Thursday, May 2, 2024
Homeರಾಜ್ಯಜನಾರ್ಧನರೆಡ್ಡಿ ಬಿಜೆಪಿಗೆ ಕರೆತರಲು ಯತ್ನ

ಜನಾರ್ಧನರೆಡ್ಡಿ ಬಿಜೆಪಿಗೆ ಕರೆತರಲು ಯತ್ನ

ಬೆಂಗಳೂರು, ನ.20- ಆಕ್ರಮ ಗಣಿಗಾರಿಕೆ ಪ್ರಕಣದಿಂದ ಜೈಲು ಪಾಲಾಗಿ ಬಿಜೆಪಿಯಿಂದ ದೂರ ಸರಿದಿದ್ದ ಮಾಜಿ ಸಚಿವ ಹಾಗೂ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಮತ್ತು ಹಾಲಿ ಶಾಸಕ ಗಾಲಿ ಜನಾರ್ಧನರೆಡ್ಡಿ ಅವರನ್ನು ಪುನಃ ಮಾತೃ ಪಕ್ಷಕ್ಕೆ ಕರೆತರುವ ಬಗ್ಗೆ ಚರ್ಚೆ ಪಕ್ಷದ ವಲಯದಲ್ಲಿ ಚರ್ಚೆ ಆರಂಭವಾಗಿದೆ.

ಲೋಕಸಭಾ ಚುನಾವಣೆ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಗೆಲ್ಲಲು ತಂತ್ರಗಾರಿಕೆ ಹೆಣೆಯತ್ತಿದ್ದು, ಇದರ ಭಾಗವಾಗಿಯೇ ಕೆಕೆಪಿಪಿ ಪಕ್ಷದ ಸಂಸ್ಥಾಪಕ ಗಾಲಿ ಜನಾರ್ಧನ್ ರೆಡ್ಡಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಸರ್ವ ಯತ್ನಗಳು ನಡೆಯುತ್ತಿವೆ.

ಅಕ್ರಮ ಗಣಿಗಾರಿಕೆ ಆರೋಪ ಹಿನ್ನೆಲೆ ಗಾಲಿ ಜನಾರ್ದನ ರೆಡ್ಡಿ ಕಳೆದ ಒಂದು ದಶಕದಿಂದ ರಾಜಕೀಯದಿಂದ ದೂರ ಉಳಿದಿದ್ದರು. 2023ರ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಪ್ರವೇಶಿಸಿ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸುವ ಮೂಲಕ ತೀವ್ರ ಕುತೂಹಲ ಮೂಡಿಸಿದ್ದರು.

ನೂತನ ಪಕ್ಷ ಸ್ಥಾಪನೆ ಮೂಲಕ ಪರೋಕ್ಷವಾಗಿ ಬಿಜೆಪಿಗೆ ಸವಾಲೊಡ್ಡಿದ್ದರು. ರೆಡ್ಡಿಯವರ ಈ ತಂತ್ರಗಾರಿಕೆ ಮತ ವಿಭಜನೆಗೂ ಕಾರಣವಾಗಿತ್ತು. ಕೆಆರ್‍ಪಿ ಪಕ್ಷದಿಂದ ರಾಜ್ಯದ ನಾನಾ ಭಾಗಗಳಲ್ಲಿಅಭ್ಯರ್ಥಿಗಳನ್ನು ನಿಲ್ಲಿಸಿದ್ದ ರೆಡ್ಡಿ, ಈ ಪೈಕಿ ಗಂಗಾವತಿ ಕ್ಷೇತ್ರದಿಂದ ಸ್ರ್ಪಧಿಸಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ರಾಜ್ಯದಲ್ಲಿ ಪಕ್ಷದಿಂದ ಗೆದ್ದ ಏಕೈಕ ಶಾಸಕರು ಎನ್ನಿಸಿಕೊಂಡಿದ್ದಾರೆ.

