Monday, September 16, 2024
Homeಮನರಂಜನೆಚಂದನವನದಲ್ಲೂ ತಾರತಮ್ಯ, ಕಿರುಕುಳದ 'ಫೈರ್‌' : ತನಿಖೆ ನಡೆಸುವಂತೆ ಸಿಎಂಗೆ ಪತ್ರ

ಚಂದನವನದಲ್ಲೂ ತಾರತಮ್ಯ, ಕಿರುಕುಳದ ‘ಫೈರ್‌’ : ತನಿಖೆ ನಡೆಸುವಂತೆ ಸಿಎಂಗೆ ಪತ್ರ

Kannada film body asks CM Siddaramaiah to form panel to study women’s issues in Sandalwood

ಬೆಂಗಳೂರು,ಸೆ.5- ಕನ್ನಡ ಚಿತ್ರರಂಗದಲ್ಲಿ ಮಹಿಳೆಯರಿಗಾಗುತ್ತಿರುವ ತಾರತಮ್ಯ ಹಾಗೂ ಕಿರುಕುಳದ ತನಿಖೆಗಾಗಿ ನ್ಯಾಯಾಂಗ ಆಯೋಗ ರಚಿಸಬೇಕು ಎಂದು ಪತ್ರ ಬರೆದಿದ್ದ ಚಿತ್ರರಂಗದಲ್ಲಿನ ಹಕ್ಕುಗಳು ಹಾಗೂ ಸಮಾನತೆಗಾಗಿ ಶ್ರಮಿಸುತ್ತಿರುವ ಫೈರ್‌ ಸಂಘಟನೆ ಮುಖಂಡರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ತಮ ಒತ್ತಾಸೆಯನ್ನು ಮಂಡಿಸಿದ್ದಾರೆ.

ಫೈರ್‌ ಸಂಘಟನೆಯ ಕಾರ್ಯದರ್ಶಿರಾದ ನಟ ಚೇತನ್‌, ನಟಿ ಶೃತಿ ಹರಿಹರನ್‌ ಸೇರಿದಂತೆ ನಾಲ್ವರ ನಿಯೋಗ ಇಂದು ಗೃಹಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ನಿನ್ನೆ ಬರೆಯಲಾಗಿದ್ದ ಪತ್ರದ ಗಮನ ಸೆಳೆದಿದ್ದಾರೆ.

ಕೇರಳದ ಮಲಯಾಳಂ ಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ಹಿಂಸೆ ಮತ್ತು ಇತರ ಸಮಸ್ಯೆಗಳನ್ನು ನ್ಯಾಯಮೂರ್ತಿ ಹೇಮಾ ಅವರ ಸಮಿತಿ ಬಹಿರಂಗಪಡಿಸಿದೆ. ಕನ್ನಡ ಚಿತ್ರರಂಗದಲ್ಲೂ ಈ ರೀತಿಯ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಬೇಕು.

ದೇಶದಲ್ಲೇ ಮೊದಲ ಬಾರಿಗೆ ಫೈರ್‌ ಸಂಸ್ಥೆ ಕನ್ನಡ ಚಿತ್ರೋದ್ಯಮದಲ್ಲಿ ಆತಂರಿಕ ದೂರುಗಳ ಸಮಿತಿಯನ್ನು ರಚಿಸಿದೆ. ಚಲನಚಿತ್ರೋದ್ಯಮದಲ್ಲಿ ಮಹಿಳೆಯರಿಗೆ ಸುರಕ್ಷಿತ ವಾತಾವರಣ ನಿರ್ಮಿಸಲು ಪ್ರಯತ್ನಿಸುತ್ತದೆ.

ಲೈಂಗಿಕ ಕಿರುಕುಳ ಸೇರಿದಂತೆ ಕನ್ನಡ ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ತನಿಖೆ ಮಾಡಬೇಕು, ಎಲ್ಲಾ ಮಹಿಳೆಯರಿಗೂ ಸುರಕ್ಷಿತ ಹಾಗೂ ನ್ಯಾಯಯುತ ವಾತಾವರಣ ಸೃಷ್ಟಿಸಲು ಅಗತ್ಯ ನಿಯಮಾವಳಿಗಳನ್ನು ಮಾಡಿಕೊಡಬೇಕು ಎಂದು ಮನವಿ ಮಾಡಲಾಗಿತ್ತು.

ಸುಪ್ರೀಂಕೋರ್ಟ್‌ ಅಥವಾ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿತ್ತು.ಈ ಹಿನ್ನೆಲೆಯಲ್ಲಿ ಇಂದು ನಟ ಚೇತನ್‌, ನಟಿ ಶೃತಿ ಹರಿಹರನ್‌ರವರು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಪತ್ರವನ್ನು ಹಸ್ತಾಂತರಿಸಿದರಲ್ಲದೆ, ಚಿತ್ರರಂಗದ ಸಮಸ್ಯೆಗಳ ಬಗ್ಗೆ ಸುದೀರ್ಘ ವಿವರಣೆ ನೀಡಿದ್ದಾರೆ.

RELATED ARTICLES

Latest News