Thursday, December 12, 2024
Homeರಾಷ್ಟ್ರೀಯ | Nationalಗುಜರಾತ್ ಮಾಡಲ್ ಬದಲಿಗೆ ದ್ರಾವಿಡ ಮಾದರಿ ಅನುಕರಣೆಗೆ ಕಮಲ್ ಕರೆ

ಗುಜರಾತ್ ಮಾಡಲ್ ಬದಲಿಗೆ ದ್ರಾವಿಡ ಮಾದರಿ ಅನುಕರಣೆಗೆ ಕಮಲ್ ಕರೆ

ಚೆನ್ನೈ,ಏ.7- ದೇಶದ ಜನರು ಗುಜರಾತ್ ಮಾದರಿ ಬದಲಿಗೆ ದ್ರಾವಿಡ ಮಾದರಿ ಅನುಸರಿಸುವಂತೆ ನಟ ಕಮ್ ರಾಜಕಾರಣಿ ಕಮಲ್ ಹಾಸನ್ ಕರೆ ನೀಡಿದ್ದಾರೆ. ಮಕ್ಕಳ್ ನೀಧಿ ಮೈಯಂ (ಎಂಎನ್‍ಎಂ) ಪಕ್ಷದ ಅಧ್ಯಕ್ಷರೂ ಆಗಿರುವ ಕಮಲ್ ಹಾಸನ್ ಅವರು, ತಮಿಳುನಾಡಿನ ಮೈಲಾಪುರ್ ಪ್ರದೇಶದಲ್ಲಿ ಡಿಎಂಕೆಯ ದಕ್ಷಿಣ ಚೆನ್ನೈ ಅಭ್ಯರ್ಥಿ ತಮಿಳಚಿ ತಂಗಪಾಂಡಿಯನ್ ಪರ ಪ್ರಚಾರ ನಡೆಸಿದ ಸಂದರ್ಭದಲ್ಲಿ ಈ ಕರೆ ನೀಡಿದರು.

ಜನರು ಯಾವಾಗಲೂ ಗುಜರಾತ್ ಮಾದರಿ ಶ್ರೇಷ್ಠ ಎಂದು ಹೇಳಲು ಸಾಧ್ಯವಿಲ್ಲ, ನಾವು ಈ ಮಾದರಿಗೆ ಬಂದಿದ್ದೇವೆ, ಅದು ಕೂಡ ಶ್ರೇಷ್ಠವಾಗಿದೆ (ದ್ರಾವಿಡ ಮಾದರಿ). ಮುಂದೆ ಭಾರತವು ದ್ರಾವಿಡ ಮಾದರಿಯನ್ನು ಅನುಸರಿಸಬೇಕು. ನನ್ನ ರಥವನ್ನು ಚಲಿಸಿದರೆ ಮಾತ್ರ ಸಾಕಾಗುವುದಿಲ್ಲ, ನಾವು ಒಟ್ಟಿಗೆ ರಥವನ್ನು ಚಲಿಸಬೇಕು ಎಂದಿದ್ದಾರೆ.

ನಾನು ಅವರಿಗೆ (ಡಿಎಂಕೆ) ಈ ದಕ್ಷಿಣ ಚೆನ್ನೈ ಸ್ಥಾನವನ್ನು ಕೇಳಿದ್ದರೆ, ನನಗೆ ಅದು ಸಿಗುತ್ತಿತ್ತು, ಆದರೆ ನಾನು ಇಲ್ಲಿ ಸ್ಥಾನಕ್ಕಾಗಿ ಬಂದಿಲ್ಲ, ನಾನು ನಮ್ಮ ಸಹೋದರಿಗೆ ಮತ ಕೇಳಲು ಇಲ್ಲಿಗೆ ಬಂದಿದ್ದೇನೆ, ಈ ಚಿಹ್ನೆಯನ್ನು ಮರೆಯಬೇಡಿ ಉದಯೋನ್ಮುಖ ಸೂರ್ಯ ಇದು ನಮ್ಮ ರಾಷ್ಟ್ರಕ್ಕಾಗಿ, ನಾವು ನಮ್ಮ ಹಕ್ಕುಗಳನ್ನು ಮಾಡಬೇಕು ಎಂದು ಹಾಸನ್ ಪ್ರಚಾರ ಕಾರ್ಯಕ್ರಮವನ್ನು ಉದ್ದೇಶಿಸಿ ಹೇಳಿದರು.

ಎಂಎನ್‍ಎಂ ಜೊತೆಗೆ, ಕಾಂಗ್ರೆಸ್, ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ), ಸಿಪಿಐ ಮತ್ತು ಸಿಪಿಐ(ಎಂ) ಸೇರಿದಂತೆ ಡಿಎಂಕೆಯ ಮೈತ್ರಿ ಪಾಲುದಾರರ ಹೆಚ್ಚಿನ ಸಂಖ್ಯೆಯ ಪಕ್ಷದ ಕಾರ್ಯಕರ್ತರು ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

RELATED ARTICLES

Latest News