ಬಳ್ಳಾರಿ ನಗರ ಕ್ಷೇತ್ರದಿಂದ ಸಹೋದರ ಸೋಮಶೇಖರ್ ರೆಡ್ಡಿ ವಿರುದ್ಧ, ಪತ್ನಿ ಲಕ್ಷ್ಮಿ ಅರುಣಾ ಅವರನ್ನು ಕಣಕ್ಕಿಳಿಸಿ ಬಿಜೆಪಿಗೇ ಸೆಡ್ಡು ಹೊಡೆದಿದ್ದರು. ಮುಂಬರುವ ಚುನಾವಣೆಗಳಲ್ಲಿ ಕೆಆರ್‍ಪಿಪಿಯಿಂದ ಎದುರಾಗಬಹುದಾದ ಪರಿಣಾಮಗಳನ್ನು ತಡೆಯಲು ಮತ್ತು ಕಾಂಗ್ರೆಸ್‍ಗೆ ತಿರುಗೇಟು ನೀಡುವ ತಂತ್ರದೊಂದಿಗೆ ಜನಾರ್ದನ ರೆಡ್ಡಿ ಅವರನ್ನು ಮರಳಿ ಬಿಜೆಪಿಗೆ ಕರೆತರುವ ಪ್ರಯತ್ನಗಳನ್ನು ಸದ್ದಿಲ್ಲದೆ ನಡೆಸಲಾಗುತ್ತಿದೆ ಎಂದು ಮೂಲಗಳು ಖಚಿತಪಡಿಸಿವೆ.

ಇತ್ತೀಚೆಗಷ್ಟೇ ಕೆಆರ್‍ವ ಮೂಲಕ ಮುಂದಿನ ಚುನಾವಣೆಗಲ್ಲಿ ಸ್ಥಾನ ಕೈತಪ್ಪದಂತೆ ಬಿಜೆಪಿ ಯೋಚಿಸಿದೆ. ಇದರಿಂದ ಕಾಂಗ್ರೆಸ್‍ಗೆ ತಕ್ಕ ಉತ್ತರ ನೀಡಿದಂತಾಗುತ್ತದೆ ಎಂದು ಬಿಜೆಪಿ ಲೆಕ್ಕಾಚಾರ ಹಾಕಿದೆ. ರೆಡ್ಡಿ ಅವರ ರಾಜಕೀಯ ಪ್ರವೇಶ ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿತ್ತು. ರೆಡ್ಡಿಯವರ ಈ ನಡೆಯಿಂದ ಬಿಜೆಪಿಗೆ ಕಲ್ಯಾಣ ಕರ್ನಾಟಕದಲ್ಲಿ ಸವಾಲುಗಳು ಸೃಷ್ಟಿಯಾದವು. ಮತಗಳು ಒಡೆದು ಹೋಗುವ ಜೊತೆಗೆ ಕ್ಷೇತ್ರಗಳು ಕೈತಪ್ಪುವ ಭೀತಿ ಎದುರಾಗಿತ್ತು.

ಇದೆಲ್ಲ ಗಮನಿಸಿರುವ ಬಿಜೆಪಿ ಮುಂದೆ ಹೀಗಾಗದಂತೆ ಎಚ್ಚರಿಕೆ ಹೆಜ್ಜೆ ಇಡುತ್ತಿದೆ. ಕೆಆರ್ಪಿಪಿ ಸಂಸ್ಥಾಪಕರನ್ನು ಕರೆತರಲು ಕೇಂದ್ರ ವರಿಷ್ಠರ ಜೊತೆಗೆ ರಾಜ್ಯ ನಾಯಕರು ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ನಾಯಕರ ಬಳಿ ಚರ್ಚೆ: ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಬಿಜೆಪಿಗೆ ಮರಳಿ ಸೇರ್ಪಡೆಗೆ ಸಂಬಂಧಿಸಿದಂತೆ ಈಗಾಗಲೇ ರಾಜ್ಯ ಮತ್ತು ಕೇಂದ್ರ ನಾಯಕರ ಅಂಗಳದಲ್ಲಿ ಒಂದು ಸುತ್ತಿನ ಮಾತುಕತೆ ನಡೆಸಲಾಗಿದೆ ಎನ್ನಲಾಗಿದೆ. ಇದಲ್ಲದೆ, ರೆಡ್ಡಿ ವಾಪಸ್ ಬಿಜೆಪಿಗೆ ಬರುವುದರಿಂದ ಆಗುವ ಲಾಭ, ಎದುರಾಗುವ ಸವಾಲುಗಳ ಕುರಿತೂ ಪಕ್ಷದಲ್ಲಿ ಚರ್ಚೆಗಳು ಮುನ್ನಲೆಗೆ ಬಂದಿದ್ದು, ರೆಡ್ಡಿ ಬಿಜೆಪಿ ಸೇರ್ಪಡೆ ಕುರಿತು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿದೆ.

