Friday, May 3, 2024
Homeರಾಜ್ಯಮತ್ತೆ ವಕ್ಕರಿಸಿದ ಕಿಲ್ಲರ್ ಕೊರೊನಾ, ಶುರುವಾಯ್ತು ಆತಂಕ

ಮತ್ತೆ ವಕ್ಕರಿಸಿದ ಕಿಲ್ಲರ್ ಕೊರೊನಾ, ಶುರುವಾಯ್ತು ಆತಂಕ

ಬೆಂಗಳೂರು,ಡಿ.18- ಕೊರೊನಾ ಹೆಸರು ಕೇಳಿದರೆ ಸಾಕು ಜನರು ಬೆಚ್ಚಿ ಬೀಳ್ತಾರೆ. ಅಲೆಗಳ ಮೇಲೆ ಅಲೆ ಬಂದು ಜನರನ್ನು ಹಿಂಡಿ ಹಿಪ್ಪೆ ಮಾಡಿದೆ. ಕಳೆದೆರಡು ವರ್ಷಗಳಿಂದ ಮರೆಯಾಗಿದ್ದ ಡೆಡ್ಲಿ ಕ್ರೂರಿ ಕೊರೊನಾ ಮತ್ತೆ ಒಕ್ಕರಿಸಿದ್ದು ದೇಶದೆಲ್ಲೆಡೆ ತಲ್ಲಣ ಉಂಟುಮಾಡಿದೆ.

ಕೆಲದಿನಗಳ ಹಿಂದೆ ಕೇರಳ, ತಮಿಳುನಾಡು ಸೇರಿ ಹಲವೆಡೆ ಕೊರೊನಾ ಪ್ರಕರಣಗಳ ಸಂಖ್ಯೆ ಉಲ್ಬಣಗೊಂಡಿದೆ. ಕೇರಳದಲ್ಲಿ ಕೊರೊನಾ ಹೊಸ ಥಳಿ ಪತ್ತೆಯಾಗಿದ್ದು, ಕರ್ನಾಟಕ ರಾಜ್ಯದಲ್ಲೂ ಸಹ ಆತಂಕದ ಕಾರ್ಮೋಡ ಕವಿಯತೊಡಗಿದೆ. ಕೇರಳದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಳದ ಬೆನ್ನಲ್ಲೇ ರಾಜ್ಯ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ಸಂಬಂಧ ಈಗಾಗಲೇ ಆರೋಗ್ಯ ಸಚಿವರು ಮೊದಲ ಸುತ್ತಿನ ಸಭೆ ನಡೆಸಿದ್ದಾರೆ.

ಹಿಂದುಳಿದ ವರ್ಗಗಳ ಸಮೀಕ್ಷೆಯನ್ನು ಆಕ್ಷೇಪಿಸುತ್ತಿರುವುದು ಅರ್ಥಹೀನ : ಸಚಿವ ರಾಜಣ್ಣ

ವೈರಸ್ ತಜ್ಞ ಡಾ.ರವಿ ನೇತೃತ್ವದಲ್ಲಿ ನಾಳೆ ನಡೆಯಲಿರುವ 2 ನೇ ಸುತ್ತಿನ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಏನೆಲ್ಲಾ ರೂಲ್ಸ್ ಜಾರಿಯಾಗಬಹುದು. ಮಾರ್ಗಸೂಚಿ ಹೇಗಿರಬಹುದು ಎಂಬುದನ್ನು ಕಾದುನೋಡಬೇಕಾಗಿದೆ. ಒಂದು ವೇಳೆ ಮಾರ್ಗಸೂಚಿ ಹೇಗಿರಲಿದೆ ಎನ್ನುವುದನ್ನು ನೋಡುವುದಾದರೆ ಆಸ್ಪತ್ರೆ ಒಳಗಡೆ ಹಾಗೂ ಹೊರಗಡೆ ಆರೋಗ್ಯ ಸಿಬ್ಬಂದಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮಾಸ್ಕ್ ಧರಿಸಿಯೇ ವೈದ್ಯರು ರೋಗಿಗಳಿಗೆ ಟ್ರೀಟ್‍ಮೆಂಟ್ ನೀಡಬೇಕು.

ಆಸ್ಪತ್ರೆ ಮತ್ತು ಜನಸಂದಣಿ ಇರುವ ಪ್ರದೇಶಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಜ್ವರ ಹಾಗೂ ಶೀತದ ನಡುವೆ ಬೇರೆ ಖಾಯಿಲೆಯಿಂದ ಬಳಲುತ್ತಿರುವವರು ಸ್ವಚಿಕಿತ್ಸೆಗೆ ಒಳಗಾಗದೇ ವೈದ್ಯರನ್ನು ಭೇಟಿ ಮಾಡಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯಬೇಕು. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ಕೋವಿಡ್ ಟೆಸ್ಟ್ ಅನ್ನು ಕಡ್ಡಾಯ ಮಾಡಲಾಗುವುದು.

ಬೆಂಗಳೂರು ಉಗ್ರರ ಸ್ಲೀಪರ್‌ಸೆಲ್ : ಗೃಹ ಸಚಿವ ಡಾ.ಜಿ.ಪರಮೇಶ್ವರ್

ಹಾಸಿಗೆ, ಐಸಿಯು ಮತ್ತು ವೈದ್ಯಕೀಯ ಉಪಕರಣಗಳು ಸುಸ್ಥಿತಿಯಲ್ಲಿಡುವಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಹೀಗೆ ಹಲವಾರು ಮಾರ್ಗಸೂಚಿಗಳು, ನಿಯಮಗಳು ಜಾರಿಗೆ ಬರಲಿವೆ. ಏನೇ ಇದ್ದರೂ ಜನರು ಮಾತ್ರ ಸುರಕ್ಷಿತವಾಗಿ ಈ ಹಿಂದಿನ ಮಾರ್ಗಸೂಚಿಗಳನ್ನು ಪಾಲಿಸಿ ಮಹಾಮಾರಿಯಿಂದ ರಕ್ಷಿಸಿಕೊಳ್ಳಬೇಕಾಗಿದೆ.

RELATED ARTICLES

Latest News