ನಾನೋ (ಜಪಾನ್), ಜ.2- ಪಶ್ಚಿಮ ಜಪಾನ್‍ನಲ್ಲಿ ಸಂಭವಿಸಿದ ಪ್ರಬಲ ಭೂಕಂಪನದಿಂದ ಕನಿಷ್ಠ 8 ಜನರು ಸಾವನ್ನಪ್ಪಿದ್ದಾರೆ. ನೂರಾರುಕಟ್ಟಡಗಳು ಧರೆಗುರುದೆ, ವಾಹನಗಳು ಮತ್ತು ದೋಣಿಗಳಿಗೆ ಹಾನಿಯಾಗಿದೆ.
ಇಂದು ಕೂಡ ಹೆಚ್ಚು ಬಲವಾದ ಭೂಕಂಪಗಳ ಅಪಾಯವಿರುವುದರಿಂದ ಕೆಲವು ಪ್ರದೇಶಗಳಲ್ಲಿ ಜನರು ತಮ್ಮ ಮನೆಗಳಿಂದ ದೂರವಿರಲು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ಮಧ್ಯಾಹ್ನ 7.6 ತೀವ್ರತೆಯ ಭೂಕಂಪನ ಕರಾವಳಿ ಪ್ರದೇಶವನ್ನು ಹಾನಿಗಿಳಿಸಿದ್ದು ಇಂದು ಕೂಡ ಇಶಿಕಾವಾ ಪ್ರಾಂತ್ಯ ಮತ್ತು ಹತ್ತಿರದ ಪ್ರದೇಶಗಳಲ್ಲಿ ಭೂವಿ ಅಲುಗಾಡಿಸುತ್ತಲೇ ಇತ್ತು ಎಂದು ವರದಿಯಾಗಿದೆ.
ವಾಜಿಮಾ ನಗರದಲ್ಲಿ ಎಂಟು ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇತರ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ, ಆದರೆ ಮನೆಗಳಿಗೆ ಹಾನಿ ತುಂಬಾ ದೊಡ್ಡದಾಗಿದೆ ಎಂದು ಹೇಳಿದರು.ಇದರ ನಡುವೆ ಕನಿಷ್ಠ 13ಜನರ ಸಾವುಗಳು ದೃಢಪಟ್ಟಿವೆ ಎಂದು ಕ್ಯೋಡೋ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಪ್ರಸ್ತುತ ಜೀವಗಳನ್ನು ಉಳಿಸುವುದು ನಮ್ಮ ಆದ್ಯತೆಯಾಗಿದೆ ಮತ್ತು ನಾವು ಸಮಯದ ವಿರುದ್ಧ ಹೋರಾಡುತ್ತಿದ್ದೇವೆ ಎಂದು ಪ್ರಧಾನ ಮಂತ್ರಿ ಕಿಶಿಡಾ ಹೇಳಿದ್ದಾರೆ. ಮನೆಗಳು ಉರುಳಿದ್ದು ಅವಷೇಶದಡಿ ಸಿಕ್ಕಿಬಿದ್ದ ಜನರನ್ನು ತಕ್ಷಣವೇ ರಕ್ಷಿಸುವುದು ನಿರ್ಣಾಯಕವಾಗಿದೆ ಎಂದು ಹೇಳುತ್ತಿರುವಾಗಲೇ 5.6ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ. ಜಪಾನ್‍ನ ಮಿಲಿಟರಿ 1ಸಾವಿರ ಸೈನಿಕರನ್ನು ವಿಪತ್ತು ವಲಯಗಳಿಗೆ ಕಳುಹಿಸಿದೆ,ದೊಡ್ಡ ಪ್ರಮಾಣದ ಹಾನಿಯನ್ನು ಎದುರಿಸುತ್ತಿದ್ದಾರೆ ಎಂದು ಕಿಶಿಡಾ ಹೇಳಿದರು.
ಮಾಜಿ ಸಚಿವ ಹೆಚ್.ಆಂಜನೇಯ ಅವಿವೇಕಿ : ಯತ್ನಾಳ್
ಅಗ್ನಿಶಾಮಕ ದಳದವರು ವಾಜಿಮಾ ನಗರದಲ್ಲಿ ಹೊತ್ತಿಕೊಂಡಿರುವ ಬೆಂಕಿಯನ್ನು ನಂದಿಸಲು ಹೋರಾಟವನ್ನು ಮುಂದುವರೆಸಿದೆ ಈ ಪ್ರದೇಶದಲ್ಲಿ ಹಲವಾರು ಪರಮಾಣು ಸ್ಥಾವರಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಪರಮಾಣು ನಿಯಂತ್ರಕರು ಹೇಳಿದ್ದಾರೆ. ಕಳೆದ ಮಾರ್ಚ್ 2011 ರಲ್ಲಿ ಸಂಭವಿಸಿದ ದೊಡ್ಡ ಭೂಕಂಪ ಮತ್ತು ಸುನಾಮಿ ಈಶಾನ್ಯ ಜಪಾನ್‍ನಲ್ಲಿರುವ ಪರಮಾಣು ಸ್ಥಾವರದಲ್ಲಿ ಮೂರು ರಿಯಾಕ್ಟರ್‍ಗಳು ಕರಗಿ ದೊಡ್ಡ ಪ್ರಮಾಣದ ವಿಕಿರಣವನ್ನು ಬಿಡುಗಡೆ ಮಾಡಿತು.
