Monday, September 16, 2024
Homeರಾಷ್ಟ್ರೀಯ | Nationalನೀಟ್‌ ಪರೀಕ್ಷೆ ತಯಾರಿ ನಡೆಸುತ್ತಿದ್ದ ಮತ್ತೊಬ್ಬ ವಿದ್ಯಾರ್ಥಿ ಆತ್ಮಹತ್ಯೆ

ನೀಟ್‌ ಪರೀಕ್ಷೆ ತಯಾರಿ ನಡೆಸುತ್ತಿದ್ದ ಮತ್ತೊಬ್ಬ ವಿದ್ಯಾರ್ಥಿ ಆತ್ಮಹತ್ಯೆ

NEET aspirant hangs self in Rajasthan's Kota, 15th student suicide this year

ಜೈಪುರ,ಸೆ.5- ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ಪದವಿಪೂರ್ವ) (ನೀಟ್‌) ಗೆ ತಯಾರಿ ನಡೆಸುತ್ತಿದ್ದ 21 ವರ್ಷದ ವಿದ್ಯಾರ್ಥಿ ಕಳೆದ ರಾತ್ರಿ ರಾಜಸ್ಥಾನದ ಕೋಟಾದಲ್ಲಿ ಆತಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಮಥುರಾದ ವಿದ್ಯಾರ್ಥಿಯು ಒಂದು ವರ್ಷದ ಹಿಂದೆ ಕೋಟಾಕ್ಕೆ ಆಗಮಿಸಿ ತನ್ನ ಬಾಡಿಗೆ ಮನೆಯಲ್ಲಿ ಆತಹತ್ಯೆ ಮಾಡಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯೊಂದಿಗೆ, ಕೋಟಾದಲ್ಲಿ 16 ನೇ, ಸಿಕರ್‌ ಮತ್ತು ಜೈಪುರದಲ್ಲಿ ತಲಾ ಒಬ್ಬರು ಸೇರಿದಂತೆ ರಾಜಸ್ಥಾನದಾದ್ಯಂತ 18 ಕ್ಕೆ ತಲುಪಿದೆ.

ಕೋಟಾ (ಪ್ರಥಮ) ಉಪ ಪೊಲೀಸ್‌‍ ಅಧೀಕ್ಷಕರ ಪ್ರಕಾರ, ಉತ್ತರ ಪ್ರದೇಶದ ಮಥುರಾದ ವಿದ್ಯಾರ್ಥಿ ರಾಜೇಶ್‌ ಟೈಲರ್‌ ಒಂದು ವರ್ಷದ ಹಿಂದೆ ಕೋಟಾಕ್ಕೆ ಆಗಮಿಸಿ ಜವಾಹರ್‌ ನಗರ ಪ್ರದೇಶದಲ್ಲಿ ಕಳೆದ ರಾತ್ರಿ ತನ್ನ ಬಾಡಿಗೆ ನಿವಾಸದಲ್ಲಿ ಆತಹತ್ಯೆ ಮಾಡಿಕೊಂಡಿದ್ದಾನೆ.

ಹಲವಾರು ಮನವಿ ಮಾಡಿಕೊಂಡರೂ ಸ್ಪಂದಿಸದ ಹಿನ್ನಲೆಯಲ್ಲಿ ಮನೆಯ ಮಾಲೀಕರಿಗೆ ಅನುಮಾನ ಬಂದಾಗ ಈ ಘಟನೆ ಬಯಲಿಗೆ ಬಂದಿದೆ. ಬಳಿಕ ಸ್ಥಳೀಯ ಪೊಲೀಸ್‌‍ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯ ಠಾಣಾಧಿಕಾರಿ ಹರಿ ನಾರಾಯಣ ಶರ್ಮಾ ಅವರು ತಕ್ಷಣ ಸ್ಥಳಕ್ಕಾಗಮಿಸಿ ಬಾಗಿಲು ಒಡೆದು ನೋಡಿದಾಗ ಮೃತದೇಹ ಪತ್ತೆಯಾಗಿದೆ. ಆತನ ಸ್ಥಳದಿಂದ ಇದುವರೆಗೆ ಯಾವುದೇ ಆತಹತ್ಯೆ ಪತ್ರ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳವನ್ನು ಪರೀಕ್ಷಿಸಲು ಎಫ್‌ಎಸ್‌‍ಎಲ್‌ ತಂಡವನ್ನು ಸಹ ಕರೆಯಲಾಗಿದೆ. ಆತನ ಪೋಷಕರಿಗೂ ಮಾಹಿತಿ ನೀಡಲಾಗಿತ್ತು. ಕಳೆದ ಕೆಲವು ದಿನಗಳಲ್ಲಿ ವಿದ್ಯಾರ್ಥಿಯಲ್ಲಿ ಯಾವುದೇ ವರ್ತನೆಯ ಬದಲಾವಣೆಗಳ ಬಗ್ಗೆ ನಾವು ಅವರನ್ನು ಪ್ರಶ್ನಿಸುತ್ತೇವೆ ಎಂದು ಡಿಎಸ್ಪಿ ಹೇಳಿದರು.

RELATED ARTICLES

Latest News