Friday, October 11, 2024
Homeರಾಜ್ಯಕಾಡುಗೊಲ್ಲ ನಿಗಮ ಸ್ಥಾಪನೆ 20 ಕೋಟಿ ಅನುದಾನ ಬಿಡುಗಡೆ

ಕಾಡುಗೊಲ್ಲ ನಿಗಮ ಸ್ಥಾಪನೆ 20 ಕೋಟಿ ಅನುದಾನ ಬಿಡುಗಡೆ

ಬೆಂಗಳೂರು. 12, ರಾಜ್ಯ ಸರ್ಕಾರ ಕಾಡುಗೊಲ್ಲರ ಅಭಿವೃದ್ಧಿಗಾಗಿ ಕಾಡುಗೊಲ್ಲ ನಿಗಮ ಸ್ಥಾಪನೆ ಮಾಡಿದ್ದು ಆ ಸಮುದಾಯದ ಜನತೆ ಉಪಯೋಗ ಪಡೆದುಕೊಳ್ಳುವಂತೆ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಅವರು ಹೇಳಿದ್ದಾರೆ. ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಕಾಡುಗೊಲ್ಲ ನಿಗಮಕ್ಕೆ 20 ಕೋಟಿ ಹಣ ನೀಡಲಾಗಿದ್ದು ಆ ಹಣವನ್ನು ಪ್ರಸಕ್ತ ಆರ್ಥಿಕ ವರ್ಷದಲ್ಲೇ ಉಪಯೋಗಪಡಿಸಿಕೊಳ್ಳುವಂತೆ ಕರೆನೀಡಿದ್ದಾರೆ .

ಕಾಡುಗೊಲ್ಲ ನಿಗಮದಡಿ ದೊರೆಯುವ ಸವಲತ್ತುಗಳನ್ನು ಬಳಸಿಕೊಳ್ಳುವ ಸಂಬಂಧ ಹಿಂದುಳಿದ ವರ್ಗಗಳ ಇಲಾಖೆ ಕಾರ್ಯದರ್ಶಿ ತುಳಸಿ ಮುದ್ದಿನೇನಿ ಅವರ ಜೊತೆ ಟಿ.ಬಿ.ಜಯಚಂದ್ರ ಅವರು ವಿಧಾನಸೌಧದಲ್ಲಿ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹಿಂದುಳಿದ ವರ್ಗಗಳ ಇಲಾಖೆ ಕಾರ್ಯದರ್ಶಿ ತುಳಸಿ ಮುದ್ದಿನೇನಿ ಅವರು ಸದ್ಯಕ್ಕೆ ಕಾಡುಗೊಲ್ಲ ನಿಗಮದಲ್ಲಿ 20 ಕೋಟಿ ಹಣವಿದ್ದು ಮೇಕೆ ಕುರಿ ಸಾಕಾಣಿಕೆ ಸೇರಿದಂತೆ ಸ್ವಯಂ ಉದ್ಯೋಗ ಕಲ್ಪಿಸಿಕೊಳ್ಳುವವರಿಗೆ ,ಕೊಳವೆ ಬಾವಿ ಹಾಕಿಸಲು ಹಾಗೂ ಶೈಕ್ಷಣಿಕ ಸಾಲ ನೀಡಲು ಹಣವನ್ನ ನೀಡಲಾಗುವುದು‌.

ಮುಂದಿನ ತಿಂಗಳಲ್ಲಿ ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿಗಳನ್ನು ಸಲ್ಲಿಸಬೇಕು. ರಾಜ್ಯದ ಎಲ್ಲಾ ಗ್ರಾಮ -ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗುವುದು. ಕಾಡುಗೊಲ್ಲ ಸಮುದಾಯದ ಜನತೆ ಈ ಸೌಲಭ್ಯವನ್ನು ಬಳಸಿಕೊಳ್ಳಲು ಅಗತ್ಯ ಏರ್ಪಾಡುಗಳನ್ನು ಮಾಡಲಾಗಿದೆ ಎಂದು ಇದೆ ವೇಳೆ ತುಳಸಿ,ಮುದ್ದಿನೇನಿ ಅವರು ತಿಳಿಸಿದರು. ಕಾಡುಗೊಲ್ಲ ಜಾತಿ ಪ್ರಮಾಣ ಪತ್ರಗಳನ್ನು ಸಹ ವಿತರಿಸಲಾಗುತ್ತಿದೆ ಎಂದರು

ತುಮಕೂರು ಚಿತ್ರದುರ್ಗ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಕಾಡುಗೊಲ್ಲ ಸಮುದಾಯದ ಜನತೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ .ಈ ಮೂರು ಜಿಲ್ಲೆಗಳ ಎಲ್ಲಾ ಶಾಸಕರ ಸಭೆ ಕರೆದು ಕಾಡುಗೊಲ್ಲ ನಿಗಮದ ಅಡಿ ಸಿಗುವ ಎಲ್ಲಾ ಸವಲತ್ತುಗಳನ್ನು ಬಳಸಿಕೊಳ್ಳುವಂತೆ ಅರಿವು ಮೂಡಿಸಬೇಕು ಎಂದು ಟಿವಿ ಜಯಚಂದ್ರ ಅವರು ತಿಳಿಸಿದರು.

ಇದೇ ವೇಳೆ ಜಯಚಂದ್ರ ಅವರು ಹಿಂದುಳಿದ ವರ್ಗಗಳ ಹಾಗೂ ಕನ್ನಡ ಸಂಸ್ಕೃತಿ ಸಚಿವ ಶಿವರಾಜ್ ತಂಗಡಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಆದಷ್ಟು ಬೇಗ ಈ ಮೂರು ಜಿಲ್ಲೆಗಳ ಶಾಸಕರ ಸಭೆ ಕರೆದು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದರು. ಜಯಚಂದ್ರ ಅವರ ಮನವಿಗೆ ಸ್ಪಂದಿಸಿದ ಸಚಿವ ಶಿವರಾಜ್ ತಂಗಡಿ ಅವರು ಆದಷ್ಟು ಬೇಗ ಸಭೆ ಕರೆದು ಕಾಡುಗೊಲ್ಲ ಸಮುದಾಯದ ಜನತೆ ಸವಲತ್ತುಗಳನ್ನು ಪಡೆದುಕೊಳ್ಳುವಂತೆ ಅರಿವು ಮೂಡಿಸುವುದಾಗಿ ತಿಳಿಸಿದರು.

ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವ ಕುರಿತು ಸರ್ಕಾರದ ಹಂತದಲ್ಲಿ ಕೆಲಸಗಳು ಆಗುತ್ತಿದೆ ಎಂದು ಇದೇ ವೇಳೆ ಹಿಂದುಳಿದ ವರ್ಗಗಳ ಇಲಾಖೆ ಕಾರ್ಯದರ್ಶಿ ತುಳಸಿ ಮುದ್ದಿನೇನೆ ಅವರು ತಿಳಿಸಿದರು‌.

RELATED ARTICLES

Latest News