Sunday, April 28, 2024
Homeರಾಜ್ಯಕೇಂದ್ರ ಸರ್ಕಾರದ ಸೇವೆಗೆ ಬಲವಂತದ ಶಿಫಾರಸ್ಸು : ಐಎಎಸ್-ಐಪಿಎಸ್ ಅಧಿಕಾರಿಗಳ ಅಸಮಾಧಾನ

ಕೇಂದ್ರ ಸರ್ಕಾರದ ಸೇವೆಗೆ ಬಲವಂತದ ಶಿಫಾರಸ್ಸು : ಐಎಎಸ್-ಐಪಿಎಸ್ ಅಧಿಕಾರಿಗಳ ಅಸಮಾಧಾನ

ಬೆಂಗಳೂರು,ಜ.12- ರಾಜ್ಯದ ಕೆಲವು ಐಪಿಎಸ್ ಮತ್ತು ಐಎಎಸ್ ಅಧಿಕಾರಿಗಳನ್ನು ಕೇಂದ್ರ ಸರ್ಕಾರದ ಸೇವೆಗೆ ಬಲವಂತವಾಗಿ ಶಿಫಾರಸ್ಸು ಮಾಡಿರುವ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆ ಕೇಂದ್ರ ಸೇವೆಗೆ ತೆರಳಲು ರಾಜ್ಯದ ಕೆಲವು ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಕರ್ನಾಟಕದಿಂದ ನಾವೇಕೆ ಕೇಂದ್ರ ಸೇವೆಗೆ ಹೋಗಬೇಕು ಎಂಬ ಮೂಲಭೂತ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.

ನಿಯಮಗಳ ಪ್ರಕಾರ, ಐಪಿಎಸ್ ಮತ್ತು ಐಎಎಸ್ ಅಧಿಕಾರಿಗಳು ಒಂದು ಬಾರಿ ಆಯಾ ರಾಜ್ಯಗಳಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡರೆ ವಿಶೇಷ ಸಂದರ್ಭಗಳಲ್ಲಿ ಮಾತ್ರ ಅವರನ್ನು ಕೇಂದ್ರ ಸೇವೆಗೆ ನಿಯೋಜಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿರುತ್ತದೆ. ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಕೆಲವು ಐಪಿಎಸ್ ಅಧಿಕಾರಿಗಳನ್ನು ಉದ್ದೇಶಪೂರಕವಾಗಿಯೇ ಕೇಂದ್ರ ಸೇವೆಗೆ ಶಿಫಾರಸ್ಸು ಮಾಡಿದೆ ಎಂಬ ಆರೋಪ ಕೇಳಿಬಂದಿದೆ.

ಕೆಲವು ಅಧಿಕಾರಿಗಳು ಕೇಂದ್ರದ ನಿದೇಶನದಂತೆ ಕರ್ತವ್ಯ ನಿರ್ವಹಿಸುತ್ತಿರುವ ಹಾಗೂ ಸರ್ಕಾರದ ಕೆಲವು ಗೌಪ್ಯ ಮಾಹಿತಿಗಳನ್ನು ಕೇಂದ್ರಕ್ಕೆ ರವಾನೆ ಮಾಡುತ್ತಿದ್ದಾರೆ ಎಂಬ ಹಿನ್ನೆಲೆಯಲ್ಲಿ ಒಂದು ಪಕ್ಷದ ಸಿದ್ಧಾಂತದ ಪರವಾಗಿ ಇರುವ ಅಧಿಕಾರಿಗಳನ್ನು ಕೇಂದ್ರಕ್ಕೆ ನಿಯೋಜನೆಗೊಳಿಸಲು ಸರ್ಕಾರ ಮುಂದಾಗಿತ್ತು.

ಈ ಹಿಂದೆಯೂ ರಾಜ್ಯದ ನೂರಾರು ಐಪಿಎಸ್ ಮತ್ತು ಐಎಎಸ್ ಅಧಿಕಾರಿಗಳನ್ನು ಕೇಂದ್ರಸರ್ಕಾರದ ಸೇವೆಗೆ ನಿಯೋಜನೆ ಮಾಡಿರುವ ನಿದರ್ಶನಗಳಿವೆ. ದಕ್ಷ ಐಪಿಎಸ್ ಅಧಿಕಾರಿ ಎನಿಸಿದ್ದ ಸೋನಿಯಾ ನಾರಂಗ್ ಪ್ರಸ್ತುತ ಎನ್‍ಐ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದೇ ರೀತಿ ಐಎಎಸ್, ಐಪಿಎಸ್, ಐಎಫ್‍ಎಸ್ ಅಧಿಕಾರಿಗಳು ಕೆಲ ಸಂದರ್ಭಗಳಲ್ಲಿ ಕೇಂದ್ರ ಸೇವೆಗೆ ನಿಯೋಜನೆಗೊಳ್ಳುತ್ತಾರೆ.

