Friday, December 13, 2024
Homeರಾಜ್ಯಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಕ್ಕೆ ಹೆದರಿ ಯುವಕ ಆತ್ಮಹತ್ಯೆ

ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಕ್ಕೆ ಹೆದರಿ ಯುವಕ ಆತ್ಮಹತ್ಯೆ

ಕಲಬುರಗಿ, ಮೇ.2- ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಕ್ಕೆ ಹೆದರಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಲಾಡಮುಗುಳಿ ಗ್ರಾಮದಲ್ಲಿ ನಡೆದಿದೆ. ನಿಖಿಲ್ ಪೂಜಾರಿ (23) ಲಾಡಮುಗುಳಿ ಗ್ರಾಮದ ಹೊರವಲಯದಲ್ಲಿನ ಜಮೀನಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಯುವಕ.

ಕಳೆದ ನಾಲ್ಕು ದಿನಗಳ ಹಿಂದೆ ಈ ಗ್ರಾಮದಲ್ಲಿ ಜಾತ್ರೆ ನಡೆದಿತ್ತು. ಈ ವೇಳೆ ಎರಡು ಸಮುದಾಯಗಳ ಯುವಕರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆಯಾಗಿತ್ತು. ಗಲಾಟೆ ಬಳಿಕ ಊರಿನವರ ಸಮ್ಮುಖದಲ್ಲಿ ರಾಜಿಸಂದಾನ ಮಾಡಲಾಗಿತ್ತು.

ರಾಜಿ ಸಂದಾನದ ಬಳಿಕವೂ ನಿಖಿಲ್ ಪೂಜಾರಿ ಸೇರಿ ಹಲವರ ವಿರುದ್ಧ ಇನ್ನೊಂದು ಗುಂಪು ನರೋಣ ಪೊಲೀಸ್ ಠಾಣೆಗೆ ದೂರು ನೀಡಿತ್ತು. ನಿಖಿಲ್ ಹಾಗೂ ಇತರರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ದಾಖಲಾಗಿದ್ದಕ್ಕೆ ಹೆದರಿಕೊಂಡ ಯುವಕ ನಿಖಿಲ್ ಪೂಜಾರಿ ಗ್ರಾಮದ ಹೊರವಲಯದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

RELATED ARTICLES

Latest News