Saturday, May 4, 2024
Homeರಾಜ್ಯರಾಜ್ಯದಲ್ಲಿ ನಾಳೆಯಿಂದ 2 ದಿನ ಮಳೆ ಸಾಧ್ಯತೆ

ರಾಜ್ಯದಲ್ಲಿ ನಾಳೆಯಿಂದ 2 ದಿನ ಮಳೆ ಸಾಧ್ಯತೆ

ಬೆಂಗಳೂರು, ನ.28- ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ನಾಳೆಯಿಂದ ಎರಡು ದಿನಗಳ ಕಾಲ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ. ಆದರೆ, ಭಾರೀ ಮಳೆಯಾ ಗುವ ಮುನ್ಸೂಚನೆಗಳಿಲ್ಲ. ಹವಾಮಾನ ಮುನ್ಸೂಚನೆ ಪ್ರಕಾರ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಆಗಾಗ್ಗೆ ಬಲವಾದ ಮೇಲ್ಮೈ ಗಾಳಿ ಬೀಸಲಿದೆ. ಕೆಲವೆಡೆ ಚದುರಿದಂತೆ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ.

ಬಂಗಾಳಕೊಲ್ಲಿಯ ದಕ್ಷಿಣ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಇದು ತೀವ್ರ ಸ್ವರೂಪ ಪಡೆದು ಲಘು ಚಂಡಮಾರುತ ಉಂಟಾಗುವ ಸಂಭವವಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ತಮಿಳುನಾಡು ಕರಾವಳಿಗೆ ಹೊಂದಿಕೊಂಡಂತಿರುವ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಲಿದೆ. ಆದರೆ, ರಾಜ್ಯದ ದಕ್ಷಿಣ ಹಾಗೂ ಪೂರ್ವ ಭಾಗದ ಕೆಲವು ಜಿಲ್ಲೆಗಳಲ್ಲಿ ಗುರುವಾರದವರೆಗೂ ಹಗುರದಿಂದ ಸಾಧಾರಣಾ ಮಳೆಯಾಗುವ ಲಕ್ಷಣಗಳಿವೆ ಎಂದು ಹೇಳಿದ್ದಾರೆ.

ಅಮೆರಿಕ ನೆಲೆಗಳ ಛಾಯಾಚಿತ್ರ ತೆಗೆದಿದೆಯಂತೆ ಉತ್ತರ ಕೊರಿಯಾ ಉಪಗ್ರಹ

ವಾಯುಭಾರ ಕುಸಿತವು ಚಂಡಮಾರುತದ ಸ್ವರೂಪ ಪಡೆದರೂ ರಾಜ್ಯದ ಮೇಲೆ ಅದರ ಪರಿಣಾಮ ಹೆಚ್ಚಾಗಿರುವುದಿಲ್ಲ. ತಮಿಳುನಾಡು ಕರಾವಳಿ ಸನಿಹಕ್ಕೆ ಬರುತ್ತಿದ್ದಂತೆ ಚಂಡಮಾರುತವು ಪೂರ್ವ ಹಾಗೂ ಈಶಾನ್ಯದ ಕಡೆಗೆ ತಿರುವು ಪಡೆದು ಚಲಿಸುವ ಸಾಧ್ಯತೆಗಳು ಹೆಚ್ಚಾಗಿವೆ.

ಹೀಗಾಗಿ ಅದರ ಪ್ರಭಾವದಿಂದ ರಾಜ್ಯದಲ್ಲಿ ಮೋಡ ಕವಿದ ವಾತಾವರಣ ಉಂಟಾಗಬಹುದು. ಒಂದೆರಡು ಕಡೆ ಚದುರಿದಂತೆ ತುಂತುರು ಮಳೆ ನಿರೀಕ್ಷಿಸಬಹುದು. ಹೆಚ್ಚಿನ ಪ್ರಮಾಣದ ಮಳೆಯಾಗುವ ಸಾಧ್ಯತೆ ವಿರಳ. ವಾಯುಭಾರ ಕುಸಿತ ಯಾವ ರೀತಿ ಮಾರ್ಪಾಡಾಗಲಿದೆ ಎಂಬುದರ ಮೇಲೆ ಮಳೆ ಬರುವಿಕೆಯೂ ಅವಲಂಭಿತವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.

ನೈರುತ್ಯ ಮುಂಗಾರಿನಂತೆ ಈಶಾನ್ಯ ಹಿಂಗಾರು ಮಳೆಯೂ ಕೈಕೊಟ್ಟಿದೆ. ಇದರಿಂದ ಮುಂಗಾರು ಹಂಗಾಮಿನಂತೆ ಹಿಂಗಾರು ಹಂಗಾಮಿನಲ್ಲೂ ಬರದ ಕರಾಳ ಛಾಯೆ ಮುಂದುವರೆದಿದೆ. ಇದರಿಂದ ಹಿಂಗಾರಿನಲ್ಲೂ ವಾಡಿಕೆ ಪ್ರಮಾಣದ ಮಳೆಯಾಗಿಲ್ಲ. ಬಿತ್ತನೆಯಾಗಿದ್ದ ಅಲ್ಪ, ಸ್ವಲ್ಪ ಬೆಳೆಗಳು ತೇವಾಂಶದ ಕೊರತೆಯಿಂದ ಒಣಗುತ್ತಿವೆ.

ಮದ್ರಾಸ್ ಐಐಟಿ ವಿದ್ಯಾರ್ಥಿ ಆತ್ಮಹತ್ಯೆ, ಪ್ರೊಫೇಸರ್ ಅಮಾನತು

ರಾಜ್ಯದಲ್ಲಿ ಹಿಂಗಾರು ಮಳೆ ವಾಡಿಕೆಗಿಂತ ಕಡಿಮೆಯಾಗಿದೆ. ಅಲ್ಲದೆ, ಒಣ ಹವೆ ಎಲ್ಲೆಡೆ ಮುಂದುವರೆದಿದೆ.
ಪ್ರತಿಕೂಲ ಹವಾಮಾನದಿಂದ ಚಳಿಗಾಲ ಶುರುವಾಗಿ ತಿಂಗಳಾದರೂ ವಾಡಿಕೆಯಂತೆ ಇಬ್ಬನಿಯೂ ಬೀಳುತ್ತಿಲ್ಲ ಎಂದು ರೈತ ಸಮುದಾಯ ಆತಂಕಗೊಂಡಿದೆ. ಸಂಜೆ ಹಾಗೂ ಮುಂಜಾನೆ ಸಾಕಷ್ಟು ಇಬ್ಬನಿ ಬೀಳುತ್ತಿತ್ತು. ಇಬ್ಬನಿಗೆ ಕೆಲವೊಂದು ಬೆಳೆಗಳು ಕಾಳು ಕಟ್ಟುತ್ತಿದ್ದವು. ಆದರೆ, ಮೋಡ ಮುಸುಕಿದ ವಾತಾವರಣದಿಂದ ಇಬ್ಬನಿ ಕಡಿಮೆಯಾಗಿದೆ. ಅಲ್ಲದೆ, ಬೆಳೆಗಳಿಗೆ ಕೀಟ ಹಾಗೂ ರೋಗ ಹಾವಳಿ ಹೆಚ್ಚಾಗಿದೆ. ಹೀಗಾಗಿ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.

RELATED ARTICLES

Latest News