ಸುದ್ದಿ ವೀಡಿಯೊಗಳು ಕುಸಿದ ಮನೆಗಳ ಸಾಲುಗಳನ್ನು ತೋರಿಸಿದೆ. ಕಾರುಗಳು ಉರುಳಿದವು, ಸುನಾಮಿ ಅಲೆಗೆ ಸಮುದ್ರದಲ್ಲಿ ಅರ್ಧ ಮುಳುಗಿದ ಹಡಗುಗಳು ಕಾಣುತ್ತಿವೆ.ಜಪಾನ್‍ನ ಮುಖ್ಯ ದ್ವೀಪವಾದ ಹೊನ್ಶುವಿನ ಪಶ್ಚಿಮ ಕರಾವಳಿಯ ಉಳಿದ ಭಾಗಗಳಿಗೆ ಮತ್ತು ಉತ್ತರದ ಹೊಕ್ಕೈಡೋ ದ್ವೀಪಕ್ಕೆ ಕೆಳಮಟ್ಟದ ಸುನಾಮಿ ಎಚ್ಚರಿಕೆಗಳು ಅಥವಾ ಸಲಹೆಗಳನ್ನು ಜಪಾನ್ ಹವಾಮಾನ ಸಂಸ್ಥೆಯು ಮುಖ್ಯಸ್ಥ ಇಶಿಕಾವಾ ನೀಡಿದ್ದರು.
ಇಂದು ಮುಂಜಾನೆ ಎಲ್ಲಾ ಸುನಾಮಿ ಎಚ್ಚರಿಕೆಗಳನ್ನು ತೆಗೆದುಹಾಕಲಾಯಿತು. ಒಂದಕ್ಕಿಂತ ಹೆಚ್ಚು ಮೀಟರ್ (3 ಅಡಿ) ಅಳತೆಯ ಅಲೆಗಳು ಕೆಲವು ಸ್ಥಳಗಳಿಗೆ ಅಪ್ಪಳಿಸಿವೆ ಮುಂದಿನ ಕೆಲವು ದಿನಗಳಲ್ಲಿ ಈ ಪ್ರದೇಶದಲ್ಲಿ ಹೆಚ್ಚಿನ ಭೂಕಂಪಗಳು ಸಂಭವಿಸಬಹುದು ಎಂದು ಸಂಸ್ಥೆ ಎಚ್ಚರಿಸಿದೆ. ಮನೆಗಳಿಂದ ಸ್ಥಳಾಂತರಿಸಲ್ಪಟ್ಟ ಜನರು ಸಭಾಂಗಣಗಳು, ಶಾಲೆಗಳು ಮತ್ತು ಸಮುದಾಯ ಕೇಂದ್ರಗಳಲ್ಲಿ ಆಶ್ರಯಪಡೆದಿದ್ದಾರೆ. ಈ ಪ್ರದೇಶದಲ್ಲಿ ಬುಲೆಟ್ ರೈಲುಗಳನ್ನು ಸ್ಥಗಿತಗೊಳಿಸಲಾಗಿದೆ, ಆದರೆ ಕೆಲವು ಸ್ಥಳಗಳಲ್ಲಿ ಸೇವೆಯನ್ನು ಮರುಸ್ಥಾಪಿಸಲಾಗುತ್ತಿದೆ.
ಜಗನ್‍ಮೋಹನ್‍ರೆಡ್ಡಿ ಸಹೋದರಿ ಶರ್ಮಿಳಾಗೆ ಕಾಂಗ್ರೆಸ್ ಗಾಳ
ಹೆದ್ದಾರಿಗಳ ಕೆಲವೆಡಿ ಬಿರುಕು ಬಿಟ್ಟಿದ್ದು ಅಲ್ಲಿ ವಾಹನ ಸಂಚಾರ ನಿಲ್ಲಿಸಲಾಗಿದೆ. ಕೆಲವು ಪ್ರದೇಶಗಳಲ್ಲಿ ಸೆಲ್-ಫೋನ್ ಸೇವೆಯು ಸ್ಥಗಿತಗೊಂಡಿದೆ. ಅಮೇರಿಕ ಅಧ್ಯಕ್ಷ ಜೋ ಬಿಡೆನ್‍ಅವರು ಜಪಾನಿನ ಜನರಿಗೆ ಯಾವುದೇ ಅಗತ್ಯ ನೆರವು ನೀಡಲು ನಾವು ಸಿದ್ಧವಾಗಿದ್ದೇವೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.