Saturday, July 27, 2024
Homeರಾಜ್ಯಜಾತಿ ಜನಗಣತಿ ಮೂಲ ಹಸ್ತ ಪ್ರತಿ ನಾಪತ್ತೆ

ಜಾತಿ ಜನಗಣತಿ ಮೂಲ ಹಸ್ತ ಪ್ರತಿ ನಾಪತ್ತೆ

ಬೆಂಗಳೂರು, ನ.22- ಜಾತಿ ಜನಗಣತಿ ಎಂದೇ ಭಾವಿಸಲಾದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2015ರ ಮೂಲ ಹಾಗೂ ಹಸ್ತ ಪ್ರತಿಗಳೇ ನಾಪತ್ತೆಯಾಗಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ. ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾದ ಕೆ.ಜಯಪ್ರಕಾಶ್ ಹೆಗ್ಡೆ ಅವರು ರಾಜ್ಯ ಸರ್ಕಾರಕ್ಕೆ ಕಳೆದ 2021ರ ಅಕ್ಟೋಬರ್ 5ರಂದೇ ಪತ್ರ ಬರೆದಿದ್ದು, ಮುಂದೆ ಈ ವಿಷಯಕ್ಕೆ ಸಂಬಂಧಪಟ್ಟಂತೆ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಸ್ಪಷ್ಟನೆ ನೀಡುವಂತೆ ಸರ್ಕಾರಕ್ಕೆ ಕೋರಿದ್ದಾರೆ.

ಈ ಕುರಿತ ಪತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪತ್ರದ ಮಾಹಿತಿ ಪ್ರಕಾರ 2021ರ ಆಗಸ್ಟ್ 26ರಂದು ಕಚೇರಿಯಲ್ಲಿ ಇರಿಸಲಾಗಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2015ರಲ್ಲಿ ಸಂಗ್ರಹಿಸಿದ್ದ ಮುಖ್ಯ ಅಂಶಗಳು ಹಾಗೂ ಇತರ ವಿವರಗಳನ್ನೊಳಗೊಂಡ ಸೀಲ್ಡ್ ಬಾಕ್ಸ್‍ಗಳಲ್ಲಿದ್ದ ವರದಿಯನ್ನು ಆಯೋಗದ ಅಧ್ಯಕ್ಷರು, ಸದಸ್ಯರು ಹಾಗೂ ಸದಸ್ಯ ಕಾರ್ಯದರ್ಶಿ ಅವರ ಸಮ್ಮುಖದಲ್ಲಿ ಮಹಜರ್ ನಡೆಸಿ ತೆರೆಯಲಾಗಿದೆ.

ಮುದ್ರಿತ ಮುಖ್ಯವರದಿಯಲ್ಲಿ ಸದಸ್ಯ ಕಾರ್ಯದರ್ಶಿ ಅವರ ಸಹಿ ಇಲ್ಲದೆ ಇರುವುದನ್ನು ಆಯೋಗ ಗಮನಿಸಿದೆ. ಇದರೊಂದಿಗೆ ಸಂಬಂಸಿದ ಮುಖ್ಯವರದಿಯ ಮೂಲ ಅಥವಾ ಹಸ್ತಪ್ರತಿ ಬಾಕ್ಸ್‍ನಲ್ಲಿ ಲಭ್ಯ ಇಲ್ಲದಿರುವುದನ್ನು ಅಕಾರಿಗಳ ಗಮನಕ್ಕೆ ತರಲಾಗಿದ್ದು, ಮೂಲ ಪ್ರತಿಗಳನ್ನು ಒದಗಿಸುವಂತೆ ಸೂಚಿಸಲಾಗಿದೆ.

