Saturday, July 27, 2024
Homeರಾಷ್ಟ್ರೀಯಮಂಡಿಯಲ್ಲಿ ಗೆಲುವು ನನ್ನದೆ ; ಕಂಗನಾ ರಣಾವತ್‌

ಮಂಡಿಯಲ್ಲಿ ಗೆಲುವು ನನ್ನದೆ ; ಕಂಗನಾ ರಣಾವತ್‌

ಮಂಡಿ,ಮೇ.20- ಈ ಬಾರಿಯ ಚುನಾವಣೆಯಲ್ಲಿ ಗೆಲುವು ನನ್ನದೆ ಎಂದು ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್‌ ಹರ್ಷ ವ್ಯಕ್ತಪಡಿಸಿದ್ದಾರೆ. ನಟಿಯಾಗಿ ಪದಶ್ರೀ, ರಾಷ್ಟ್ರಪ್ರಶಸ್ತಿ ಸೇರಿದಂತೆ ನಾನಾ ಪ್ರಶಸ್ತಿಗಳನ್ನು ಪಡೆದಿದ್ದೇನೆ. ಮುಂದೆ ನಾನು ಸಂಸದಳಾಗಿ ಆಯ್ಕೆಯಾದರೆ ಮಂಡಿ ಜನರ ಸಮಸ್ಯೆಗಳನ್ನು ಪ್ರತಿನಿಧಿಸಿ ಅವರಿಗಾಗಿ ಅನಾಯಾಸವಾಗಿ ಶ್ರಮಿಸುತ್ತೇನೆ ಎಂದಿದ್ದಾರೆ.

ಜನರ ಸಮಸ್ಯೆ ಆಲಿಸುವ ಮೂಲಕ ನಾನು ಭವಿಷ್ಯದಲ್ಲಿ ವರ್ಷದ ಸಂಸದ ಪ್ರಶಸ್ತಿಯನ್ನು ಸ್ವೀಕರಿಸಿದರೆ ತುಂಬಾ ಸಂತೋಷಪಡುತ್ತೇನೆ ಎಂದು ಕಂಗನಾ ಹೇಳಿಕೊಂಡಿದ್ದಾರೆ. ತಮ್ಮ ಪಕ್ಷವಾದ ಬಿಜೆಪಿಯನ್ನು ಶ್ಲಾಘಿಸುತ್ತಾ, ನಾವು ಮೋದಿ ಕಿ ಗ್ಯಾರಂಟಿಯನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಮತ್ತು ಪಕ್ಷದ ಕಟ್ಟುನಿಟ್ಟಾದ ಮಾರ್ಗಸೂಚಿಗಳಿಗೆ ಬದ್ಧರಾಗಿದ್ದೇವೆ, ಇದು ಚುನಾವಣೆಯಲ್ಲಿ ಗೆಲ್ಲಲು ಸುಳ್ಳು ಭರವಸೆಗಳನ್ನು ನೀಡುವುದನ್ನು ತಡೆಯುತ್ತದೆ. ಈ ಮಟ್ಟದ ಸಮಗ್ರತೆ ಇತರೆ ಪಕ್ಷಗಳಲ್ಲಿ ಇಲ್ಲ ಎಂದಿದ್ದಾರೆ.

ಮಂಡಿಯ ಜನರ, ವಿಶೇಷವಾಗಿ ಸೇಬು ತೋಟದ ಮಾಲೀಕರ ಸಮಸ್ಯೆಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿಮಾಚಲ ತೋಟಗಳು ಹಲವಾರು ಸವಾಲುಗಳನ್ನು ಎದುರಿಸುತ್ತಿವೆ.

ಕೆಲವು ಮಾಲೀಕರು ಕೋಲ್ಡ್‌‍ ಸ್ಟೋರೇಜ್‌ ಸೌಲಭ್ಯಗಳ ಸಂಖ್ಯೆಯನ್ನು ಹೆಚ್ಚಿಸಲು ಪ್ರತಿಪಾದಿಸುತ್ತಾರೆ, ಇತರರು ಆಮದು ಸುಂಕವನ್ನು ಹೆಚ್ಚಿಸುವಂತೆ ಒತ್ತಾಯಿಸುತ್ತಾರೆ. ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಇದು ಅತ್ಯಗತ್ಯ ಎಂದು ಅವರು ಮಾಧ್ಯಮವೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.

RELATED ARTICLES

Latest News