Thursday, May 2, 2024
Homeಕ್ರೀಡಾ ಸುದ್ದಿಸ್ಪೋಟಕ ಆಟದಿಂದ ಗಮನ ಸೆಳೆದ ರಾಹುಲ್‍ ದ್ರಾವಿಡ್ ಪುತ್ರ

ಸ್ಪೋಟಕ ಆಟದಿಂದ ಗಮನ ಸೆಳೆದ ರಾಹುಲ್‍ ದ್ರಾವಿಡ್ ಪುತ್ರ

ಬೆಂಗಳೂರು, ಡಿ.21-ಟೀಮ್ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ ಅವರ ಸಿಡಿಲಬ್ಬರದ ಆಟದ ನೆರವಿನಿಂದ ಕೋಚ್ ಬೆಹರ್ ಕ್ರಿಕೆಟ್ ಟೂರ್ನಿಯಲ್ಲಿ ಜಮ್ಮು ಕಾಶ್ಮೀರ ವಿರುದ್ಧದ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 130 ರನ್‍ಗಳ ಭರ್ಜರಿ ಗೆಲುವು ಸಾಧಿಸಿದೆ.

ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕರ್ನಾಟಕದ ಪರ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಸಮಿತ್ ದ್ರಾವಿಡ್ 13 ಮನಮೋಹಕ ಬೌಂಡರಿ ಹಾಗೂ 1 ಭರ್ಜರಿ ಸಿಕ್ಸರ್ ನೆರವಿನಿಂದ 98 ರನ್ ಗಳಿಸಿ ಶತಕ ವಂಚಿತರಾದರೂ, 5ನೇ ವಿಕೆಟ್‍ಗೆ ಕಾರ್ತಿಕೇಯ ಕೆ.ಪಿ. (163 ರನ್)ಯೊಂದಿಗೆ ಜೊತೆಗೂಡಿ 233 ರನ್‍ಗಳ ಜೊತೆಯಾಟ ನೀಡಿದರು.

ನಿಗಮ-ಮಂಡಳಿಗಳ ನೇಮಕಾತಿ ವಿಷಯದಲ್ಲಿ ಕಾಂಗ್ರೆಸ್ ಶಾಸಕರಿಗೆ ಮತ್ತೆ ನಿರಾಸೆ

ಸಮಿತ್ ಹಾಗೂ ಕಾರ್ತಿಕೇಯ ಅವರ ಸೋಟಕ ಆಟದ ನೆರವಿನಿಂದ ಕರ್ನಾಟಕ ಮೊದಲ ಇನಿಂಗ್ಸ್‍ನಲ್ಲಿ 480 ರನ್‍ಗಳಿಗೆ 5 ವಿಕೆಟ್ ಕಳೆದುಕೊಂಡು ಡಿಕ್ಲೇರ್ಡ್ ಮಾಡಿಕೊಂಡಿತು. ಜಮ್ಮು ಕಾಶ್ಮೀರ ತನ್ನ ಮೊದಲ ಇನಿಂಗ್ಸ್ 170 ರನ್ ಗಳಿಸಿದರೆ, 2ನೇ ಇನಿಂಗ್ಸ್‍ನಲ್ಲೂ ಬ್ಯಾಟಿಂಗ್ ವೈಫಲ್ಯಅನುಭವಿಸಿ 180 ರನ್‍ಗಳಿಗೆ ಅಲೌಟ್ ಆಗುವ ಮೂಲಕ ಇನ್ನಿಂಗ್ಸ್ ಹಾಗೂ 130 ರನ್‍ಗಳಿಂದ ಸೋಲು ಕಂಡಿತು.

RELATED ARTICLES

Latest News