ರೊಚ್ಚಿಗೆದ್ದ ಅಮೆರಿಕ-ಬ್ರಿಟನ್, ಹೌತಿ ಬಂಡುಕೋರರ ಮೇಲೆ ಏರ್ ಸ್ಟ್ರೈಕ್

ಪ್ರಸ್ತುತ ರಾಜ್ಯಸರ್ಕಾರ ಕರ್ನಾಟಕದಲ್ಲಿರುವ ಎಸ್ಪಿ ದರ್ಜೆಯ ಅಕಾರಿಗಳನ್ನು ಕೇಂದ್ರ ಗೃಹ ಇಲಾಖೆ ಕೇಂದ್ರದ ಸೇವೆಗೆ ಬಲವಂತವಾಗಿ ಶಿಫಾರಸ್ಸು ಮಾಡಿರುವ ಆರೋಪ ಕೇಳಿಬಂದಿದ್ದು, ತಮ್ಮಲ್ಲಿ ಒಂದು ಮಾತೂ ಕೇಳದೆ ಶಿಫಾರಸ್ಸು ಮಾಡಲಾಗಿದೆ ಎಂದು ಕೆಲವು ಐಪಿಎಸ್ ಅಧಿಕಾರಿಗಳು ಅಸಮಾಧಾನ ಹೊರಹಾಕಿದ್ದಾರೆ. ಇದರ ವಿರುದ್ಧ ಕೇಂದ್ರ ಸರ್ಕಾರಕ್ಕೆ ಲಿಖಿತವಾಗಿ ಅಭಿಪ್ರಾಯ ತಿಳಿಸಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.

ಅಚ್ಚರಿಯ ವಿಷಯ ಎಂದರೆ ಕೇಂದ್ರ ಗೃಹ ಇಲಾಖೆಯು ಒಟ್ಟು 28 ಎಸ್ಪಿ ದರ್ಜೆಯ ಅಧಿಕಾರಿಗಳನ್ನು ಕೇಂದ್ರದ ಸೇವೆಗೆ ಶಿಫಾರಸ್ಸು ಮಾಡಿದ್ದು, ಆ ಪೈಕಿ 26 ಐಪಿಎಸ್ ಅಧಿಕಾರಿಗಳು ಕರ್ನಾಟಕದವರೇ ಆಗಿದ್ದಾರೆ. ಹೀಗಾಗಿ ಒತ್ತಾಯ ಪೂರ್ವಕವಾಗಿ ಕೇಂದ್ರದ ಸೇವೆಗೆ ಶಿಫಾರಸ್ಸು ಮಾಡಿರುವ ಹಿನ್ನೆಲೆ ಡಿಪಿಆರ್ ವಿರುದ್ಧ ಕೆಲವು ಐಪಿಎಸ್ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದು, ತಮ್ಮ ಅಭಿಪ್ರಾಯ ಕೇಳದೆಯೇ ಡಿಪಿಎಆರ್ ಹೆಸರು ಕಳುಹಿಸಿದೆ ಎಂದು ಅತೃಪ್ತಿ ತೋರಿಸಿರುವ ಕೆಲವರು ಶಿಫಾರಸ್ಸನ್ನು ತಿರಸ್ಕರಿಸಲು ನಿರ್ಧಾರ ಮಾಡಿದ್ದಾರೆ.

ಬೆಂಗಳೂರಿನ ಡಿಸಿಪಿಗಳಾದ ಸಿ.ಕೆ.ಬಾಬಾ, ಎಸ್.ಗಿರೀಶ್, ಡಿ.ದೇವರಾಜ್, ಡಿ.ಆರ್.ಸಿರಿಗೌರಿ, ಅಬ್ದುಲ್ ಅಹದ್, ಅಮೃತ್ ಪ್ರಕಾಶ್ ನಿಖಂ, ಎಸ್ಪಿಗಳಾದ ಇಲಕಿಯಾ ಕರುಣಾಕರನ್, ಡಾ.ಭೀಮಾಶಂಕರ್ ಗುಳೇದ್, ಧರ್ಮೇಂದ್ರ ಕುಮಾರ್ ಮೀನಾ, ಶ್ರೀನಾಥ್ ಮಹದೇವ ಜೋಶಿ ಸೇರಿದಂತೆ ಇತರರನ್ನು ಕೇಂದ್ರದ ಸೇವೆಗೆ ಶಿಫಾರಸ್ಸು ಮಾಡಲಾಗಿದೆ.

ಕರ್ನಾಟಕ ಮೂಲದ ಸವಾದ್‍ಗೆ ಇತ್ತು ಪಿಎಫ್‍ಐ ಸಹಾನುಭೂತಿ

ಈ ಪೈಕಿ ಕೆಲವು ಅಧಿಕಾರಿಗಳು ಶಿಫಾರಸ್ಸನ್ನು ತಿರಸ್ಕರಿಸಲು ನಿರ್ಧಾರ ಮಾಡಿದ್ದು, ಈ ಸಂಬಂಧ ಕೇಂದ್ರಕ್ಕೆ ಲಿಖಿತವಾಗಿ ಅಭಿಪ್ರಾಯ ತಿಳಿಸಲು ಚಿಂತನೆ ನಡೆಸಿದ್ದಾರೆ. 2012 ರಲ್ಲಿ ಮುಂಬಡ್ತಿ ಪಡೆದಿದ್ದ ಕೆಲ ಕೆಎಸ್‍ಪಿಎಸ್ ಅಧಿಕಾರಿಗಳು ಎರವಲು ಸೇವೆಗೆ ಬಲವಂತವಾಗಿ ಕಳುಹಿಸಲು ಮುಂದಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.

RELATED ARTICLES

Latest News