ಯೆಮೆನ್,ಜ.12- ಹೌತಿ ಬಂಡುಕೋರರ ಮೇಲೆ ಅಮೆರಿಕ ಮತ್ತು ಬ್ರಿಟನ್ ಸೇನೆಗಳು ನಡೆಸುತ್ತಿರುವ ದಾಳಿಯನನು ಇರಾನ್ ಖಂಡಿಸಿದೆ. ಯೆಮೆನ್‍ನಲ್ಲಿ ಹೌತಿಗಳ ಮೇಲೆ ಯುಎಸ್ -ಬ್ರಿಟನ್ ದಾಳಿಯನ್ನು ಖಂಡಿಸುತ್ತೇವೆ ಅವರ ಧೋರಣೆ ಈ ಪ್ರದೇಶದಲ್ಲಿ ಅಭದ್ರತೆ ಮತ್ತು ಅಸ್ಥಿರತೆಯನ್ನು ಉತ್ತೇಜಿಸುತ್ತದೆ ಎಂದು ಇರಾನ್ ಎಚ್ಚರಿಸಿದೆ.
ಅಮೆರಿಕ ಮತ್ತು ಬ್ರಿಟನ್ ಸೇನೆಗಳು ಯೆಮೆನ್‍ನಲ್ಲಿ ಹೌತಿ ಬಂಡುಕೋರರ ಮೇಲೆ ನಡಸುತ್ತಿರುವ ದಾಳಿಯನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ಇರಾನ್ ರಾಜ್ಯ ಮಾಧ್ಯಮ ವರದಿ ಮಾಡಿದೆ. ಇರಾನ್‍ನ ವಿದೇಶಾಂಗ ಸಚಿವಾಲಯದ ವಕ್ತಾರ ನಾಸರ್ ಕನ್ನಾನಿ, ಇಂದು ಬೆಳಿಗ್ಗೆ ಯುನೈಟೆಡ್ ಸ್ಟೇಟ್ಸ ಮತ್ತು ಯುನೈಟೆಡ್ ಕಿಂಗ್‍ಡಮ್ ಸೇನಾಪಡೆಗಳು ಯೆಮೆನ್‍ನ ಹಲವಾರು ನಗರಗಳ ಮೇಲೆ ನಡೆಸಿದ ಮಿಲಿಟರಿ ದಾಳಿಯನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದು ಹೇಳಿದ್ದಾರೆ.
ರಾಮಮಂದಿರ ಬಗ್ಗೆ ಭಾವನಾತ್ಮಕವಾಗಿದ್ದೇನೆ ; ಪ್ರಧಾನಿ ಮೋದಿ
ಈ ದಾಳಿಗಳು ಯೆಮೆನ್‍ನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯ ಸ್ಪಷ್ಟ ಉಲ್ಲಂಘನೆ ಮತ್ತು ಅಂತರರಾಷ್ಟ್ರೀಯ ಕಾನೂನುಗಳ ಉಲ್ಲಂಘನೆಯಾಗಿದೆ ಎಂದು ಅವರು ಎಚ್ಚರಿಸಿದ್ದಾರೆ. ನಾವು ಹೌತಿಗಳ ಪರವಾಗಿದ್ದು, ಅನಿವಾರ್ಯತೆ ಎದುರಾದರೆ ನಾವು ಯುದ್ಧಕ್ಕೆ ಧುಮಕಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.