Thursday, December 5, 2024
Homeರಾಜ್ಯ6 ತಿಂಗಳಿಂದ ಇಂದಿರಾ ಕ್ಯಾಂಟೀನ್ ಸಿಬ್ಬಂದಿಗೆ ಸಂಬಳ ನೀಡದ 'ದಿವಾಳಿ ಸರ್ಕಾರ' : ಜೆಡಿಎಸ್

6 ತಿಂಗಳಿಂದ ಇಂದಿರಾ ಕ್ಯಾಂಟೀನ್ ಸಿಬ್ಬಂದಿಗೆ ಸಂಬಳ ನೀಡದ ‘ದಿವಾಳಿ ಸರ್ಕಾರ’ : ಜೆಡಿಎಸ್

JDS calls 'Bankrupt Government' for not paying salaries to Indira canteen staff for 6 months

ಬೆಂಗಳೂರು, ನ.22– ರಾಜ್ಯ ಸರ್ಕಾರ ಹಣ ಬಾಕಿ ಉಳಿಸಿಕೊಂಡಿರುವ ಕಾರಣ ಬೆಂಗಳೂರಿನ ಹಲವೆಡೆ ಇಂದಿರಾ ಕ್ಯಾಂಟೀನ್ಗಳು ಬಂದ್ ಆಗಿವೆ ಎಂದು ಜೆಡಿಎಸ್ ಆರೋಪಿಸಿದೆ.

ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, ರಾಜ್ಯದ ಆರ್ಥಿಕ ಸ್ಥಿತಿಯನ್ನು ಪಾತಳಕ್ಕೆ ತಳ್ಳಿರುವ ಭ್ರಷ್ಟ ಸರ್ಕಾರ ಬಡವರಿಗೆ ಶಾಪವಾಗಿ ಪರಿಣಮಿಸಿದೆ ಎಂದು ಟೀಕಿಸಿದೆ.

ಊಟ ಪೂರೈಸಲು ಗುತ್ತಿಗೆ ಪಡೆದಿರುವ ಕಂಪನಿಗೆ ಬಿಬಿಎಂಪಿ ಹಣ ಪಾವತಿಸಿಲ್ಲ. ಜೊತೆಗೆ ಕ್ಯಾಂಟೀನ್ ಸಿಬ್ಬಂದಿಗೂ 6 ತಿಂಗಳಿಂದ ವೇತನ ನೀಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ದಿವಾಳಿ ಅಂಚಿಗೆ ತಲುಪಿದ್ದು, ಅವೈಜ್ಞಾನಿಕ ಗ್ಯಾರಂಟಿ ಹೊರೆಯಿಂದ ಜನಸಾಮಾನ್ಯರ ಹೊಟ್ಟೆ ಮೇಲೆ ಹೊಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದೆ.

RELATED ARTICLES

Latest News