Saturday, May 4, 2024
Homeಇದೀಗ ಬಂದ ಸುದ್ದಿಕತಾರ್ ಜೈಲಿನಲ್ಲಿದ್ದ 8 ಮಾಜಿ ಭಾರತೀಯ ನೌಕಾ ಸಿಬ್ಬಂದಿ ಬಿಡುಗಡೆ : ಭಾರತಕ್ಕೆ ರಾಜತಾಂತ್ರಿಕ ಗೆಲುವು

ಕತಾರ್ ಜೈಲಿನಲ್ಲಿದ್ದ 8 ಮಾಜಿ ಭಾರತೀಯ ನೌಕಾ ಸಿಬ್ಬಂದಿ ಬಿಡುಗಡೆ : ಭಾರತಕ್ಕೆ ರಾಜತಾಂತ್ರಿಕ ಗೆಲುವು

ನವದೆಹಲಿ, ಫೆ12 (ಪಿಟಿಐ) ಕತಾರ್‍ನ ಜೈಲಿನಲ್ಲಿ ಸಂಕಷ್ಟದಲ್ಲಿದ್ದ 8 ಮಾಜಿ ಭಾರತೀಯ ನೌಕಾ ಸಿಬ್ಬಂದಿಯನ್ನು ಕತಾರ್ ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ. ಈ ನಿರ್ಧಾರವನ್ನು ಭಾರತ ಸ್ವಾಗತಿಸುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಹೇಳಿದೆ.

ಕತಾರ್‍ನಲ್ಲಿ ಬಂಧಿತರಾಗಿರುವ ದಹ್ರಾ ಗ್ಲೋಬಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಎಂಟು ಭಾರತೀಯ ಪ್ರಜೆಗಳ ಬಿಡುಗಡೆಯನ್ನು ಭಾರತ ಸರ್ಕಾರ ಸ್ವಾಗತಿಸುತ್ತದೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.

33 ಲಕ್ಷ ರೈತರಿಗೆ 628 ಕೋಟಿ ಹಣ : ಸಚಿವ ಕೃಷ್ಣ ಭೈರೆಗೌಡ

ಅವರ ಪೈಕಿ ಎಂಟು ಮಂದಿಯಲ್ಲಿ 7 ಮಂದಿ ಭಾರತಕ್ಕೆ ಮರಳಿದ್ದಾರೆ. ಮರಣದಂಡನೆ ಶಿಕ್ಷೆಯಿಂದ ಪಾರಾದ ಇವರು ಮರು ಜೀವ ಪಡೆದಿದ್ದಾರೆ.ಬೇಹುಗಾರಿಕೆ ಆರೋಪದ ಮೇಲೆ ಇವರನ್ನು ಕತಾರ್‍ನಲ್ಲಿ ಬಂದಿಸಲಾಗಿತ್ತು. ಭಾರತ ಸರ್ಕಾರ ನಿರಂತರವಾಗಿ ಇವರ ಪರ ನಿಂತು ಬಿಡುಗಡೆವರೆಗೂ ಶ್ರಮಿಸಿದೆ ಇದೊಂದು ರಾಜತಾಂತ್ರಿಕ ಗೆಲವು ಎಂದೇ ಬಣ್ಣಿಸಲಾಗಿದೆ.

RELATED ARTICLES

Latest News