Wednesday, February 28, 2024
Homeಮನರಂಜನೆಪುನೀತ್‍ ರಾಜ್‍ಕುಮಾರ್ ಪುತ್ಥಳಿಗೆ ಅವಮಾನ, ಅಭಿಮಾನಿಗಳ ಆಕ್ರೋಶ

ಪುನೀತ್‍ ರಾಜ್‍ಕುಮಾರ್ ಪುತ್ಥಳಿಗೆ ಅವಮಾನ, ಅಭಿಮಾನಿಗಳ ಆಕ್ರೋಶ

ಶಿವಮೊಗ್ಗ , ಜ.12- ಪವರ್‌ಸ್ಟಾರ್ ಪುನೀತ್‍ರಾಜ್‍ಕುಮಾರ್ ಅವರು ನಮ್ಮನ್ನು ಅಗಲಿ ಎರಡು ವರ್ಷಗಳು ಕಳೆದಿದ್ದರೂ ಅಭಿಮಾನಿಗಳ ಮನದಲ್ಲಿ ಸದಾ ಮನೆ ಮಾಡಿದ್ದಾರೆ. ಆದರೆ ಅಪ್ಪು ಫ್ಯಾನ್ಸ್‍ನ ಕೋಪ ಕೆರಳಿಸುವಂತಹ ಕೆಲಸ ಶಿವಮೊಗ್ಗ ಜಿಲ್ಲೆಯ ರಿಪ್ಪನ್‍ಪೇಟೆಯಲ್ಲಿ ನಡೆದಿದೆ.

ಅಪ್ಪುವಿಗೆ ಗೌರವ ಸಲ್ಲಿಸುವ ಸಲುವಾಗಿ ರಾಜ್ಯದ ಅನೇಕ ಗ್ರಾಮಗಳಲ್ಲಿ ಪುನೀತ್ ರಾಜ್‍ಕುಮಾರ್ ಅವರ ನಾಮಫಲಕ ಹಾಗೂ ಪ್ರತಿಮೆಗಳನ್ನು ಸ್ಥಾಪಿಸಿ ಅಭಿಮಾನಿಗಳು ತಮ್ಮ ಪ್ರೇಮವನ್ನು ಮೆರೆದಿದ್ದಾರೆ.

ಶಿವಮೊಗ್ಗದ ರಿಪ್ಪನ್‍ಪೇಟೆಯಲ್ಲೂ ಕೂಡ ಅಪ್ಪು ಫ್ಯಾನ್ಸ್ ದೊಡ್ಡಮನೆ ಹುಡುಗನ ಪ್ರತಿಮೆ ಹಾಗೂ ನಾಮಫಲಕವನ್ನು ಸ್ಥಾಪಿಸಿದ್ದು , ಯಾರೋ ಕಿಡಿಗೇಡಿಗಳು ಅಪ್ಪು ಪ್ರತಿಮೆಯನ್ನು ನೆಲಕ್ಕುರಿಳಿಸಿ ಭಗ್ನಗೊಳಿಸಿರುವುದಲ್ಲದೆ, ನಾಮಫಲಕಕ್ಕೆ ಬಣ್ಣ ಬಳಿದು ಅಪಮಾನವೆಸಗಿದ್ದಾರೆ.

ರೊಚ್ಚಿಗೆದ್ದ ಅಮೆರಿಕ-ಬ್ರಿಟನ್, ಹೌತಿ ಬಂಡುಕೋರರ ಮೇಲೆ ಏರ್ ಸ್ಟ್ರೈಕ್

ಕಿಡಿಗೇಡಿಗಳ ಈ ಕೃತ್ಯವನ್ನು ಕಟುವಾಗಿ ಖಂಡಿಸಿರುವ ರಾಜವಂಶದ ಫ್ಯಾನ್ಸ್ ಸಂಘದ ಅಭಿಮಾನಿಗಳು, ಇಂತಹ ಕೃತ್ಯವೆಸಗಿರುವ ಕಿಡಿಗೇಡಿಗಳನ್ನು ಪೊಲೀಸರು ಪತ್ತೆ ಹಚ್ಚಿ ಕಠಿಣ ಕ್ರಮಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯದೆಲ್ಲೆಡೆ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

RELATED ARTICLES

Latest News