ಅಕಾರಿಗಳು ಈ ಬಗ್ಗೆ ಉತ್ತರವನ್ನೂ ನೀಡಿದ್ದಾರೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಆದರೆ, ಅಕಾರಿಗಳ ಉತ್ತರವನ್ನು ಮುಖ್ಯಮಂತ್ರಿಯವರಿಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಗಿದೆ. ಮೂಲ ಪ್ರತಿಗೆ ಸದಸ್ಯ ಕಾರ್ಯದರ್ಶಿ ಅವರ ಸಹಿ ಇಲ್ಲ ಎಂಬ ತಗಾದೆ ಮೊದಲಿನಿಂದಲೂ ಇದೆ. ಅದನ್ನು ಅಂಗೀಕರಿಸಲು ತಾಂತ್ರಿಕ ಸಮಸ್ಯೆ ಎದುರಾಗುತ್ತದೆ ಎಂಬ ಕಾರಣಕ್ಕೆ ಈವರೆಗಿನ ಎಲ್ಲಾ ಸರ್ಕಾರಗಳು ಈ ವಿಷಯದಲ್ಲಿ ಜಾರಿಕೊಳ್ಳುತ್ತಾ ಬರುತ್ತಿವೆ.

ಕಾಂತರಾಜು ಆಯೋಗ ಸಿದ್ಧಪಡಿಸಿದ ವರದಿಯಲ್ಲಿ ಕೆಲವು ಮಾಹಿತಿಗಳನ್ನು ತಿದ್ದಲಾಗಿದೆ ಎಂಬ ಆರೋಪಗಳಿವೆ. ಇದಕ್ಕೆ ಸಾಕ್ಷ್ಯವಾಗಿ ಹಸ್ತ ಪ್ರತಿಗಳ ಪರಿಶೀಲನೆ ನಡೆಯಬೇಕಿತ್ತು. ಆದರೆ, ಈಗ ಅವುಗಳೇ ನಾಪತ್ತೆಯಾಗಿವೆ. ಮೂಲ ವರದಿಯ ಪ್ರತಿ ಕೂಡ ಇಲ್ಲ. ಮನೆ ಮನೆ ಸಮೀಕ್ಷೆಯಲ್ಲೂ ನಿಖರತೆ ಇಲ್ಲ. ಮಾಹಿತಿ ಕಲೆ ಹಾಕುವಲ್ಲಿ ಅಸ್ಪಷ್ಟತೆ ಮತ್ತು ಅವೈಜ್ಞಾನಿಕ ಕ್ರಮಗಳನ್ನು ಅನುಸರಿಸಲಾಗಿತ್ತು ಎಂಬ ಆರೋಪಗಳಿವೆ.
ಮೂಲ ಅಥವಾ ಹಸ್ತ ಪ್ರತಿಯ ಅನುಪಸ್ಥಿತಿಯಲ್ಲಿ ಸರ್ಕಾರಕ್ಕೆ ಸಲ್ಲಿಕೆಯಾಗುವ ಅಥವಾ ಸ್ವೀಕರಿಸಲ್ಪಡುವ ವರದಿಯ ನೈಜ್ಯತೆಯ ಬಗ್ಗೆ ಪ್ರಶ್ನೆಗಳು ಉದ್ಭವಿಸಿವೆ.

ವಿಚಾರಣೆಗೆ ಕರೆ ತಂದಿದ್ದ ವ್ಯಕ್ತಿ ಆತ್ಮಹತ್ಯೆ: ಪೊಲೀಸ್ ಸಿಬ್ಬಂದಿಗಳ ಅಮಾನತ್ತು

ಹಲವಾರು ಜಾತಿ ಹಾಗೂ ಸಮುದಾಯಗಳು ಸಮೀಕ್ಷಾ ವರದಿಯನ್ನು ವಿರೋಧಿಸುತ್ತಿವೆ. ಸರ್ಕಾರದಲ್ಲಿ ಭಾಗಿಯಾಗಿರುವ ಸಚಿವರುಗಳ ನಡುವೆಯೇ ಬಹಳಷ್ಟು ಗೊಂದಲಗಳಿವೆ. ಕೆಲವರು ವರದಿ ಅಂಗೀಕಾರಗೊಳ್ಳಬೇಕು ಎಂದರೆ, ಇನ್ನು ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಇಂತಹ ಸಂಕಷ್ಟದ ಸಮಯದಲ್ಲಿ ಮೂಲ ಮತ್ತು ಹಸ್ತ ಪ್ರತಿಗಳು ಇಲ್ಲ ಎನ್ನುವುದಾದರೆ 2015ರ ಸಮೀಕ್ಷಾ ವರದಿ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗುತ್ತದೆ. 172 ಕೋಟಿ ರೂ. ಖರ್ಚು ಮಾಡಿ ತಯಾರಿಸಲಾದ ವರದಿ ಯಾವುದಕ್ಕೂ ಪ್ರಯೋಜನಕ್ಕೆ ಬಾರದೆ ನಿರರ್ಥಕವಾಗುವ ಆತಂಕವಿದೆ.

