Friday, November 22, 2024
Homeಕ್ರೀಡಾ ಸುದ್ದಿ | Sportsಜಪಾನ್ ಸೋಲಿಸಿ ಏಷ್ಯನ್ ಕಪ್ ಸೆಮಿಫೈನಲ್‌ಗೆ ಇರಾನ್ ಎಂಟ್ರಿ

ಜಪಾನ್ ಸೋಲಿಸಿ ಏಷ್ಯನ್ ಕಪ್ ಸೆಮಿಫೈನಲ್‌ಗೆ ಇರಾನ್ ಎಂಟ್ರಿ

ಅಲ್ ರಯಾನ್ (ಕತಾರ್), ಫೆ 4:ಇಲ್ಲಿ ನಡೆದ ಏಷ್ಯನ್ ಕಪ್ ಪುಟ್‍ಬಾಲ್ ಪಂದ್ಯಾವಳಿಯಲ್ಲಿ ಜಪಾನ್ ವಿರುದ್ದ 2-1 ಗೋಲಿನ ಅಂತರದಲ್ಲಿ ಸೋಲಿಸಿ ಇರಾನ್‍ ಸೆಮಿಫೈನಲ್ ತಲುಪಿದೆ. ಎಜುಕೇಶನ್ ಸಿಟಿ ಸ್ಟೇಡಿಯಂನಲ್ಲಿ ನಡೆದ ಕ್ವಾರ್ಟರ್ಫೈನಲ್ ಪಂದ್ಯದ ಮೊದಲಾರ್ಧದ 28ನೇ ನಿಮಿಷದಲ್ಲಿ ಜಪಾನ್‍ನ ಸ್ಟಾರ್ ಆಟಗಾರ ಹಿಡೆಮಾಸಾ ಮೊರಿಟಾ ಗೋಲು ಭಾರಿಸಿ ತಂಡಕ್ಕೆ ಹುಮ್ಮಸ್ಸು ತಂದುಕೊಟ್ಟಿತ್ತು.ಆದರೆ ಬಹುಬೇಗನೆ ಇರಾನ್ ಆಟಗಾಗರು ಲಯಕ್ಕೆ ಬಂದು ಆಕ್ರಮಕಾರಿ ಆಟ ಪ್ರದರ್ಶಿಸಿದರು ಇದರಿಂದ ಮೊಹಮ್ಮದ್ ಮೊಹೆಬಿ ಗೋಲುಗಳಿಸುವ ಮೂಲಕ ಸಮಭಲ ಸಾದಿಸಿತು.

ನಿರ್ಣಾಯಕ ದ್ವಿತಿಯಾರ್ಥದಲ್ಲಿ ಎರಡೂ ತಂಡದ ಆಟಗಾರರು ಅದ್ಬುತ ಆಟ ಪ್ರದರ್ಶಿಸಿದರು ಆದರೆ ಇನ್ನೇನು ಪಂದ್ಯ ಮುಗಿದು ಪಿನಾಲ್ಟಿ ಶೂಟ್ ಔಟ್ ಬಾಕಿ ಎಂದು ಎಲ್ಲರು ಅಂದುಕೊಂಡರು. ಆದರೆ ಕೊನೆಯ ನಿಮಿಷದ ಬಂದ ಪೆನಾಲ್ಟಿಯಿಂದ ಅಲಿರೆಜಾ ಜಹಾನ್‍ಬ ಗೋಲು ಗಳಿಸಿ ಇರಾನ್ 2-1 ಅಂತರದ ನಿವಾರ ಜಪಾನ್ ವಿರುದ್ಧ ಜಯ ಸಾಧಿಸಿತು. 20 ವರ್ಷದ ನಂತರ (2004) ಎರಡನೇ ಬಾರಿಗೆ ಏಷ್ಯನ್ ಕಪ್ ಸೆಮಿಫೈನಲ್‍ನಲ್ಲಿ ಸ್ಥಾನ ಪಡೆಯಿತು.

ಕೋಲ್ಕತಾಗೆ ಶೀಘ್ರರೈಲು ಸಂಪರ್ಕ : ಸಿಎಂ ಮಾಣಿಕ್ ಸಹಾ

ಗೆಲುವಿಗೆ ನಾವು ಹೆಮ್ಮೆಪಡಬೇಕು ,ಆಟಗಾರರು ತಮ್ಮಲ್ಲಿರುವ ಎಲ್ಲವನ್ನೂ ನೀಡಿದರು ಇದರಿಂದ ಫಲಿತಾಂಶವು ಇರಾನ್ ಫೆಟ್‍ಬಾಲ್‍ಗೆ ಮಹತ್ವದ ತಿರುವು ಎಂದು ನಾನು ಭಾವಿಸುತ್ತೇನೆ ಎಂದು ಇರಾನ್ ಕೋಚ್ ಅಮೀರ್ ಘಲೆನೋಯಿ ಹೇಳಿದ್ದಾರೆ

ನಾವು ಹಲವು ಅಂಶಗಳಲ್ಲಿ ಸುಧಾರಿಸಬೇಕಾಗಿದೆ.ಈ ಪಂದ್ಯಾವಳಿಯಲ್ಲಿ ನಾವು ಎಲ್ಲಾ ಐದು ಪಂದ್ಯಗಳಲ್ಲಿ ಒಂದು ಗೋಲು ಬಿಟ್ಟುಕೊಟ್ಟಿದ್ದೇವೆ ಇಮದಿನ ಪಂದ್ಯದಲ್ಲಿ ಎದುರಾಳಿ ಆಟಗಾಗರರ ಒತ್ತಡವನ್ನು ನಿಭಾಯಿಸಲು ನಮಗೆ ಸಾಧ್ಯವಾಗಲಿಲ್ಲ ಎಂದು ಜಪಾನ್ ಕೋಚ್ ಹಜಿಮೆ ಮೊರಿಯಾಸು ತಿಳಿಸಿದ್ದಾರೆ.

ಬುಧವಾರ ನಡಯುವ ಹಣಾಹಣಿಯಲ್ಲಿ ಇರಾನ್ ಮತ್ತು ಕತಾರ್ ನಡುವೆ ಸಮೀಪೈನಲ್ ಪಂದ್ಯ ನಡೆಯಲಿದೆ.ವಿಜೇತ ತಂಡ ಫೆ.10ರಂದು ನಡೆಯುವ ಫೈನಲ್‍ನಲ್ಲಿ ದಕ್ಷಿಣ ಕೊರಿಯಾ ಅಥವಾ ಜೋರ್ಡಾನ್ ತಂಡವನ್ನು ಎದುರಿಸಲಿದೆ.

RELATED ARTICLES

Latest News