Monday, May 6, 2024
Homeರಾಜ್ಯಜ.26ರಿಂದ ಸರ್ಕಾರದ 5ನೇ ಗ್ಯಾರಂಟಿ ಯುವನಿಧಿ ನೋಂದಣಿ ಪ್ರಾರಂಭ

ಜ.26ರಿಂದ ಸರ್ಕಾರದ 5ನೇ ಗ್ಯಾರಂಟಿ ಯುವನಿಧಿ ನೋಂದಣಿ ಪ್ರಾರಂಭ

ಬೆಂಗಳೂರು, ಡಿ.21- ರಾಜ್ಯ ಸರ್ಕಾರದ 5ನೇ ಗ್ಯಾರಂಟಿ ಯುವನಿಧಿ ಯೋಜನೆಯ ನೊಂದಣಿ ಪ್ರಕ್ರಿಯೆ ಡಿ. 26ರಿಂದ ಪ್ರಾರಂಭವಾಗಲಿದೆ. ನಿರುದ್ಯೋಗಿ ಪದವೀಧರರಿಗೆ ಮಾಸಿಕ 3 ಸಾವಿರ ಹಾಗೂ ಡಿಫ್ಲೋಮಾ ತೇರ್ಗಡೆಯಾದವರಿಗೆ 1,500 ರೂ. ನಿರುದ್ಯೋಗ ಭತ್ಯೆ ನೀಡುವ ಯುವನಿಧಿಯನ್ನು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಅೀಧಿನದ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವ ಡಾ. ಶರಣ ಪ್ರಕಾಶ್ ರುದ್ರಪ್ಪ ಪಾಟೀಲ ಅವರು ಪ್ರಸಕ್ತ ಸಾಲಿನಲ್ಲಿ ನಿರುದ್ಯೋಗಿ ಭತ್ಯೆ ನೀಡಲು 250 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ ಎಂದು ಹೇಳಿದರು.

ಯುವನಿಧಿ ಯೋಜನೆಗೆ ರಾಜ್ಯಾದ್ಯಂತ 5,29,153 ಫಲಾನುಭವಿಗಳಿರುವುದು ಅಂದಾಜು ಮಾಡಲಾಗಿದೆ. ಅವರಲ್ಲಿ 4.81 ಲಕ್ಷ ಪದವೀಧರರು ಹಾಗೂ 48,156 ಡಿಫ್ಲೋಮಾ ತೇರ್ಗಡೆ ಹೊಂದಿರುವವರು ಸೇರಿರುತ್ತಾರೆಂದು ಅಂದಾಜಿಸಲಾಗಿದೆ.ಸ್ನಾತಕೋತ್ತರ ಪದವೀಧರರು ಕೂಡ ನಿರುದ್ಯೋಗ ಭತ್ಯೆಗೆ ಅರ್ಹರಾಗಿದ್ದಾರೆ. ನಿರುದ್ಯೋಗ ಭತ್ಯೆಯನ್ನು ಅಭ್ಯರ್ಥಿಗಳ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮಾಡಲಾಗುವುದು ಎಂದರು.

2022-23ನೇ ಶೈಕ್ಷಣಿಕ ಸಾಲಿನಲ್ಲಿ ವ್ಯಾಸಂಗ ಮಾಡಿ ತೇರ್ಗಡೆಯಾಗಿರಬೇಕು. ಕನಿಷ್ಠ 6 ವರ್ಷಗಳ ಕಾಲ ಕರ್ನಾಟಕ ನಿವಾಸಿಯಾಗಿ ವ್ಯಾಸಂಗ ಮಾಡಿರಬೇಕೆಂಬ ಷರತ್ತು ಮೀಸಲಾಗಿದೆ. ಸರ್ಕಾರಿ, ಅನುದಾನಿತ ಸಂಸ್ಥೆ, ಖಾಸಗಿ ವಲಯದಲ್ಲಿ ಉದ್ದೇಶದಲ್ಲಿರುವ ಸ್ವಯಂ ಉದ್ಯೋಗಿಗಳಾಗಿರುವ ಹಾಗೂ ವಿದ್ಯಾಭ್ಯಾಸ ಮುಂದುವರೆಸುವ ಅಭ್ಯರ್ಥಿಗಳು ಯುವನಿಧಿ ಯೋಜನೆಯಡಿ ನಿರುದ್ಯೋಗ ಭತ್ಯೆ ಪಡೆಯಲು ಅರ್ಹರಾಗಿವುದಿಲ್ಲ. ಆಸಕ್ತ ಅರ್ಹ ಅಭ್ಯರ್ಥಿಗಳು ಸೇವಾ ಸಿಂಧು ಜಾಲತಾಣದ ಮೂಲಕ ಅರ್ಜಿ ಸಲ್ಲಿಸಬೇಕು.