ಈ ಹಿಂದೆ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ದೇಶದಲ್ಲೇ ಮೊದಲ ಬಾರಿಗೆ ಜಾತಿ ಜನಗಣತಿ ನಡೆಸಲಾಗುತ್ತಿದೆ ಎಂದು ಭಾರೀ ಪ್ರಚಾರ ಪಡೆದುಕೊಂಡಿದ್ದರು. ಆದರೆ ಸಮೀಕ್ಷೆ ನಡೆದ ಬಳಿಕ ವರದಿ ಸ್ವೀಕರಿಸಲಿಲ್ಲ.

ಸರ್ಕಾರದ ಅವಧಿ ಮುಗಿಯುವ ವೇಳೆ ವರದಿ ಸಿದ್ಧವಾಗಿರಲಿಲ್ಲ ಎಂಬ ನೆಪ ಹೇಳಲಾಗುತ್ತಿದೆ. ಅನಂತರ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸೇರಿದಂತೆ ಎಲ್ಲರೂ ಜಾತಿ ಜನಗಣತಿಯ ವರದಿಯಿಂದ ಅಂತರ ಕಾಯ್ದುಕೊಂಡಿದ್ದರು.

ಕಾಂಗ್ರೆಸ್ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲೇ ಸಮೀಕ್ಷಾ ವರದಿಯನ್ನು ಅಂಗೀಕರಿಸುವುದಾಗಿ ಭರವಸೆ ನೀಡಿತ್ತು. ನಿರೀಕ್ಷೆ ಮೀರಿ ಗೆಲುವು ಸಾಸಿದ ಕಾಂಗ್ರೆಸ್ ಸರ್ಕಾರ ರಚಿಸಿದ 6 ತಿಂಗಳಾದರೂ ವರದಿಯ ವಿಷಯದಲ್ಲಿ ಹಗ್ಗ ಜಗ್ಗಾಟವಾಡುತ್ತಿದೆ.

ವಿಚಾರಣೆಗೆ ಕರೆ ತಂದಿದ್ದ ವ್ಯಕ್ತಿ ಆತ್ಮಹತ್ಯೆ: ಪೊಲೀಸ್ ಸಿಬ್ಬಂದಿಗಳ ಅಮಾನತ್ತು

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗರ ವರದಿಯ ಪರವಾಗಿದ್ದರೆ, ಡಿ.ಕೆ.ಶಿವಕುಮಾರ್ ಮತ್ತು ಹಲವಾರು ಮಂದಿ ಸಮೀಕ್ಷೆ ವೈಜ್ಞಾನಿಕವಾಗಿ ನಡೆಯಬೇಕು ಬಳಿಕ ಜಾರಿಯಾಗಬೇಕು ಎಂಬ ನಿಲುವಿಗೆ ಅಂಟಿಕೊಂಡಿದ್ದಾರೆ. ಇದೆಲ್ಲದರ ನಡುವೆ ಮೂಲ ಹಾಗೂ ಹಸ್ತಪ್ರತಿಗಳ ಲಭ್ಯವಿಲ್ಲ ಎಂಬ ವಿಚಾರ ವಿವಾದಗಳಿಗೆ ಹೊಸ ಸ್ವರೂಪ ನೀಡುವ ಸಾಧ್ಯತೆ ಇದೆ.

RELATED ARTICLES

Latest News