Friday, October 11, 2024
Homeರಾಜ್ಯಒಂದು ಆ್ಯಂಬುಲೆನ್ಸ್ ನೀಡಲಾಗದ ಆರೋಗ್ಯ ಇಲಾಖೆ ವಿರುದ್ಧ ಜೆಡಿಎಸ್ ಆಕ್ರೋಶ

ಒಂದು ಆ್ಯಂಬುಲೆನ್ಸ್ ನೀಡಲಾಗದ ಆರೋಗ್ಯ ಇಲಾಖೆ ವಿರುದ್ಧ ಜೆಡಿಎಸ್ ಆಕ್ರೋಶ

JDS attack on health department for not providing an ambulance

ಬೆಂಗಳೂರು,ಸೆ.19– ಒಂದು ಆ್ಯಂಬುಲೆನ್ಸ್ ನೀಡಲು ಕೈಲಾಗದ ದುಸ್ಥಿತಿ ರಾಜ್ಯ ಆರೋಗ್ಯ ಇಲಾಖೆಗೆ ಬಂದಿದೆಯೇ ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬದುಕಿದ್ಯಾ ಅಥವಾ ಸತ್ತಿದ್ಯಾ? ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಪ್ರಶ್ನಿಸಿದೆ.

ತಂದೆಯನ್ನು ಕಳೆದುಕೊಂಡು ನೋವಿನಲ್ಲಿದ್ದ ಆ ಮಕ್ಕಳಿಗೆ ಮೃತದೇಹ ಸಾಗಿಸಲು ಕನಿಷ್ಠ ಆ್ಯಂಬುಲೆನ್‌್ಸಒದಗಿಸದಿರುವುದು ಅಮಾನವೀಯ ಮತ್ತು ರಾಜ್ಯದ ಜನರು ತಲೆ ತಗ್ಗಿಸುವಂತದ್ದು ಎಂದು ಬೇಸರ ವ್ಯಕ್ತಪಡಿಸಿದೆ.

ಆ್ಯಂಬುಲೆನ್‌್ಸಸಿಗದೆ ತಂದೆಯ ಮೃತದೇಹವನ್ನು ಮಕ್ಕಳು ಬೈಕ್ನಲ್ಲಿ ಕೊಂಡೊಯ್ದ ಹೃದಯ ವಿದ್ರಾವಕ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ವೈ.ಎನ್. ಹೊಸಕೋಟೆಯಲ್ಲಿ ನಡೆದಿದೆ ಎಂದು ಹೇಳಿದೆ.

ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರಕ್ಕೆ ಮಾನವೀಯತೆ ಇಲ್ಲವಾಗಿರುವುದಕ್ಕೆ ಈ ಮನಕಲಕುವ ಘಟನೆಯೇ ಸಾಕ್ಷಿ. ಪಾವಗಡ ಕಾಂಗ್ರೆಸ್ ಶಾಸಕ ಹೆಚ್.ವಿ.ವೆಂಕಟೇಶ್ ಅವರು, ಕ್ಷೇತ್ರದ ಅಭಿವೃದ್ಧಿ ಕಡೆಗಣಿಸಿ, ದ್ವೇಷ ರಾಜಕಾರಣ ಮಾಡುತ್ತಿರುವುದಕ್ಕೆ ಜನರು ನರಳುವಂತಾಗಿದೆ ಎಂದು ಆರೋಪಿಸಿದೆ.

RELATED ARTICLES

Latest News