Thursday, December 5, 2024
Homeಅಂತಾರಾಷ್ಟ್ರೀಯ | Internationalಜಾರ್ಜಿಯಾದಲ್ಲಿ ಹುಟ್ಟುಹಬ್ಬದ ಸಂಭ್ರಮದಲ್ಲಿ ಗುಂಡು ಹಾರಿ ತೆಲಂಗಾಣ ಮೂಲದ ವಿದ್ಯಾರ್ಥಿ ಸಾವು

ಜಾರ್ಜಿಯಾದಲ್ಲಿ ಹುಟ್ಟುಹಬ್ಬದ ಸಂಭ್ರಮದಲ್ಲಿ ಗುಂಡು ಹಾರಿ ತೆಲಂಗಾಣ ಮೂಲದ ವಿದ್ಯಾರ್ಥಿ ಸಾವು

Telangana Student Accidentally Shoots Himself Dead During Birthday Celebration In US

ವಾಷಿಂಗ್ಟನ್,ನ.22- ಅಮೆರಿಕದ ಜಾರ್ಜಿಯಾ ಸ್ಟೇಟ್ ಯೂನಿವರ್ಸಿಟಿಯಲ್ಲಿ ಸ್ನಾತಕೊತ್ತರ ಪದವಿ ವ್ಯಾಸಂಗ ಮಾಡುತ್ತಿದ್ದ ತೆಲಂಗಾಣ ಮೂಲದ 23 ವರ್ಷದ ವಿದ್ಯಾರ್ಥಿ ಹುಟ್ಟು ಹಬ್ಬದ ಸಂಭ್ರಮದಲ್ಲಿ ಹಾರಿದ ಬಂದೂಕಿನ ಗುಂಡೇಟಿನಿಂದ ಸಾವನ್ನಪ್ಪಿದ್ದಾರೆ. ಮೃತಪಟ್ಟಿರುವ ವಿದ್ಯಾರ್ಥಿಯನ್ನು ತೆಲಂಗಾಣದ ಉಪ್ಪಲ್ ಮೂಲದ ಆರ್ಯನ್ ರೆಡ್ಡಿ ಎಂದು ಗುರುತಿಸಲಾಗಿದೆ.

23 ವರ್ಷದ ಯುವಕನ ಮತದೇಹ ಇಂದು ರಾತ್ರಿ ತೆಲಂಗಾಣಕ್ಕೆ ಆಗಮಿಸುವ ನಿರೀಕ್ಷೆಯಿದೆ. ಆರ್ಯನ್ ಅಮೆರಿಕದಲ್ಲಿ ಬೇಟೆಯಾಡುವ ಗನ್ ಪರವಾನಗಿಯನ್ನು ಪಡೆದಿದ್ದಾರೆ ಎಂದು ವರದಿಗಳು ಬಹಿರಂಗಪಡಿಸಿವೆ. ರೆಡ್ಡಿ ಅವರು ತಮ ಹುಟ್ಟುಹಬ್ಬದಂದು ಬಂದೂಕು ಬಳಸುತ್ತಿದ್ದಾಗ ಆಕಸಿಕವಾಗಿ ಗುಂಡು ಹಾರಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಆರ್ಯನ್ ತಂದೆ ಸುದರ್ಶನ್ ರೆಡ್ಡಿ ಅವರು ತೀವ್ರ ದುಃಖವನ್ನು ವ್ಯಕ್ತಪಡಿಸಿದ್ದಾರೆ ಮತ್ತು ವಿದೇಶದಲ್ಲಿ ಓದುತ್ತಿರುವ ತಮ ಮಕ್ಕಳು ಗನ್ ಲೈಸೆನ್ಸ್ ಪಡೆಯುವ ಬಗ್ಗೆ ಇತರ ಪೋಷಕರು ಎಚ್ಚರಿಕೆ ವಹಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ವಿದ್ಯಾರ್ಥಿಗಳು ಅಲ್ಲಿ ಬೇಟೆಯಾಡುವ ಬಂದೂಕು ಪರವಾನಗಿಗಳನ್ನು ಪಡೆದುಕೊಳ್ಳಬಹುದು ಎಂದು ನಮಗೆ ತಿಳಿದಿರಲಿಲ್ಲ. ಯಾವುದೇ ಪೋಷಕರು ಇಂತಹ ದುರಂತವನ್ನು ಎಂದಿಗೂ ಎದುರಿಸಬಾರದು, ಎಂದು ಅವರು ಹೇಳಿದರು.

ಏತನಧ್ಯೆ, ಹೈದರಾಬಾದ್ನಲ್ಲಿ ಯುಎಸ್ ಕಾನ್ಸುಲರ್ ಅಧಿಕಾರಿಗಳು ಹಂಚಿಕೊಂಡ ಅಂಕಿಅಂಶಗಳು 2023-24 ರಲ್ಲಿ ಯುಎಸ್ ವಿಶ್ವವಿದ್ಯಾಲಯಗಳಿಗೆ ವಿದ್ಯಾರ್ಥಿಗಳನ್ನು ಕಳುಹಿಸುವ ಅಗ್ರ ರಾಷ್ಟ್ರವಾಗಿ ಭಾರತವು ಚೀನಾವನ್ನು ಸ್ಥಳಾಂತರಿಸಿದೆ ಎಂದು ಬಹಿರಂಗಪಡಿಸಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣ ಪ್ರಮುಖ ಪಾತ್ರವನ್ನು ವಹಿಸಿದೆ, ಸುಮಾರು 56 ಪ್ರತಿಶತ ಭಾರತೀಯ ವಿದ್ಯಾರ್ಥಿಗಳು ಈ ಎರಡು ರಾಜ್ಯಗಳಿಂದ ಅಮೆರಿಕಗೆ ಹೋಗುತ್ತಿದ್ದಾರೆ ಎನ್ನಲಾಗಿದೆ.

RELATED ARTICLES

Latest News