ಇಷ್ಟ ಇದೆಯೋ, ಇಲ್ಲವೋ ಹೈಕಮಾಂಡ್ ನಿರ್ಧಾರವನ್ನು ಒಪ್ಪಬೇಕು : ಶ್ರೀರಾಮುಲು

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯಲ್ಲಸೋಲು ಅನುಭವಿಸಿರುವ ಬಿಜೆಪಿ, ಮುಂಬರುವ ದಿನಗಳಲ್ಲಿ ಎದುರಾಗುವ ಲೋಕಸಭೆ, ತಾಪಂ, ಜಿಪಂ ಹಾಗೂ ವಿಧಾನ ಪರಿಷತ್ ಪದವೀಧರ ಕ್ಷೇತ್ರದ ಚುನಾವಣೆಗಳಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಈಗಿನಿಂದಲೇ ನಾನಾ ಕಾರ್ಯತಂತ್ರ ರೂಪಿಸುತ್ತಿದೆ. ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಪಡೆಯಲು ಮುಂದಾಗಿರುವ ಬಿಜೆಪಿ, ಕೆಆರ್‍ಪಿಪಿಯಿಂದ ಬಿಜೆಪಿಗೆ ಕೈತಪ್ಪುವ ಮತಗಳನ್ನು ತಡೆಯುವ ಉದ್ದೇಶದಿಂದ ಜನಾರ್ದನ ರೆಡ್ಡಿ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ಉತ್ಸಾಹ ತೋರಿದೆ ಎನ್ನಲಾಗಿದೆ.

ರೆಡ್ಡಿಯನ್ನು ಕರೆತರುವ ಮೂಲಕ ಲೋಕಸಭಾ ಚುನಾವಣೆಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚು ಸ್ಥಾನಗಳನ್ನು ಗಳಿಸಲು ಮುಂದಾಗಿದೆ. ಇದರೊಂದಿಗೆ ನಂತರ ಬರಲಿರುವ ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿ, ಪದವಿಧರರ ಕ್ಷೇತ್ರದ ಚುನಾವಣೆಗಳಲ್ಲಿ ಸೀಟು ಭದ್ರಪಡಿಸಿಕೊಳ್ಳಲು, ತಮ್ಮ ಮತ ಬ್ಯಾಂಕ್ ಕೈತಪ್ಪದಂತೆ ರಣತಂತ್ರ ಹೆಣೆಯುತ್ತಿದೆ. ಸದ್ಯ ಈ ಕುರಿತು ಎಲ್ಲವು ಅಂತಿಮಗೊಳ್ಳಬೇಕಿದೆ.

ಗಾಲಿ ಜನಾರ್ಧನ್ ರೆಡ್ಡಿ ಅವರು ಬಿಜೆಪಿಗೆ ಸೇರ್ಪಡೆಯಾದರೆ, ಇತ್ತೀಚೆಗೆಷ್ಟೇ ರಚನೆಯಾದ ಜಿಲ್ಲಾಮಟ್ಟದ ಘಟಕ, ಅಧ್ಯಕ್ಷರು ಮತ್ತು ಕಾರ್ಯಕರ್ತರ ಗತಿ ಏನು. ಸಂಸ್ಥಾಪಕರನ್ನೇ ನಂಬಿ ಬಂದ ಅವರು ಬಿಜೆಪಿ ವಿರುದ್ಧ ಸೆಣಸಿ ತಮ್ಮ ಅಭ್ಯರ್ಥಿ ಗೆಲ್ಲಿಸುವಲ್ಲಿ ಶ್ರಮಿಸಿದ್ದಾರೆ. ಮುಂದೆ ಅವರ ನಡೆ ಹೇಗಿರಲಿದೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ.

RELATED ARTICLES

Latest News