ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಮೇಲಿನ ಒತ್ತಡ ಕಡಿಮೆಯಾಗುವುದರಿಂದ ಉಕ್ರೇನ್‌ ವಿರುದ್ಧದ ಯುದ್ಧ ಮುಂದುವರಿಯಲು ಅನುಕೂಲವಾಗಬಹುದು ಎಂಬುದು ಅವರ ಆತಂಕವಾಗಿದೆ.

ರಷ್ಯಾದ ತೈಲ ಖರೀದಿಸುವ ದೇಶಗಳ ಮೇಲೆ ಸುಂಕ ವಿಧಿಸುವುದಕ್ಕೆ ಸಂಬಂಧಿಸಿದ ಶಾಸನಕ್ಕೆ ಸೆನೆಟ್‌ನಲ್ಲಿ 8611 ಮತಗಳ ಬೆಂಬಲ ದೊರೆತಿದ್ದರೂ, ಅದರ ಜಾರಿಗೆ ವಿನಾಯಿತಿ ನೀಡಿರುವುದನ್ನು ಕೆಲವು ಶಾಸಕರು ಪ್ರಶ್ನಿಸಿದ್ದಾರೆ. ರಷ್ಯಾದ ಮೇಲೆ ಒತ್ತಡ ಮುಂದುವರಿಸಬೇಕು ಮತ್ತು ಇಂಧನ ಬೆಲೆ ಏರಿಕೆಗೆ ಕಾರಣವಾಗಿರುವ ಅಂಶಗಳನ್ನು ಪರಿಹರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಡೆಮಾಕ್ರಟಿಕ್‌ ಪಕ್ಷದ ಸೆನೆಟರ್‌ ಎಲಿಜಬೆತ್‌ ವಾರೆನ್‌ ಕೂಡ ಟ್ರಂಪ್‌ ನಿರ್ಧಾರವನ್ನು ಟೀಕಿಸಿದ್ದು, ರಷ್ಯಾಉಕ್ರೇನ್‌ ಯುದ್ಧದ ಹಿನ್ನೆಲೆಯಲ್ಲಿ ನಿರ್ಬಂಧಗಳ ಪರಿಣಾಮಕಾರಿತ್ವವನ್ನು ದುರ್ಬಲಗೊಳಿಸಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.

RELATED ARTICLES
spot_img

Latest News