Thursday, February 29, 2024
Homeಮನರಂಜನೆಇಂದಿರಾಗಾಂಧಿ ಕುರಿತ ಎಮರ್ಜೆನ್ಸಿ ಚಿತ್ರ ಜೂನ್‍ನಲ್ಲಿ ಬಿಡುಗಡೆ

ಇಂದಿರಾಗಾಂಧಿ ಕುರಿತ ಎಮರ್ಜೆನ್ಸಿ ಚಿತ್ರ ಜೂನ್‍ನಲ್ಲಿ ಬಿಡುಗಡೆ

ಮುಂಬೈ, ಜ. 23 (ಪಿಟಿಐ) ನಟಿ ಕಂಗನಾ ರಣಾವತ್ ಅವರು ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಅವರ ಪಾತ್ರದಲ್ಲಿ ನಟಿಸಿರುವ ಹೊಸ ಚಿತ್ರ ಎಮರ್ಜೆನ್ಸಿ ಜೂನ್ 14 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ಘೋಷಿಸಿದ್ದಾರೆ.

ಈ ಹಿಂದೆ ಮಣಿಕರ್ಣಿಕಾ ಚಿತ್ರ ನಿರ್ದೇಶಿಸಿದ್ದ ರಣಾವತ್ ಅವರು ಇದೀಗ ಇಂದಿರಾ ಕಾಲದ ತುರ್ತು ಪರಿಸ್ಥಿತಿ ಕುರಿತಂತೆ ಚಿತ್ರ ನಿರ್ದೇಶಿಸುತ್ತಿದ್ದಾರೆ. ಇದು ನನ್ನ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ ಈ ಚಿತ್ರದಲ್ಲಿ ಅತ್ಯುತ್ತಮ ಭಾರತೀಯ ಮತ್ತು ಅಂತರರಾಷ್ಟ್ರೀಯ ಪ್ರತಿಭೆಗಳನ್ನು ಒಟ್ಟುಗೂಡಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಬಾಂಗ್ಲಾ ಗಡಿಯಲ್ಲಿ 3 ಕೋಟಿ ಮೌಲ್ಯದ ಚಿನ್ನ ವಶ, ಓರ್ವ ಬಂಧನ

ಚಿತ್ರವು ಈ ಹಿಂದೆ ನವೆಂಬರ್ 24, 2023 ರಂದು ಥಿಯೇಟರ್‍ಗಳಲ್ಲಿ ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿತ್ತು ಆದರೆ ರಣಾವತ್ ಅವರ ಚಿತ್ರ ಬಿಡುಗಡೆಯನ್ನು ಮುಂದೂಡಿದ್ದರು. ಭಾರತದ ಮೊದಲ ಮಹಿಳಾ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರು ಸಾರ್ವಕಾಲಿಕ ಅತ್ಯಂತ ಸಂವೇದನಾಶೀಲ ನಾಯಕರಲ್ಲಿ ಒಬ್ಬರು ಎಂದು ಅಧಿಕೃತ ಲಾಗ್‍ಲೈನ್‍ನಲ್ಲಿ ಬರೆಯಲಾಗಿದೆ.

ಚಿತ್ರದಲ್ಲಿ ಅನುಪಮ್ ಖೇರ್, ಮಹಿಮಾ ಚೌಧರಿ, ಮಿಲಿಂದ್ ಸೋಮನ್, ಶ್ರೇಯಸ್ ತಲ್ಪಾಡೆ, ವಿಶಾಕ್ ನಾಯರ್ ಮತ್ತು ದಿವಂಗತ ಸತೀಶ್ ಕೌಶಿಕ್ ಕೂಡ ಇದ್ದಾರೆ. ಪಿಂಕ್ ಖ್ಯಾತಿಯ ರಿತೇಶ್ ಶಾ ಈ ಚಿತ್ರದ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಬರೆದಿದ್ದಾರೆ.

RELATED ARTICLES

Latest News