Saturday, February 24, 2024
Homeಇದೀಗ ಬಂದ ಸುದ್ದಿಜಂಟಿ ಅಧಿವೇಶನಕ್ಕೆ ಆಗಮಿಸಿದ ರಾಜ್ಯಪಾಲರಿಗೆ ಆತ್ಮೀಯ ಸ್ವಾಗತ

ಜಂಟಿ ಅಧಿವೇಶನಕ್ಕೆ ಆಗಮಿಸಿದ ರಾಜ್ಯಪಾಲರಿಗೆ ಆತ್ಮೀಯ ಸ್ವಾಗತ

ಬೆಂಗಳೂರು,ಫೆ.12- ವಿಧಾನ ಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ಆಗಮಿಸಿದ ರಾಜ್ಯಪಾಲ ಥಾವರ್‍ಚಂದ್ ಗೆಲ್ಹೋಟ್ ಅವರನ್ನು ಸಂಪ್ರದಾಯದಂತೆ ಆತ್ಮೀಯವಾಗಿ ಸ್ವಾಗತ ಮಾಡಲಾಯಿತು. ರಾಜಭವನದಿಂದ ವಿಶೇಷ ವಾಹನದಲ್ಲಿ ಆಗಮಿಸಿದ ಅವರನ್ನು ಶಿಷ್ಟಾಚಾರದಂತೆ ಶಾಸಕರ ಭವನ ಪ್ರವೇಶಿಸುವ ಗೇಟ್ ಬಳಿ ಅಶ್ವದಳದ ಮೂಲಕ ಬರ ಮಾಡಿಕೊಳ್ಳಲಾಯಿತು.

ನಂತರ ವಿಧಾನಸೌಧ ಮುಂಭಾಗ ಆಗಮಿಸಿದ ರಾಜ್ಯಪಾಲರನ್ನು ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಹೂಗುಚ್ಚ ನೀಡಿ ಬರಮಾಡಿಕೊಂಡರು.

ಕತಾರ್ ಜೈಲಿನಲ್ಲಿದ್ದ 8 ಮಾಜಿ ಭಾರತೀಯ ನೌಕಾ ಸಿಬ್ಬಂದಿ ಬಿಡುಗಡೆ : ಭಾರತಕ್ಕೆ ರಾಜತಾಂತ್ರಿಕ ಗೆಲುವು

ಬಳಿಕ ವಿಧಾನಸಭೆ ಪ್ರಾಂಗಣ ಪ್ರವೇಶಿಸುತ್ತಿದ್ದಂತೆ ಸಂಪ್ರದಾಯಂತೆ ಪೊಲೀಸ್ ಬ್ಯಾಂಡ್ ಮೂಲಕ ಸ್ವಾಗತ ಕೋರಲಾಯಿತು. ಬಳಿಕ ಸದನದ ಸದಸ್ಯರೆಲ್ಲರೂ ಎದ್ದು ನಿಂತು ರಾಜ್ಯಪಾಲರಿಗೆ ಸ್ವಾಗತ ಕೋರಿದರು.

RELATED ARTICLES

Latest News