Wednesday, January 15, 2025
Homeಇದೀಗ ಬಂದ ಸುದ್ದಿಮನೆಗೆ ಬೆಂಕಿ, ಮೂವರು ಸಹೋದರಿಯರು ಆಹುತಿ

ಮನೆಗೆ ಬೆಂಕಿ, ಮೂವರು ಸಹೋದರಿಯರು ಆಹುತಿ

ಬನಿಹಾಲ್/ಜಮ್ಮು, ಫೆ.12: ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಮನೆಗೆ ಬೆಂಕಿ ಬಿದ್ದು ಮೂವರು ಸಹೋದರಿಯರು ಸಜೀವ ದಹನಗೊಂಡಿದ್ದಾರೆ ಉಖ್ರಾಲ್ ಬ್ಲಾಕ್‍ನಲ್ಲಿರುವ ಧನ್ಮಸ್ತಾ-ತಾಜ್ನಿಹಾಲ್ ಗ್ರಾಮದ ಮೂರು ಅಂತಸ್ತಿನ ಮನೆಯಲ್ಲಿ ಇಂದು ಮುಂಜಾನೆ ಬೆಂಕಿ ಹೊತ್ತಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಬಿಸ್ಮಾ (18), ಸೈಕಾ (14) ಮತ್ತು ಸಾನಿಯಾ (11) ಎಂದು ಗುರುತ್ತಿಸಲಾಗಿದೆ. ಮನೆಯ ಮೇಲಿನ ಮಹಡಿಯಲ್ಲಿ ಮಲಗಿದ್ದರು ಇವರಿಗೆ ಬೆಂಕಿ ಹೊತ್ತಿಕೊಂಡಿರುವುದು ಗೊತ್ತಾಗಿಲ್ಲ ಎಚ್ಚರಗೊಳ್ಳುವ ವೇಳೆಗಾಗಲೆ ಬೆಂಕಿ ಜ್ವಾಲೆ ಮನೆ ಪೂರ್ಣ ಭಾಗ ಆವರಿಸಿತ್ತು ಅಲ್ಲಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಸಜೀವ ದಹನಗೊಂಡಿದ್ದಾರೆ.

ನಾನು ಮಂಡ್ಯ ಟಿಕೆಟ್ ಆಕಾಂಕ್ಷಿಯಲ್ಲ : ನಿಖಿಲ್ ಕುಮಾರಸ್ವಾಮಿ

ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಸ್ಥಳಕ್ಕೆ ಬೇಟಿ ನೀಡಿ ಬೆಂಕಿ ನಂದಿಸಿದ್ದಾರೆ ಬಾಲಕೀಯರ ಸುಟ್ಟ ಶವಗಳು ಪತ್ತೆಯಾಗಿದ್ದು ಆಸ್ಪತ್ರೆಗೆ ಸಾಗಿಸಲಾಗಿದೆ. ಮನೆಗೆ ಬೆಂಕಿ ಬೀಳಲು ಕಾರಣವನ್ನು ಇನ್ನೂ ಕಂಡುಹಿಡಿಯಬೇಕಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES

Latest News