ದುಬೈ, ಡಿ. 19- ಹದಿನೇಳನೇ ಐಪಿಎಲ್ ಆವೃತ್ತಿ ಅಂಗವಾಗಿ ಇದೇ ಮೊದಲ ಬಾರಿ ದುಬೈನಲ್ಲಿ ನಡೆಯುತ್ತಿರುವ ಮಿನಿ ಆ್ಯಕ್ಷನ್‍ನಲ್ಲಿ ವೆಸ್ಟ್‍ಇಂಡೀಸ್‍ನ ಟ್ವೆಂಟಿ-20 ನಾಯಕ ರೊಮ್ಮನ್ ಪೊವೆಲ್ ಅವರು 7.40 ಕೋಟಿಗೆ ರಾಜಸ್ಥಾನ್ ರಾಯಲ್ಸ್ ಗೆ ಬಿಕರಿಯಾಗಿದ್ದಾರೆ
ರೊಮ್ಮನ್ ಪೊವೆಲ್ ಅವರು ಐಪಿಎಲ್ ಮಿನಿ ಹರಾಜಿನಲ್ಲಿ 1 ಕೋಟಿ ಮೂಲ ಬೆಲೆ ಘೋಷಿಸಿಕೊಂಡಿದ್ದರು, ಆವರ ಖರೀದಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ಮೊದಲಿಗೆ ಬಿಡ್ ನಡೆಸಿತು. ಆದರೆ ನಂತರ ಇವರ ಖರೀದಿಗೆ ತೀವ್ರ ಜಿದ್ದಾಜಿದ್ದಿನ ಪೈಪೋಟಿ ನಡೆಸಿದ ರಾಜಸ್ಥಾನ್ ರಾಯಲ್ಸ್ ತಂಡವು 7.40 ಕೋಟಿ ಕೊಟ್ಟು ತಮ್ಮ ತಂಡಕ್ಕೆ ಖರೀದಿಸಿ ಬ್ಯಾಟಿಂಗ್ ಬಲವನ್ನು ಹೆಚ್ಜಿಸಿಕೊಂಡಿದ್ದಾರೆ.
ಗ್ಯಾನವ್ಯಾಪಿ ಮಸೀದಿಯಲ್ಲಿ ಹಿಂದೂಗಳ ಪೂಜೆ ಪ್ರಶ್ನಿಸಿ ಮುಸ್ಲಿಮರು 5 ಅರ್ಜಿಗಳು ವಜಾ
ಬಲಗೈ ಬ್ಯಾಟರ್ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟ್ವೆಂಟಿ-20 ಸರಣಿಯಲ್ಲಿ 187.50 ಸ್ಟ್ರೈಕ್‍ರೇಟ್‍ನಲ್ಲಿ 120 ರನ್ ಗಳಿಸುವ ಮೂಲಕ ಫ್ರಾಂಚೈಸಿಗಳ ಗಮನ ಸೆಳೆದಿದ್ದರು. ಪೊವೆಲ್ ಅವರು ಇದುವರೆಗೂ 184 ಟ್ವೆಂಟಿ-20 ಪಂದ್ಯಗಳನ್ನು ಆಡಿದ್ದು 139.50 ಸ್ಟ್ರೈಕ್‍ರೇಟ್‍ನಲ್ಲಿ 3369 ರನ್ ಗಳಿಸಿದ್ದಾರೆ.
ಟ್ರಾವಿಸ್ ಹೆಡ್‍ಗೆ 6.80 ಕೋಟಿ
ದುಬೈ, ಡಿ.19- ಏಕದಿನ ವಿಶ್ವಕಪ್‍ನ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಶತಕ ಸಿಡಿಸಿ (137ರನ್) ಆಸ್ಟ್ರೇಲಿಯಾಕ್ಕೆ 6ನೇ ಬಾರಿ ಟ್ರೋಫಿ ಗೆದ್ದುಕೊಟ್ಟಿದ್ದ ಟ್ರಾವಿಸ್ ಹೆಡ್ ಅವರು ನಿರೀಕ್ಷೆಯಂತೆ ಮಿನಿ ಹರಾಜಿನಲ್ಲಿ ತಮ್ಮ ಮೂಲ ಬೆಲೆಗಿಂತ ದುಪ್ಪಟ್ಟು ಹಣಕ್ಕೆ ಬಿಕರಿಯಾಗಿದ್ದಾರೆ. ಹದಿನೇಳನೇ ಆವೃತ್ತಿಯ ಮಿನಿ ಹರಾಜಿನಲ್ಲಿ ಟ್ರಾವಿಸ್ ಹೆಡ್ ಅವರು ತಮ್ಮ ಮೂಲ ಬೆಲೆಯನ್ನು 2 ಕೋಟಿ ಎಂದು ಘೋಷಿಸಿಕೊಂಡಿದ್ದರು. ಹೆಡ್ರನ್ನು ಖರೀದಿಸಿ ತಮ್ಮ ತಂಡದ ಬ್ಯಾಟಿಂಗ್ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಫ್ರಾಂಚೈಸಿಗಳು ಒಲವು ತೋರಿದ್ದರು.
16ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಸನ್‍ರೈಸರ್ಸ್ ಹೈದ್ರಾಬಾದ್ ಫ್ರಾಂಚೈಸಿ ಶತಾಯಗತಾಯ ಆಸ್ಟ್ರೇಲಿಯಾದ ಸೋಟಕ ಆಟಗಾರನನ್ನು ಖರೀದಿಸಿ ಬಿಡ್ ಕೂಗಿತ್ತು.
ಎಸ್‍ಆರ್‍ಎಚ್ ಹೆಡ್ ಅವರನ್ನು 4 ಕೋಟಿ ಬಿಡ್ ಕರೆದಿದ್ದಾಗ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಇವರ ಖರೀದಿಗೆ ಮುಂದಾಯಿತು. ಎಸ್‍ಆರ್‍ಎಚ್ ಹಾಗೂ ಸಿಎಸ್‍ಕೆಗೆ ನಡುವೆ ತೀವ್ರ ಪೈಪೆÇೀಟಿ ನಡೆಯಿತು. ಸಿಎಸ್‍ಕೆ ಫ್ರಾಂಚೈಸಿ 6.2 ಕೋಟಿ ರೂ.ವರೆಗೆ ಬಿಡ್ ಕರೆಯಿತಾದರೂ ಕೊನೆಗೂ ಹೆಡ್ 6.8 ಕೋಟಿಗೆ ಸನ್‍ರೈಸರ್ಸ್ ಹೈದ್ರಾಬಾದ್ ಪಾಲಾಗಿದ್ದಾರೆ.
ಹರಾಜಿನಲ್ಲಿ ಬಿಕರಿಯಾ ಸ್ಟಾರ್ ಆಟಗಾರರು:
- ಹ್ಯಾರಿ ಬ್ರೂಕ್- 4 ಕೋಟಿ- ಡೆಲ್ಲಿ ಕ್ಯಾಪಿಟಲ್ಸ್
- ವಾನಿಂದು ಹಸರಂಗ -1.5 ಕೋಟಿ- ಎಸ್‍ಆರ್‍ಎಚ್
ಬಿಕರಿಯಾಗದೆ ಉಳಿದ ಕನ್ನಡಿಗರು
ದುಬೈ, ಡಿ.19- ವಿಶ್ವದ ಅತ್ಯಂತ ಶ್ರೀಮಂತ ಲೀಗ್‍ನ ಮಿನಿ ಹರಾಜಿನಲ್ಲಿ ಕರ್ನಾಟಕದ 18 ಆಟಗಾರರು ಹೆಸರು ನೋಂದಾಯಿಸಿದ್ದು, ಮನೀಷ್ ಪಾಂಡೆ, ಕರುಣ್‍ನಾಯರ್‍ರಂತಹ ಆಟಗಾರರು ಹೆಚ್ಚಿನ ಮೊತ್ತಕ್ಕೆ ಬಿಕರಿಯಾಗುತ್ತಾರೆ ಎಂದು ಅಂದಾಜಿಸಲಾಗಿತ್ತು. ಆದರೆ ಇವರ ಖರೀದಿಗೆ ಆರ್‍ಸಿಬಿ ಸೇರಿದಂತೆ ಯಾವುದೇ ಫ್ರಾಂಚೈಸಿ ಒಲವು ತೋರಲಿಲ್ಲ.
ಅಲ್ಲದೆ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವನ್ ಸ್ಮಿತ್ ಹಾಗೂ ದಕ್ಷಿಣ ಆಫ್ರಿಕಾದ ಸ್ಪೋಟಕ ಆಟಗಾರ ರಿಲೆ ರೊಸ್ಸೊ ಅವರು 2 ಕೋಟಿ ಮೂಲಬೆಲೆ ಇದ್ದರೂ ಇವರು ಕೂಡ ಖರೀದಿಯಾಗಲಿಲ್ಲ.