ನಿಗಮ-ಮಂಡಳಿಗಳ ನೇಮಕಾತಿ ವಿಷಯದಲ್ಲಿ ಕಾಂಗ್ರೆಸ್ ಶಾಸಕರಿಗೆ ಮತ್ತೆ ನಿರಾಸೆ

ಶೈಕ್ಷಣಿಕ ಪ್ರಮಾಣ ಪತ್ರಗಳನ್ನು ಎನ್‍ಎಡಿ ಪೋರ್ಟಲ್‍ನಲ್ಲಿ ಸಂಬಂಸಿದ ವಿಶ್ವವಿದ್ಯಾಲಯ, ಶೈಕ್ಷಣಿಕ ಸಂಸ್ಥೆ, ಮಂಡಳಿಗಳು ನೀಡಿರುವುದನ್ನು ಖಚಿತಪಡಿಸಿಕೊಳ್ಳಲು ನೊಂದಣಿ ಸಂಖ್ಯೆಯನ್ನು ದಾಖಲಿಸಿ ಪರಿಶೀಲಿಸಿಕೊಳ್ಳಬೇಕು ಎಂದು ಅವರು ಹೇಳಿದರು. ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರಗಳು, ಗ್ರಾಮ ಒನ್ ಕೇಂದ್ರಗಳ ಮೂಲಕವೂ ಸೇವಾಸಿಂಧು ಜಾಲ ತಾಣದ ಮೂಲಕ ಅರ್ಜಿ ಸಲ್ಲಿಸಬಹುದು. ಆಧಾರ್ ಸಂಖ್ಯೆ ನಮೂದಿಸಿ ಒಟಿಪಿ ಪಡೆದು ಕೆವೈಸಿ ಪಡೆದುಕೊಳ್ಳಬೇಕು. ಕರ್ನಾಟಕದ ನಿವಾಸಿಯೆಂದು ರೂಪಿಸಲು ಎಸ್‍ಎಸ್‍ಎಲ್‍ಸಿ, ಪಿಯುಸಿ ಪ್ರಮಾಣಪತ್ರ, ರೇಷನ್ ಕಾರ್ಡ್ ಸಂಖ್ಯೆಗಳನ್ನು ಒದಗಿಸಬೇಕು. ಜೊತೆಗೆ ಜಾತಿ, ಪ್ರವರ್ಗಗಳನ್ನು ಆಯ್ಕೆ ಮಾಡಿಕೊಳ್ಳಬೇಕು.

ಅರ್ಜಿ ಸಲ್ಲಿಕೆಯು ಸಮರ್ಪಕವಾಗಿ ಸ್ವೀಕೃತವಾದ ನಂತರ ಮೊಬೈಲ್‍ಗೆ ಸಂದೇಶ ರವಾನೆಯಾಗಲಿದೆ ಎಂದರು.
ಫಲಿತಾಂಶ ಪ್ರಕಟವಾದ 180 ದಿನ ಪೂರ್ಣವಾದ ನಂತರ ಯುವನಿಗೆ ಅರ್ಜಿಸಲ್ಲಿಸಬಹುದು. 2 ವರ್ಷ ಅಥವಾ ಉದ್ಯೋಗ ದೊರೆಯುವವರೆಗೂ ನಿರುದ್ಯೋಗ ಭತ್ಯೆ ಪಡೆಯಬಹುದಾಗಿದೆ. ಯುವನಿಧಿ ನೊಂದಣಿ ಪ್ರಕ್ರಿಯೆಗೆ ಡಿ. 26ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಚಾಲನೆ ನೀಡಲಿದ್ದಾರೆ ಎಂದು ಅವರು ತಿಳಿಸಿದರು.

ಜನವರಿ 12ರಂದು ಶಿವಮೊಗ್ಗದಲ್ಲಿ ಬೃಹತ್ ಸಮಾವೇಶ ನಡೆಸಿ ಯುವನಿಧಿ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮೂಲಕ ಚಾಲನೆ ನೀಡಲಾಗುತ್ತದೆ ಎಂದರು. ಲೋಕಸಭಾ ಚುನಾವಣೆ ನಂತರವೂ ಐದು ಗ್ಯಾರಂಟಿ ಯೋಜನೆ ಮುಂದುವರೆಯುತ್ತದೆ. ಈ ಬಗ್ಗೆ ಅಪಪ್ರಚಾರಕ್ಕೆ ಯಾರೂ ಕಿವಿಗೊಡಬಾರದು ಎಂದು ಅವರು ಹೇಳಿದರು.

RELATED ARTICLES

Latest News